ಅನನ್ಯಾ ಭಟ್ ನಾಪತ್ತೆ ಪ್ರಕರಣ: ಎಸ್​ಐಟಿಯಿಂದ ನೋಟಿಸ್ ಬರ್ತಿದ್ದಂತೆಯೇ ಕೇಸ್ ವಾಪಸ್ ಪಡೆಯುವೆ ಎಂದ ಸುಜಾತಾ ಭಟ್

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣ ದಿನಕ್ಕೊಂದು ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಇತ್ತ ಅನನ್ಯಾ ಭಟ್ ಪ್ರಕರಣದ ತನಿಖೆಯನ್ನು ಎಸ್ಐಟಿ ಚುರುಕುಗೊಳಿಸಿದೆ. ಇದರ ಮಧ್ಯೆ ಸುಜಾತಾ ಭಟ್,​ ಕೇಸ್ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಸದ್ಯ ಅವರ ಈ ನಡೆ ಮತ್ತಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಅನನ್ಯಾ ಭಟ್ ನಾಪತ್ತೆ ಪ್ರಕರಣ: ಎಸ್​ಐಟಿಯಿಂದ ನೋಟಿಸ್ ಬರ್ತಿದ್ದಂತೆಯೇ ಕೇಸ್ ವಾಪಸ್ ಪಡೆಯುವೆ ಎಂದ ಸುಜಾತಾ ಭಟ್
ಸುಜಾತ ಭಟ್​, ಅನನ್ಯಾ ಭಟ್
Edited By:

Updated on: Aug 22, 2025 | 10:08 AM

ಮಂಗಳೂರು, ಆಗಸ್ಟ್​ 22: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಇತ್ತ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ (Ananya Bhat) ನಾಪತ್ತೆ ಕೇಸ್​ನಲ್ಲಿ ಕೂಡ ಒಂದೊಂದೆ ಸತ್ಯಗಳು ಹೊರಬರುತ್ತಿವೆ. ಇತ್ತೀಚೆಗೆ ಸುಜಾತಾ ಭಟ್ (Sujatha Bhat) ತಮ್ಮ ಮಗಳೆಂದು ಅನನ್ಯಾ ಭಟ್​ ಫೋಟೋವೊಂದನ್ನು​ ತೋರಿಸಿದ್ದರು. ಆದರೆ ಅದು ಅನನ್ಯಾ ಭಟ್ ಅಲ್ಲ, ಬದಲಿಗೆ ವಾಸಂತಿ ಎಂಬ ಆರೋಪಗಳು ಕೇಳಿಬಂದಿದ್ದವು. ಹೀಗಿರುವಾಗಲೇ ಕೇಸ್ ವಾಪಸ್ ಪಡೆಯುವುದಾಗಿ ಸುಜಾತಾ ಭಟ್ ಹೇಳಿದ್ದು, ಅವರ ಈ ನಡೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಅನನ್ಯಾ ಭಟ್ ಪ್ರಕರಣವನ್ನು ಎಸ್ಐಟಿ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಪ್ರಕರಣದ ವಿವರ ನೀಡುವಂತೆ ಸುಜಾತಾ ಭಟ್​ಗೆ ನೋಟಿಸ್ ನೀಡಿದೆ. ಆದರೆ ಎಸ್ಐಟಿ ನೋಟಿಸ್​ಗೆ ಉತ್ತರಿಸದ ಸುಜಾತಾ ಭಟ್, ಅವರದ್ದೇ ಎನ್ನಲಾದ ಆಡಿಯೋ ಹರಿಬಿಟ್ಟು ಕೇಸ್ ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ. ಆದರೆ ಕೇಸ್ ಹಿಂಪಡೆಯುವ ಬಗ್ಗೆ ಎಸ್​​ಐಟಿಗೆ ಹೇಳಿಲ್ಲವೆಂದು ಟಿವಿ9ಗೆ ಎಸ್​​ಐಟಿ ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: ಧರ್ಮಸ್ಥಳ ಕೇಸ್​: ‘ಸುಜಾತಾ ಭಟ್ ತೋರಿಸಿದ್ದು ಅನನ್ಯಾ ಫೋಟೊ ಅಲ್ಲ’! ಮತ್ಯಾರದ್ದು? ಇಲ್ಲಿದೆ ನೋಡಿ

ಇದನ್ನೂ ಓದಿ
ಧರ್ಮಸ್ಥಳ :ಬಂಧನದ ಭೀತಿಯಲ್ಲಿದ್ದ ಯೂಟ್ಯೂಬರ್ ಸಮೀರ್ ಎಂಡಿಗೆ ಬಿಗ್ ರಿಲೀಫ್
ಧರ್ಮಸ್ಥಳ ಕೇಸ್​:ಯೂಟ್ಯೂಬರ್‌ ಬಂಧನಕ್ಕೆ ಬಲೆ ಬೀಸಿದ ಪೊಲೀಸರು, ಸಮೀರ್ ಪರಾರಿ
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ಅನನ್ಯ ಭಟ್​ ಪ್ರಕರಣ ಎಸ್​ಐಟಿಗೆ ಹಸ್ತಾಂತರ

ಈಗಾಗಲೇ ಕೇಸ್ ಬಗ್ಗೆ ಒಂದು ಹಂತದ ಮಾಹಿತಿ ಪಡೆದಿರುವ ಎಸ್‌ಐಟಿ, ಸುಜಾತಾ ಭಟ್‌ ಹಿನ್ನೆಲೆ, ಕುಟುಂಬದ ಮಾಹಿತಿ, 2003ರಲ್ಲಿ ಅನನ್ಯಾ ಭಟ್‌ ಕಾಣೆಯಾಗಿದ್ದ ಬಗ್ಗೆ ಸಲ್ಲಿಸಿದ್ದ ದೂರು, ಇದೇ ಜುಲೈ 15ಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಸಲ್ಲಿಸಿದ್ದ ದೂರು ಎಲ್ಲದರ ಮಾಹಿತಿ ಪಡೆದುಕೊಂಡಿದೆ.

ಹೋರಾಟಗಾರರಿಗೂ ಯಾಮಾರಿಸಿದರಾ ಸುಜಾತಾ ಭಟ್?

ಇನ್ನು ಮಗಳು ಅನನ್ಯಾ ಭಟ್ ನಾಪತ್ತೆ ವಿಚಾರವಾಗಿ ಸುಜಾತಾ ಭಟ್​​ ಹೋರಾಟಗಾರರಿಗೂ ಯಾಮಾರಿಸಿದರಾ ಎಂಬ ಅನುಮಾನುಗಳು ಸಹ ಮೂಡಿವೆ. ದೂರಿನಲ್ಲಿ ಹೇಳಿರುವುದನ್ನೇ ಹೋರಾಟಗಾರರಿಗೂ ಸುಜಾತಾ ಹೇಳಿದ್ದು, ಸತ್ಯ ಎಂದು ನಾಯಕರು ನಂಬಿದ್ದರು. ಅಷ್ಟೇ ಅಲ್ಲದೆ ಕೆಲ ದಿನಗಳ ಕಾಲ ಮಹೇಶ್ ಶೆಟ್ಟಿ ತಿಮರೋಡಿ ‌ಮನೆಯಲ್ಲಿಯೇ ಸುಜಾತಾ ತಂಗಿದ್ದರು.

ಸುಜಾತಾ ಅವರಿಗೆ ಮಗಳು ಇದ್ದಳು ಎಂಬ ಬಗ್ಗೆ ದಾಖಲೆ ತೆಗೆಯಲು ಹೋರಾಟಗಾರರು ಮುಂದಾಗಿದ್ದರು. ಆದರೆ ದಾಖಲೆ ತೆಗೆಯಲು ಹಿಂದೇಟು ಅವರು ಹಾಕಿದ್ದರು. ಅದಾದ ಬಳಿಕ ಒಂದೊಂದಾಗಿ ಅಸಲಿಯತ್ತು ಬಹಿರಂಗಗೊಳ್ಳುತ್ತಿದ್ದಂತೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಿಂದ ಸುಜಾತಾ ಭಟ್​ಗೆ ಗೇಟ್ ಪಾಸ್​ ನೀಡಿದ್ದಾಗಿ ಟಿವಿ‌9ಗೆ ಹೋರಾಟಗಾರರ ತಂಡದ ಮೂಲಗಳಿಂದ ಮಾಹಿತಿ ನೀಡಲಾಗಿದೆ.

ಆಗಸ್ಟ್ 19ರಂದು ಬೆಳ್ತಂಗಡಿ ತಾಲೂಕಿನ ಉಜಿರೆಯ ತಿಮರೋಡಿಯಿಂದ ತೆರಳಿದ್ದ ಸುಜಾತಾ, ಹೋರಾಟಕ್ಕೆ ಹಿನ್ನಡೆ ಸಾಧ್ಯತೆ ಹಿನ್ನೆಲೆ ರಾತ್ರೋರಾತ್ರಿ ಬೆಂಗಳೂರಿಗೆ ತೆರಳಿದ್ದರು. ದಾಖಲೆಗಳಿದ್ದರೆ ಎಸ್ಐಟಿ‌ ಅಧಿಕಾರಿಗಳಿಗೆ ನೀಡಿ ಎಂದು ನಾಯಕರು ಹೇಳಿದ್ದಾರೆ.

ಪ್ರಕರಣದ ಸೃಷ್ಟಿಕರ್ತರಿಗೂ ನಡುಕು ಹುಟ್ಟಿಸುತ್ತಾ ಎಸ್ಐಟಿ ತನಿಖೆ?

ಪ್ರಕರಣ ಎಸ್ಐಟಿಗೆ ಹಸ್ತಾಂತರ ಬೆನ್ನಲ್ಲೇ ಅಧಿಕಾರಿಗಳು ಅಲರ್ಟ್ ಆಗಿದ್ದು, ಸುಜಾತಾ ಭಟ್ ವಿಚಾರಣೆ ನಡೆಸಲಿದ್ದಾರೆ. ಆ ಮೂಲಕ ಅನನ್ಯಾ ಪ್ರಕರಣದ ಪೂರ್ವಾಪರ ಕೆದಕಲು ಎಸ್ಐಟಿ ಮುಂದಾಗಿದೆ. ಶವ ಹೂತ ಕೇಸ್​ನಲ್ಲಿ ಅನನ್ಯಾ ಕೇಸ್ ಭಾರಿ ಚರ್ಚೆ ಹುಟ್ಟುಹಾಕಿತ್ತು. ಈಗಾಗಲೇ ಪ್ರಕರಣದ ಆಳ ಅಗಲ ತನಿಖೆ ನಡೆಸಿದ್ದು, ಅನನ್ಯಾ ಭಟ್ ಅಸ್ತಿತ್ವದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ, ಅನನ್ಯ ಭಟ್ ನನ್ನ ಮಗಳು, ನಾನೇ ಹೆತ್ತಿದ್ದು: ಸುಜಾತ ಭಟ್

ಪ್ರಕರಣವೇ ಸುಳ್ಳು ಎಂಬ ಬಗ್ಗೆ ಎಸ್​​ಐಟಿ ಅನೇಕ ಮಾಹಿತಿ ಸಂಗ್ರಹಿಸಿದೆ. ಸಂಗ್ರಹಿಸಿದ ಮಾಹಿತಿಗಳ ಆಧಾರದಲ್ಲಿ ಸುಜಾತಾ ವಿಚಾರಣೆ ಸಾಧ್ಯತೆ ಇದೆ. ಒಂದು ವೇಳೆ ಸುಳ್ಳು ದೂರು ಸಾಬೀತಾದರೆ ಸುಜಾತಾ ಭಟ್ ವಿರುದ್ಧ ಕ್ರಮ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:17 am, Fri, 22 August 25