ಪೂಜಾರಿ ನಡಿಗೆ ಬೆನ್ನಲ್ಲೇ ವಿವಾದಿತ ವೃತ್ತಕ್ಕೆ ‘ನಾರಾಯಣ ಗುರು ವೃತ್ತ’ ಎಂದು ನಾಮಫಲಕ ಅಳವಡಿಸಿದ ಬಜರಂಗ ದಳ ಕಾರ್ಯಕರ್ತರು!

ಪೂಜಾರಿ ನಡಿಗೆ ಬೆನ್ನಲ್ಲೇ ವಿವಾದಿತ ವೃತ್ತಕ್ಕೆ ‘ನಾರಾಯಣ ಗುರು ವೃತ್ತ’ ಎಂದು ನಾಮಫಲಕ ಅಳವಡಿಸಿದ ಬಜರಂಗ ದಳ ಕಾರ್ಯಕರ್ತರು!
ಪೂಜಾರಿ ನಡಿಗೆ ಬೆನ್ನಲ್ಲೇ ವಿವಾದಿತ ವೃತ್ತಕ್ಕೆ ‘ನಾರಾಯಣ ಗುರು ವೃತ್ತ’ ಎಂದು ನಾಮಫಲಕ ಅಳವಡಿಸಿದ ಬಜರಂಗ ದಳ ಕಾರ್ಯಕರ್ತರು!

ಬಜರಂಗದಳದ ಕಾರ್ಯಕರ್ತರು ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ವೃತ್ತ ಅಂತ ನಾಮಫಲಕ ಅಳವಡಿಸಿದ್ದಾರೆ. ಸದ್ಯ ಮಂಗಳೂರು ಪಾಲಿಕೆ ಲೇಡಿಹಿಲ್ ವೃತ್ತದ ಹೆಸರು ಬದಲಾವಣೆ ಸಂಬಂಧ ಯಥಾಸ್ಥಿತಿ ಕಾಯ್ದುಕೊಂಡಿದೆ.

TV9kannada Web Team

| Edited By: Ayesha Banu

Jan 26, 2022 | 2:19 PM

ಮಂಗಳೂರು: ಕೇಂದ್ರ ಸರ್ಕಾರದಿಂದ ನಾರಾಯಣ ಗುರು ಟ್ಯಾಬ್ಲೋ ತಿರಸ್ಕಾರ ಖಂಡಿಸಿ ಜನಾರ್ದನ ಪೂಜಾರಿ ನೇತೃತ್ವದ ಸ್ವಾಭಿಮಾನಿ ನಡಿಗೆ ನಡೆಯುತ್ತಿದೆ. ಈ ಸಂಬಂಧಿಸಿ ಪೂಜಾರಿ ನಡಿಗೆ ಬೆನ್ನಲ್ಲೇ ವಿವಾದಿತ ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ‘ನಾರಾಯಣ ಗುರು ವೃತ್ತ’ ಎಂದು ನಾಮಫಲಕ ಅಳವಡಿಸಲಾಗಿದೆ.

ಬಜರಂಗದಳದ ಕಾರ್ಯಕರ್ತರು ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ವೃತ್ತ ಅಂತ ನಾಮಫಲಕ ಅಳವಡಿಸಿದ್ದಾರೆ. ಸದ್ಯ ಮಂಗಳೂರು ಪಾಲಿಕೆ ಲೇಡಿಹಿಲ್ ವೃತ್ತದ ಹೆಸರು ಬದಲಾವಣೆ ಸಂಬಂಧ ಯಥಾಸ್ಥಿತಿ ಕಾಯ್ದುಕೊಂಡಿದೆ. ಹಲವು ವರ್ಷಗಳಿಂದ ಲೇಡಿಹಿಲ್ ವೃತ್ತ ಅಂತಾನೆ ಅಧಿಕೃತ ದಾಖಲೆಗಳಿವೆ. ಆದ್ರೆ ವೃತ್ತದ ಹೆಸರು ನಾರಾಯಣ ಗುರು ವೃತ್ತ ಅಂತ ಬದಲಿಸಲು ಬಿಜೆಪಿ ಪ್ರಸ್ತಾಪಿಸಿದೆ. ಕಾಂಗ್ರೆಸ್ ಪಾಲಿಕೆ ಸದಸ್ಯರಿಂದ ನಾರಾಯಣ ಗುರು ಹೆಸರಿಡಲು ಲಿಖಿತ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಪಾಲಿಕೆ ಯಾವುದೇ ನಿರ್ಧಾರಕ್ಕೆ ಬಾರದೇ ಯಥಾಸ್ಥಿತಿ ಕಾಯ್ದುಕೊಂಡಿದೆ. ಈ ವಿವಾದದ ಬೆನ್ನಲ್ಲೇ ಬಜರಂಗದಳ ನಾರಾಯಣ ಗುರು ವೃತ್ತ ಎಂದು ನಾಮಫಲಕ ಅಳವಡಿಸಿದೆ.

ಇದನ್ನೂ ಓದಿ: Sonu Nigam: ‘ಒಂದು ವೇಳೆ ಅವರಿದ್ದಿದ್ದರೆ..’; ಪದ್ಮಶ್ರೀ ಪ್ರಶಸ್ತಿಯನ್ನು ತಾಯಿಗೆ ಅರ್ಪಿಸಿ ಸೋನು ನಿಗಮ್ ಮಾತು

10 ತಿಂಗಳಲ್ಲೇ 7 ಸಾವಿರ ಟನ್‌ ಮೀನು ಉತ್ಪಾದಿಸಿ ನಂ 1 ಸ್ಥಾನ ಪಡೆದ ಬಿಸಿಲ ಜಿಲ್ಲೆ ಯಾದಗಿರಿ

Follow us on

Related Stories

Most Read Stories

Click on your DTH Provider to Add TV9 Kannada