ಪ್ರವೀಣ್ ನೆಟ್ಟಾರು ಹತ್ಯೆ: ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದ್ದೇನು?

ಇದರ ಹಿಂದಿರುವ ಶಕ್ತಿಗಳನ್ನ ಮಟ್ಟ ಹಾಕಲು ನಾವು ಸನ್ನದ್ದರಾಗಿದ್ದೇವೆ. ನಾವು ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಸರ್ಕಾರ ತಕ್ಕ ಉತ್ತರವನ್ನ ಕಾನೂನಿನ ಚೌಕಟ್ಟಿನಲ್ಲಿ ನೀಡಲಿದೆ.

ಪ್ರವೀಣ್ ನೆಟ್ಟಾರು ಹತ್ಯೆ: ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದ್ದೇನು?
ಸುನಿಲ ಕುಮಾರ್, ಸಚಿವರು
Follow us
TV9 Web
| Updated By: ಆಯೇಷಾ ಬಾನು

Updated on:Jul 27, 2022 | 10:04 PM

ಮಂಗಳೂರು: ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರುರನ್ನ(Praveen Nettar) ನಿನ್ನೆ ರಾತ್ರಿ(ಜುಲೈ 26) ಮೂವರು ಹಂತಕರು ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಪ್ರಕರಣದಿಂದಾಗಿ ಕರಾವಳಿಯಲ್ಲಿ ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಈ ಹತ್ಯೆ ಪ್ರಕರಣ ಸಂಬಂಧ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್( Sunil Kumar) ಪ್ರತಿಕ್ರಿಯೆ ನೀಡಿದ್ದಾರೆ.

ಕಾರ್ಯಕರ್ತನ ಹತ್ಯೆ ಖಂಡಿಸಲು ನಿನ್ನೆ ನನ್ನ ಬಳಿ ಶಬ್ದಗಳಿರಲಿಲ್ಲ. ತನಿಖೆ ತೀವ್ರಗೊಳಿಸಲು ಸಿಎಂ, ಗೃಹಮಂತ್ರಿಗೆ ಮನವಿ ಮಾಡಿದ್ದೇನೆ. ಮನೆ ಮಗನನ್ನ ಕಳೆದುಕೊಂಡಿದ್ದೇವೆ. ಆದರೆ ಒಂದಂತೋ ಹೇಳಲು ಬಯಸುವೆ, ಇದರ ಹಿಂದಿರುವ ಶಕ್ತಿಗಳನ್ನ ಮಟ್ಟ ಹಾಕಲು ನಾವು ಸನ್ನದ್ದರಾಗಿದ್ದೇವೆ. ನಾವು ಸುಮ್ಮನಿರುವ ಪ್ರಶ್ನೆಯೇ ಇಲ್ಲ. ಸರ್ಕಾರ ತಕ್ಕ ಉತ್ತರವನ್ನ ಕಾನೂನಿನ ಚೌಕಟ್ಟಿನಲ್ಲಿ ನೀಡಲಿದೆ. ಮತಾಂಧ ಶಕ್ತಿಗಳನ್ನ ಹತ್ತಿಕ್ಕುವ ಕೆಲಸ ಮಾಡೇ ಮಾಡುತ್ತೇವೆ. ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಶಾಂತಿ ಕದಡುವ ಕೆಲಸ ಆಗಿರಲಿಲ್ಲ.

ಕೇರಳದಿಂದ ಬಂದು ಶಾಂತಿ ಕದಡುವ ಕೆಲಸ ಮಾಡಲಾಗುತ್ತಿದೆ. ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಜನಾಕ್ರೋಶವನ್ನ ಸರ್ಕಾರ ಗಮನದಲ್ಲಿಟ್ಟುಕೊಂಡಿದೆ. ಹಂತಕರಿಗೆ ಯಾವ ಶಿಕ್ಷೆ ಕೊಡಬೇಕೋ ಆ ಶಿಕ್ಷೆ ಕೊಡಲಿದೆ. ಪೋಲಿಸ್ ಇಲಾಖೆಗೆ ಮುಕ್ತವಾದ ಅವಕಾಶ ನೀಡ್ತೇವೆ. ಮುಂದಿನ ಎರಡು ಮೂರು ದಿನಗಳ ಕಾಲ ಸಿಎಂ ಹಾಗೂ ಗೃಹ ಸಚಿವರ ಜೊತೆ ಸಂಪರ್ಕದಲ್ಲಿದ್ದುಕೊಂಡ ಮತೀಯ ಶಕ್ತಿಯನ್ನು ಮಟ್ಟ ಹಾಕುತ್ತೇವೆ ಎಂದು ತಿಳಿಸಿದರು.

ಎಲ್ಲಾ ಆಯಾಮದಲ್ಲೂ ಪ್ರಕರಣದ ತನಿಖೆ ನಡೆಸಲು ಸೂಚನೆ

ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ ಮಂಗಳೂರಿನಲ್ಲಿ ಸಚಿವ ಸುನಿಲ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್, ದಕ್ಷಿಣ ಕನ್ನಡ ಎಸ್ಪಿ ಋಷಿಕೇಶ್ ಸೋನಾವಣೆ, ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಪಶ್ಚಿಮ ವಲಯ ಐಜಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಎಲ್ಲಾ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ. ಎಲ್ಲಾ ಆಯಾಮದಲ್ಲೂ ಪ್ರಕರಣದ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ.

ಬಿಜೆಪಿ ಪಕ್ಷದಿಂದ ಕುಟುಂಬಕ್ಕೆ 25 ಲಕ್ಷ ಭರವಸೆ

ಮೃತ ಪ್ರವೀಣ್ ಮನೆಗೆ ಸ್ಥಳೀಯ ಶಾಸಕ ಅಂಗಾರ ಭೇಟಿ ಕೊಟ್ಟಿದ್ದು ಮೃತ ಪ್ರವೀಣ್ ಪೋಷಕರು ಹಾಗೂ ಪತ್ನಿಗೆ ಸಾಂತ್ವನ ಮಾಡಿದ್ದಾರೆ. ಹಾಗೂ ಬಿಜೆಪಿ ಪಕ್ಷದಿಂದ ಕುಟುಂಬಕ್ಕೆ 25 ಲಕ್ಷ ಕೊಡೋದಾಗಿ ಭರವಸೆ ನೀಡಿದ್ದಾರೆ. ಈ ವೇಳೆ ಅಂಗಾರನನ್ನು, ಪ್ರವೀಣ್ ಸ್ನೇಹಿತರು ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗೆ ಕೊಲೆ ಆಗ್ತಿದ್ರೆ ಪಕ್ಷದಲ್ಲಿದ್ದು ಏನು ಪ್ರಯೋಜನ ಎಂದು ಗರಂ ಆಗಿದ್ದಾರೆ.

ಪ್ರವೀಣ್ ಕೊಲೆ ಆರೋಪಿಗಳನ್ನು ಶೂಟೌಟ್​ ಮಾಡಬೇಕು

ಪ್ರವೀಣ್ ಕೊಲೆ ಆರೋಪಿಗಳನ್ನು ಶೂಟೌಟ್​ ಮಾಡಬೇಕು ಎಂದು ಯಾದಗಿರಿ ಜಿಲ್ಲೆ ಹುಣಸಗಿ ಪಟ್ಟಣದಲ್ಲಿ ಶಾಸಕ ರಾಜುಗೌಡ ಆಕ್ರೋಶ ಹೊರ ಹಾಕಿದ್ದಾರೆ. ಕಾನೂನು ಕ್ರಮ ಕೈಗೊಳ್ತೀವಿ ಅಂತ ಹೇಳಿದರೆ ಪ್ರಯೋಜನ ಇಲ್ಲ. ಇಂತಹ ಘಟನೆಗಳು ನಡೆದಾಗ ಕಠಿಣಕ್ರಮ ಕೈಗೊಳ್ಳಬೇಕು. ಪ್ರವೀಣ್ ಕೊಲೆಗಾರರು ಸುಪಾರಿ ಕಿಲ್ಲರ್ ತರಹ ಕಾಣ್ತಾರೆ. ಯಾವುದೇ ಧರ್ಮದವರಾಗ್ಲೀ ಇಂತಹ ಘಟನೆ ನಡೆದಾಗ ಶೂಟೌಟ್ ಮಾಡಬೇಕು. ಪೊಲೀಸ್ ಇಲಾಖೆಗೆ ನಾವು ಸ್ವಲ್ಪ ಫ್ರೀಯಾಗಿ ಬಿಡಬೇಕು ಅವರ ಕೆಲಸ ಅವರು ಮಾಡ್ತಾರೆ. ಯಾವ ಸರ್ಕಾರ ಕೂಡ ಪೊಲೀಸರಿಗೆ ಫ್ರೀಯಾಗಿ ಬಿಟ್ಟಿಲ್ಲ. ಪೊಲೀಸರು ಶೂಟೌಟ್ ಮಾಡಿದ್ರೆ ಅವರ ಮೇಲೆ ಮಾನವ ಹಕ್ಕಿನವರು ಬಂದು ಕುಳಿತುಕೊಳ್ಳುತ್ತಾರೆ‌‌. ಒಮ್ಮೆ ಶೂಟೌಟ್ ಮಾಡಿದ ಅಧಿಕಾರಿ ಮತ್ತೊಮ್ಮೆ ಶೂಟೌಟ್ ಮಾಡೋಕೆ ಹೆದರುವಂತಾಗಿದೆ. ಗುಂಡಾಗಳೇ ನಮ್ಮ ಮೇಲೆ ಶೂಟ್ ಮಾಡ್ಲಿ ಅಂತ ಪೊಲೀಸರು ಹೇಳುವಂತಾಗಿದೆ. ಇಂತಹ ಘಟನೆ ನಡೆದಾಗ ಮಾನವ ಹಕ್ಕಿನವರು ಯಾಕೆ ಬರಲ್ಲ. ಗುಂಡಾಗಳಿಗೆ ದುಷ್ಕರ್ಮಿಗಳಿಗೆ ಹೆದರಿಕೆಯಲ್ಲಿ ಇಡಬೇಕು ಅಂದ್ರೆ ಶೂಟೌಟ್ ಒಂದೆ ಅಸ್ತ್ರ. ಇಲ್ಲ ಅಂದ್ರೆ ಯಾರಿಗ್ ಬೇಕಾದ್ರು ಕೊಲೆ ಮಾಡ್ತಾರೆ ಅವರಿಗೆ ಬಿಡಿಸಿಕೊಂಡು ಬರಲು ಮತ್ತೊಬ್ಬರು ಇರ್ತಾರೆ ಎಂದು ರಾಜುಗೌಡ ಹೇಳಿದ್ರು.

Published On - 5:25 pm, Wed, 27 July 22

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು