AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಮಹಿಳೆಯ ಜಡೆಗೆ ಕೈ ಹಾಕಿದ ಅನ್ಯಕೋಮಿನ ವ್ಯಕ್ತಿ; ವಿಡಿಯೋ ವೈರಲ್​

ಅನ್ಯಕೋಮಿನ ವ್ಯಕ್ತಿ ಮಹಿಳೆಯ ಜಡೆಗೆ ಕೈ ಹಾಕಿರುವ ಘಟನೆ ಮಂಗಳೂರು-ಧರ್ಮಸ್ಥಳ ಮಾರ್ಗವಾಗಿ ಸಂಚರಿಸುವ ಕೆಎಸ್​​ಆರ್​ಟಿಸಿ ಬಸ್​​​​​ನಲ್ಲಿ ನಡೆದಿದೆ.

ಮಂಗಳೂರು: ಮಹಿಳೆಯ ಜಡೆಗೆ ಕೈ ಹಾಕಿದ ಅನ್ಯಕೋಮಿನ ವ್ಯಕ್ತಿ; ವಿಡಿಯೋ ವೈರಲ್​
ಮಹಿಳೆಯ ಜಡೆಗೆ ಕೈ ಹಾಕಿದ ವ್ಯಕ್ತಿ (ಎಡಚಿತ್ರ) ಪೊಲೀಸರಿಗೆ ದೂರು (ಬಲಚಿತ್ರ)
Follow us
ವಿವೇಕ ಬಿರಾದಾರ
|

Updated on:May 26, 2023 | 6:38 PM

ಮಂಗಳೂರು: ಅನ್ಯಕೋಮಿನ ವ್ಯಕ್ತಿ ಮಹಿಳೆಯ (Woman) ಜಡೆಗೆ ಕೈ ಹಾಕಿರುವ ಘಟನೆ ಮಂಗಳೂರು-ಧರ್ಮಸ್ಥಳ ಮಾರ್ಗವಾಗಿ ಸಂಚರಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್​​​​​ನಲ್ಲಿ ನಡೆದಿದೆ. ಅನ್ಯಕೋಮಿನ ವ್ಯಕ್ತಿ ಮಹಿಳೆಯ ಜಡೆಯನ್ನು ಸವರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಬಗ್ಗೆ ಹಿಂದೂ ಜಾಗರಣ ವೇದಿಕೆ (Hindu Jagarana Vedike) ಜಿಲ್ಲಾಧ್ಯಕ್ಷ ಬಂಟ್ವಾಳ ನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಜಡೆ ಸವರಿದ ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಆರೋಪಿ ಹಮೀದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ನಡೆದ ಘಟನೆ

ಮಂಗಳೂರು-ಧರ್ಮಸ್ಥಳ ಮಾರ್ಗವಾಗಿ ಸಂಚರಿಸುತ್ತಿದ್ದ ಕೆಎಸ್​​ಆರ್​ಟಿಸಿ ಬಸ್​​ನಲ್ಲಿ ಆರೋಪಿ ಹಮೀದ್ ತನ್ನ ಮುಂದುಗಡೆಯ ಸೀಟಿನಲ್ಲಿ ಕುಳಿತಿದ್ದ ಮಹಿಳೆ ಜಡೆ ಸವರಿದ್ದಾನೆ. ಈ ವೇಳೆ ಸಹ ಪ್ರಯಾಣಿಕ ದೃಶ್ಯವನ್ನು ಮೊಬೈಲ್​​ನಲ್ಲಿ ಸೆರೆಹಿಡಿದಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಇದನ್ನು ಕಂಡ ಹಿಂದೂ ಜಾಗರಣ ವೇದಿಕೆ ಪೊಲೀಸರಿಗೆ ದೂರು ನೀಡಿದೆ. “ಮಂಗಳೂರು-ಧರ್ಮಸ್ಥಳ ಮಾರ್ಗವಾಗಿ ಚಲಿಸುವ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಕಳಿತ ಮಹಿಳೆಯ ಜಡೆ ಎಳೆದು ಬೆನ್ನಿನ ಹಿಂಬದಿಯಿಂದ ಸ್ಪರ್ಶಿಸಿ ಹಮೀದ್​ ಎಂಬಾತ ತೊಂದರೆ ನೀಡಿದ್ದಾನೆ” ಎಂದು ಹಿಂದೂ ಜಾಗರಣ ವೇದಿಕೆ ದೂರಿನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: ಎಫ್​ಐಆರ್​​ ಆಯ್ತು, ಹರೀಶ್ ಪೂಂಜಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಮುಂದಾದ ಕಾಂಗ್ರೆಸ್​

ಮುಸ್ಲಿಂ ಯುವತಿ ಜೊತೆ ಸ್ನೇಹ, ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನೈತಿಕ ಪೊಲೀಸ್ ಗಿರಿ ಘಟನೆ ನಡೆದಿದೆ. ಬಿಜೆಪಿ, ಭಜರಂಗದಳದ ಹಿಂದೂ ಕಾರ್ಯಕರ್ತ ಅಜಿತ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಮುಸ್ಲಿಂ ಯುವತಿಯ ಜೊತೆ ಸ್ನೇಹ ಬೆಳೆಸಿದ ಹಿನ್ನೆಲೆ 30 ಜನ ಮುಸ್ಲಿಂ ಯುವಕರ ಗುಂಪು ಹಲ್ಲೆ ಮಾಡಿದೆ.

ಯುವತಿಯ ಜೊತೆ ರಸ್ತೆಯಲ್ಲಿ ಹೋಗುವಾಗ 30 ಜನರ ಯುವಕರ ಗುಂಪು ಹಿಂದೂ ಕರ್ಯಕರ್ತನ ಮೇಲೆ ದಾಳಿ ಮಾಡಿ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಅಜಿತ್ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಬಗ್ಗೆ ಅನ್ಯಕೋಮಿನ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್

ಪ್ರಕರಣಕ್ಕೆ ಸಂಬಂಧಿಸಿದ ಕುತೂಹಲಕಾರಿ ಮಾಹಿತಿ ಬಹಿರಂಗವಾಗಿದ್ದು, ಯುವತಿಯ ಮನೆಯಲ್ಲೇ ಅಜಿತ್ ಸಿಕ್ಕಿಬಿದ್ದಿದ್ದ. ಯುವತಿಯ ಮನೆಯ ಕಬೋರ್ಡ್​​​ನಲ್ಲಿ ಅವಿತು ಕುಳಿತಿದ್ದ ಎಂಬ ವಿಚಾರ ಬಯಲಾಗಿದೆ.ಅಜಿತ್ ಕಬೋರ್ಡ್​​​ನಲ್ಲಿ ಅವಿತು ಕುಳಿತಿರುವುದು ಎನ್ನಲಾದ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:25 pm, Fri, 26 May 23