AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ, ದಕ್ಷಿಣ ಕನ್ನಡದಲ್ಲಿ ಚಂಪಾ ಷಷ್ಠಿ ಸಂಭ್ರಮ; ಕುಕ್ಕೆ ಸುಬ್ರಹ್ಮಣ್ಯ ರಥೋತ್ಸವದಲ್ಲಿ ಭಕ್ತರು ಭಾಗಿ

ಇಂದು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿಯೂ ಚಂಪಾ ಷಷ್ಠಿ ನೆರವೇರಿತು. ವೃಶ್ಚಿಕ ಲಗ್ನದ ಸುಮೂಹೂರ್ತದಲ್ಲಿ ಸುಬ್ರಹ್ಮಣ್ಯ ದೇವರ ರಥಾರೋಹಣ ನೆರವೇರಿತು. ಈ ಬಾರಿ ಕೂಡ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಡೆ ಸ್ನಾನಕ್ಕೆ ಅವಕಾಶ ನೀಡಲಿಲ್ಲ.

ಉಡುಪಿ, ದಕ್ಷಿಣ ಕನ್ನಡದಲ್ಲಿ ಚಂಪಾ ಷಷ್ಠಿ ಸಂಭ್ರಮ; ಕುಕ್ಕೆ ಸುಬ್ರಹ್ಮಣ್ಯ ರಥೋತ್ಸವದಲ್ಲಿ ಭಕ್ತರು ಭಾಗಿ
ರಥೋತ್ಸವ
TV9 Web
| Updated By: ಸುಷ್ಮಾ ಚಕ್ರೆ|

Updated on: Dec 09, 2021 | 6:48 PM

Share

ಉಡುಪಿ: ಉಡುಪಿ ಸುತ್ತಮುತ್ತಲಿನ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಷಷ್ಠಿ ಪ್ರಯುಕ್ತ ಇಂದು ಎಡೆಸ್ನಾನ ನಡೆಯಿತು. ಪೇಜಾವರ ಮಠದ ಆಡಳಿತಕ್ಕೆ ಒಳಪಟ್ಟ ಮುಚ್ಲುಕೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಪ್ರಯುಕ್ತ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದರು. ಕುಕ್ಕಿಕಟ್ಟೆಯ ಮುಚ್ಲಕೋಡು ದೇವಸ್ಥಾನದಲ್ಲಿ ಇಂದು ಬೆಳಗ್ಗೆ ದೇವರ ಪೂಜೆ, ಪಲ್ಲಪೂಜೆ, ಪ್ರಧಾನ ಕಲಶಾಭಿಷೇಕ, ರಥಸಂಪ್ರೋಕ್ಷಣೆ, ರಥಾರೋಹಣ ನಡೆಯಿತು. ನಂತರ ದೇವಸ್ಥಾನದ ಒಳಗೆ ಬ್ರಾಹ್ಮಣರು ಮತ್ತು ಬ್ರಾಹ್ಮಣ ಸುಹಾಸಿನಿಯರಿಗೆ ಅನ್ನಸಂತರ್ಪಣೆ ನಡೆಯಿತು.

ಸುಬ್ರಹ್ಮಣ್ಯ ದೇವರಿಗೆ ಆರು ಮುಖ (ಷಣ್ಮುಖ) ಇರುವುದರಿಂದ ಆರು ಎಲೆಗಳಲ್ಲಿ ನೈವೇದ್ಯ ಹಾಗೂ ಅಷ್ಟ ದಿಕ್ಪಾಲಕರಿಗೆ ನೈವೇದ್ಯಗಳನ್ನು ಸಮರ್ಪಿಸಲಾಗಿದ್ದು, ಈ ಎಲೆಗಳ ಮೇಲೆ ಭಕ್ತರು ಎಡೆಸ್ನಾನ ಮಾಡಿದರು. ಮಹಿಳೆಯರು ಸೇರಿದಂತೆ ಆರು ಮಂದಿ ಎಡೆಸ್ನಾನ ಸೇವೆಯಲ್ಲಿ ಪಾಲ್ಗೊಂಡರು. ಉಳಿದಂತೆ ತಾಂಗೋಡು, ಮಾಂಗೊಡು, ಮುಚ್ಲಕೋಡು ಸೇರಿದಂತೆ ಸುತ್ತಮುತ್ತಲ ಸುಬ್ರಹ್ಮಣ್ಯ, ವಾಸುಕಿ ದೇವಸ್ಥಾನಗಳಲ್ಲೂ ಷಷ್ಠಿ ಮಹೋತ್ಸವ ಮತ್ತು ಎಡೆಸ್ನಾನಗಳು ನಡೆದವು.

ದಕ್ಷಿಣ ಕನ್ನಡದಲ್ಲೂ ಚಂಪಾ ಷಷ್ಠಿ ಸಂಭ್ರಮ: ಇಂದು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿಯೂ ಚಂಪಾ ಷಷ್ಠಿ ನೆರವೇರಿತು. ವೃಶ್ಚಿಕ ಲಗ್ನದ ಸುಮೂಹೂರ್ತದಲ್ಲಿ ಸುಬ್ರಹ್ಮಣ್ಯ ದೇವರ ರಥಾರೋಹಣ ನೆರವೇರಿತು. ಈ ಬಾರಿ ಕೂಡ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಡೆ ಸ್ನಾನಕ್ಕೆ ಅವಕಾಶ ನೀಡಲಿಲ್ಲ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಇಂದು ಎಡೆ ಸ್ನಾನಕ್ಕೆ ಅವಕಾಶ ನೀಡಲಿಲ್ಲ. ಆದ್ದರಿಂದ ಭಕ್ತರು ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಬೀದಿಯಲ್ಲಿ ಉರುಳು ಸೇವೆ ಮಾಡಿ ಹರಕೆ ತೀರಿಸಿದರು.

ಇನ್ನು, ಹಾಸನ ಜಿಲ್ಲೆಯಲ್ಲಿ ನಾಗಷಷ್ಠಿ ಹಿನ್ನೆಲೆಯಲ್ಲಿ ದಕ್ಷಿಣ ಕಾಶಿ ರಾಮನಾಥಪುರದಲ್ಲಿ ವಿಜೃಂಭಣೆಯ ರಥೋತ್ಸವ ನಡೆಯಿತು. ಕೊವಿಡ್ ಆತಂಕದ ನಡುವೆಯೂ ಸಾವಿರಾರು ಜನರಿಂದ ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿದರು. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರಾಮನಾಥಪುರದಲ್ಲಿ ಪ್ರತಿ ವರ್ಷ ಒಂದು ತಿಂಗಳ ಕಾಲ ನಡೆಯುತ್ತಿದ್ದ ಜಾತ್ರಾ ಮಹೋತ್ಸವಸತತ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಕೇವಲ ಸಂಪ್ರದಾಯಕ್ಕೆ ಸೀಮಿತವಾಗಿದೆ. ಈ ವರ್ಷ ರಥಬೀದಿಯಲ್ಲಿ ತೇರನ್ನೆಳೆದು ಭಕ್ತರು ಸಂಭ್ರಮಿಸಿದರು. ನೂರಾರು ಜನರು ಮಾಸ್ಕ್ ಧರಿಸದೆ ಜಾತ್ರೆಯಲ್ಲಿ ಭಾಗಿಯಾದರು. ಕೊವಿಡ್ ಹಿನ್ನೆಲೆಯಲ್ಲಿ ರಥೋತ್ಸವ ರದ್ದು ಮಾಡಲು ಮುಂದಾಗಿದ್ದ ಜಿಲ್ಲಾಡಳಿತಕ್ಕೆ ಕೋವಿಡ್ ನಿಯಮ ಪಾಲಿಸಿ ರಥೋತ್ಸವ ನಡೆಸುವುದಾಗಿ ಭಕ್ತರು ಭರವಸೆ ನೀಡಿದ್ದರು. ಹೀಗಾಗಿ, ಈ ಬಾರಿಯ ರಥೋತ್ಸವಕ್ಕೆ ಅನುಮತಿ ನೀಡಲಾಗಿತ್ತು. ಭಕ್ತರ ಜೊತೆ ಸೇರಿ ಜೆಡಿಎಸ್ ಅಭ್ಯರ್ಥಿ ಡಾ. ಸೂರಜ್ ರೇವಣ್ಣ ಕೂಡ ತೇರನ್ನು ಎಳೆದಿದ್ದಾರೆ.

ಇದನ್ನೂ ಓದಿ: ವಾರಾಂತ್ಯದಲ್ಲಿ ಧರ್ಮಸ್ಥಳ, ಕಟೀಲು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರಿಗೆ ನಿಷೇಧ; ಹೊಸ ಸಮಯ, ನಿಯಮಗಳ ಮಾಹಿತಿ ಇಲ್ಲಿದೆ

ರಾಮನಾಥಪುರ ಪ್ರಸನ್ನ ಶ್ರೀ ಸುಬ್ರಹ್ಮಣ್ಯ ದೇವಾಸ್ಥಾನವು ಕುಕ್ಕೆ ಸುಬ್ರಹ್ಮಣ್ಯ ದೇಗುಲದಷ್ಟೇ ಖ್ಯಾತಿ ಹೊಂದಿದೆ