AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Congress Manifesto: ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ಘೋಷಿಸಿದ ಕಾಂಗ್ರೆಸ್: ಪ್ರಣಾಳಿಕೆಯ 10 ಅಂಶಗಳು ಇಂತಿವೆ

ಕರ್ನಾಟಕ ಕಾಂಗ್ರೆಸ್​ ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ಘೋಷಿಸಿದೆ. ಇಂದು ಮಂಗಳೂರಿನಲ್ಲಿ ನಡೆದ ಕಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಪ್ರತ್ಯೇಕ ಪ್ರಣಾಳಿಕೆಯ ಹತ್ತು ಅಂಶಗಳನ್ನು ತಿಳಿಸಿದರು.

Congress Manifesto: ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ಘೋಷಿಸಿದ ಕಾಂಗ್ರೆಸ್: ಪ್ರಣಾಳಿಕೆಯ 10 ಅಂಶಗಳು ಇಂತಿವೆ
ಕರಾವಳಿ ಕರ್ನಾಟಕಕ್ಕೆ ಪ್ರತ್ಯೇಕ ಪ್ರಣಾಳಿಕೆ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Jan 22, 2023 | 8:26 PM

Share

ಮಂಗಳೂರು: ವಿಧಾನಸಭೆ ಚುನಾವಣೆ (karnataka Assembly Elections 2023)ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್​ (Congress) ಪ್ರಜಾಧ್ವನಿಯಾತ್ರೆ ಸಮಾವೇಶದಲ್ಲಿ ಹಲವು ಯೋಜನೆಗಳನ್ನು ಘೋಷಿಸುತ್ತಿದೆ. ಅದರಂತೆ ಇಂದು (ಜನವರಿ 22) ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಕರಾವಳಿ ಭಾಗಕ್ಕೆ (coastal karnataka) ಪ್ರತ್ಯೇಕ ಪ್ರಣಾಳಿಕೆ (separate manifesto) ಘೋಷಿಸಿದೆ. ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಅವರು ಸಮಾವೇಶದ ವೇದಿಕೆ ಮೇಲೆ ಪ್ರತ್ಯೇಕ ಪ್ರಣಾಳಿಕೆಯ ಹತ್ತು ಅಂಶ ಘೋಷಿಸಿದರು.

ಇದನ್ನೂ ಓದಿ: ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಯುವಕರು ಬಲಿ? RSS​​, ಶಾಸಕರ ಮಗ ಕೊಲೆಯಾದ ನಿದರ್ಶನ ಇದೆಯಾ? ಸಿದ್ದು ಪ್ರಶ್ನೆ

ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್‌, ಕರಾವಳಿ ಭಾಗಕ್ಕೆ ನಾವು ಹತ್ತು ಅಂಶಗಳ ಪ್ರತ್ಯೇಕ ಘೋಷಣೆ ಮಾಡುತ್ತಿದ್ದೇವೆ. ಕರಾವಳಿಯಲ್ಲಿ ಉದ್ಯೋಗ, ಬಂಡವಾಳ ಹೂಡಿಕೆ, ಟೂರಿಸಂ ಹಾಗೂ ಭಾವೈಕ್ಯತೆ ಕೋಸ್ಟಲ್ ಡೆವಲಪ್ಮೆಂಟ್ ಅಥಾರಿಟಿ ಮಾಡುತ್ತೇವೆ. ಆ ಅಥಾರಿಟಿಗೆ ವರ್ಷಕ್ಕೆ ಎರಡೂವರೆ ಸಾವಿರ ಕೋಟಿ ರೂ. ಮೀಸಲು ಇಡುತ್ತೇವೆ ಎಂದು ಪ್ರಣಾಳಿಕೆಯ 10 ಅಂಶಗಳನ್ನು ಓದಿದರು.

ನಿನ್ನೇ ಅಷ್ಟೇ (ಜನವರಿ 21) ಮಂಗಳೂರಿನ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಈ ಬಾರಿ ಕರಾವಳಿ ಕರ್ನಾಟಕಕ್ಕೆ ವಿಶೇಷವಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಕಾಂಗ್ರೆಸ್ ಪ್ರಾಣಾಳಿಕ ಸಮಿತಿ ಪ್ರಥಮವಾಗಿ ಭೇಟಿ ಕೊಟ್ಟು ಹಲವು ಗುಂಪುಗಳ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದಿದ್ದರು. ಅದರಂತೆ ಇದೀಗ ಕಾಂಗ್ರೆಸ್ ಕರಾವಳಿ ಭಾಗಕ್ಕೆ 10 ಅಂಶಗಳ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಪ್ರತ್ಯೇಕ ಪ್ರಣಾಳಿಕೆಯ ಹತ್ತು ಅಂಶ ಇಂತಿವೆ

  1.  ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆ ಮೂಲಕ ತಾಯಂದಿರು ಮತ್ತು ಮಹಿಳೆಯರಿಗೆ ಉದ್ಯೋಗ.
  2. ಮೀನುಗಾರರಿಗೆ 10 ಲಕ್ಷದ ಇನ್ಯೂರೆನ್ಸ್ ಹಾಗೂ ಮೀನುಗಾರರ ಮನೆಯ ಯಜಮಾನಿ ಮಹಿಳೆಗೆ ಬಡ್ಡಿ ರಹಿತ ಒಂದು ಲಕ್ಷ ರೂ ಸಾಲ‌.
  3. ಬೋಟ್ ಖರೀದಿಗೆ 25% ಸಬ್ಸಿಡಿ
  4. ಮೀನುಗಾರಿಕಾ ಬೋಟ್ ಗಳಿಗೆ ಹೆಚ್ಚುವರಿ ಡಿಸೇಲ್ ಪೂರೈಕೆ
  5. ಬಿಲ್ಲವ ಸಮಾಜ, ಈಡಿಗ ಸಮಾಜದವರಿಗೆ ಪುನರ್ವಸತಿ ಕಲ್ಪಿಸಲು ನಾರಾಯಣ ಅಭಿವೃದ್ಧಿ ನಿಗಮ ಸ್ಥಾಪನೆ.
  6. ಈ ನಿಗಮಕ್ಕೆ ವರ್ಷಕ್ಕೆ 250 ಕೋಟಿ ಅನುದಾನ ಮೀಸಲು‌.
  7. ಬಂಟ ಸಮುದಾಯದ ಅಭಿವೃದ್ಧಿಗೂ ವಾರ್ಷಿಕ 250 ಕೋಟಿ ಮೀಸಲು.
  8. ಅಡಿಕೆ ಬೆಳೆ ಮತ್ತು ಅದರ ರೋಗದ ಪರಿಹಾರಕ್ಕೆ 50 ಕೋಟಿ ಮೀಸಲು.
  9. ಕರಾವಳಿಯಲ್ಲಿ ಸ್ವಾಮೀ ವಿವೇಕಾನಂದರ ಹೆಸರಿನಲ್ಲಿ ಕೋಮು ಸಾಮಾಜಿಕ ‌ಮತ್ತು ಸೌಹಾರ್ದತೆ ಸಮಿತಿ‌.
  10. ಪ್ರತೀ ಪಂಚಾಯತ್ ನಲ್ಲೂ ಈ ಸಮಿತಿಗೆ ಅನುದಾನ ‌ಕೊಡಲಾಗುವುದು.

Published On - 8:24 pm, Sun, 22 January 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ