ರಾಜ್ಯೋತ್ಸವ ಪ್ರಶಸ್ತಿಯಿಂದ ಬಂದಿದ್ದ ಹಣವನ್ನು ಆಂಬ್ಯುಲೆನ್ಸ್ ಸೇವೆಗೆ ವಿನಿಯೋಗಿಸಿದ ಚಾರ್ಮಾಡಿ ಹಸನಬ್ಬ!

ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹಸನಬ್ಬ ಆಂಬ್ಯುಲೆನ್ಸ್ ಸೇವೆಗೆ ಇಂದು ಶುಕ್ರವಾರ ಚಾಲನೆ ನೀಡಿದರು. ಮಂಗಳೂರು ಜಿಲ್ಲಾ ಪಂಚಾಯತ್ ಆವರಣದಲ್ಲಿ‌ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.

ರಾಜ್ಯೋತ್ಸವ ಪ್ರಶಸ್ತಿಯಿಂದ ಬಂದಿದ್ದ ಹಣವನ್ನು ಆಂಬ್ಯುಲೆನ್ಸ್ ಸೇವೆಗೆ ವಿನಿಯೋಗಿಸಿದ ಚಾರ್ಮಾಡಿ ಹಸನಬ್ಬ!
ರಾಜ್ಯೋತ್ಸವ ಪ್ರಶಸ್ತಿ ಹಣ ಆಂಬ್ಯುಲೆನ್ಸ್ ಸೇವೆಗೆ ವಿನಿಯೋಗಿಸಿದ ಹಸನಬ್ಬ
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: ಸಾಧು ಶ್ರೀನಾಥ್​

Updated on: Jan 12, 2024 | 5:02 PM

ಮಂಗಳೂರು, ಜನವರಿ 12: ಚಾರ್ಮಾಡಿ ಘಾಟ್ ನ ಆಪದ್ಭಾಂದವ ಎನಿಸಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ (Rajyotsava award 2023) ಚಾರ್ಮಾಡಿ ಹಸನಬ್ಬ ಅವರು (Charmadi Hasanabba) ಆಂಬ್ಯುಲೆನ್ಸ್ ಸೇವೆಗಾಗಿ ತಮಗೆ ಸಂದಾಯವಾಗಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನಗದನ್ನು ವಿನಿಯೋಗಿಸಿದ್ದಾರೆ. ಚಾರ್ಮಾಡಿ ಹಸನಬ್ಬ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ 5 ಲಕ್ಷ ರೂಪಾಯಿ ಸಂದಾಯವಾಗಿತ್ತು. 5 ಲಕ್ಷದ ಜೊತೆಗೆ 3 ಲಕ್ಷ ರೂಪಾಯಿ‌ ಬ್ಯಾಂಕ್ ಸಾಲವನ್ನು ಪಡೆದ ಹಸನಬ್ಬ ಅವರು 8 ಲಕ್ಷ ರೂಪಾಯಿ ವೆಚ್ಚ ದಲ್ಲಿ ಆಂಬ್ಯುಲೆನ್ಸ್ (Ambulance) ಖರೀದಿಸಿದ್ದಾರೆ.

ಹೀಗೆ ಖರೀದಿಸಿರುವ ವಾಹನವನ್ನು ಚಾರ್ಮಾಡಿ ಹಸನಬ್ಬ ಚಾರಿಟೇಬಲ್‌ ಟ್ರಸ್ಟ್ ಮೂಲಕ ಅವರು ಆಂಬ್ಯುಲೆನ್ಸ್ ಸೇವೆಗೆ ಒದಗಿಸಲು ತೀರ್ಮಾನಿಸಿದ್ದಾರೆ. ಚಾರ್ಮಾಡಿಯಲ್ಲಿ ಸಣ್ಣ ಕ್ಯಾಂಟೀನ್ ನಡೆಸುವ ಹಸನಬ್ಬ ಅವರು ಘಟ್ಟ ಪ್ರದೇಶದ ರಸ್ತೆಗಳಲ್ಲಿ ನಡೆಯುವ ವಾಹನ ಅಪಘಾತಗಳಿಗೆ ತುರ್ತಾಗಿ‌ ಸ್ಪಂದಿಸುತ್ತಾ ಬಂದಿದ್ದಾರೆ. ಹಸಬನ್ಬ ಹೀಗೆ ಗಾಯಗೊಂಡವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಿ ನೂರಾರು ಜನರ‌ ಜೀವ ರಕ್ಷಿಸಿದ್ದಾರೆ. ತನ್ಮೂಲಕ ಚಾರ್ಮಾಡಿ ಘಾಟ್ ನ ಆಪದ್ಭಾಂದವ ಎಂದೇ ಚಿರಪರಿಚಿತರಾಗಿದ್ದಾರೆ.

Also Read: ಬೆಂಗಳೂರಿನಿಂದ‌ ಬಂದಿದ್ದ ಬಡ ಮಹಿಳೆಗೆ ಮನೆ ನೀಡುವಂತೆ ದೆಹಲಿಯಲ್ಲಿ ಸಚಿವ ಹೆಚ್.ಸಿ. ಮಹದೇವಪ್ಪ ಶಿಫಾರಸು

ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹಸನಬ್ಬ ಆಂಬ್ಯುಲೆನ್ಸ್ ಸೇವೆಗೆ ಇಂದು ಶುಕ್ರವಾರ ಚಾಲನೆ ನೀಡಿದರು. ಮಂಗಳೂರು ಜಿಲ್ಲಾ ಪಂಚಾಯತ್ ಆವರಣದಲ್ಲಿ‌ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.

ಚಾರ್ಮಾಡಿ ಹಸನಬ್ಬ ಅವರು 1980ರ ದಶಕದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಅಮೋಘ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ. ಅಪಘಾತಗಳಿಂದ ನೊಂದ ನೂರಾರು ಗಾಯಾಳುಗಳನ್ನು ಅವರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಾ ಬಂದಿದ್ದಾರೆ. ತಮ್ಮದೇ ಒಂದು ಯುವಕರ ತಂಡವನ್ನು ಕಟ್ಟಿಕೊಂಡು ಹಗಲು ರಾತ್ರಿ ಎನ್ನದೇ, ಮಳೆ ಗಾಳಿ ಎನ್ನದೇ ಪಶ್ಚಿಮ ಘಟ್ಟದಲ್ಲಿ ಅಪಘಾತವಾದವರ ರಕ್ಷಣೆಗೆ ಧಾವಿಸುತ್ತಾರೆ

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ