ಮಂಗಳೂರಿನಲ್ಲಿ ನಟಿ ಸಾನ್ಯ ಕಿರಿಕ್ ವಿಚಾರ, ಅಪಸ್ವರ ಎತ್ತಿದವರ ವಿರುದ್ಧ ದೇವರ ಮೊರೆ ಹೋದ ಕಂಬಳ‌‌ ಸಮಿತಿ

ಇತ್ತೀಚೆಗೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದ ಕಂಬಳದಲ್ಲಿ ನಟಿ ಸಾನ್ಯ ಅಯ್ಯಾರ್ ಭಾಗಿಯಾಗಿದ್ದರು. ಈ ವೇಳೆ ಕೈ ಹಿಡಿದು ಎಳೆದ ಯುವಕನಿಗೆ ಕಪಾಳಮೋಕ್ಷ ಮಾಡಿದ್ದರು. ಬಳಿಕ ಘಟನೆಗೆ ಕಂಬಳ ಸಮಿತಿಯನ್ನು ಹೊಣೆ ಮಾಡಲಾಗಿತ್ತು.

ಮಂಗಳೂರಿನಲ್ಲಿ ನಟಿ ಸಾನ್ಯ ಕಿರಿಕ್ ವಿಚಾರ, ಅಪಸ್ವರ ಎತ್ತಿದವರ ವಿರುದ್ಧ ದೇವರ ಮೊರೆ ಹೋದ ಕಂಬಳ‌‌ ಸಮಿತಿ
ದೇವರಿಗೆ ವಿಶೇಷ ಪ್ರಾರ್ಥನೆ (ಎಡ ಚಿತ್ರ) ಮತ್ತು ಸಾನ್ಯ ಅಯ್ಯಾರ್ (ಎಡ ಚಿತ್ರ)
Follow us
TV9 Web
| Updated By: Rakesh Nayak Manchi

Updated on: Feb 01, 2023 | 6:15 PM

ಮಂಗಳೂರು: ಇತ್ತೀಚೆಗೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದ ಕಂಬಳದಲ್ಲಿ (Puttur Jodu Kere Kambala) ಮೈ ಮುಟ್ಟಿದ ಯುವಕನಿಗೆ ನಟಿ ಸಾನ್ಯ ಅಯ್ಯಾರ್ ಕಪಾಳಮೋಕ್ಷ ಮಾಡಿದ ವಿಚಾರ ಸಂಬಂಧ ಘಟನೆಗೆ ಪುತ್ತೂರು ಕೋಟಿ-ಚೆನ್ನಯ ಜೋಡುಕೆರೆ ಕಂಬಳ ಸಮಿತಿಯನ್ನು ಹೊಣೆ ಮಾಡಲಾಗಿತ್ತು. ಆದರೆ ಇದನ್ನು ಖಂಡಿಸಿರುವ ಸಮಿತಿ, ಕಂಬಳದ ಬಗ್ಗೆ ಅಪಸ್ವರ ಮಾಡಿದವರ ವಿರುದ್ಧ ದೇವರ ಮೊರೆ ಹೋಗಿದ್ದು, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ (Puttur Shri Mahalingeshwar Temple) ಏಕದಶರುದ್ರ ಸೇವೆ ಮಾಡಿಸಿ ಪ್ರಾರ್ಥನೆ ಸಲ್ಲಿಸಿದೆ. ಕಂಬಳ‌ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮಾಜಿ‌ ಶಾಸಕಿ‌ ಶಕುಂತಲಾ ಶೆಟ್ಟಿ (Shakuntala Shetty) ಸೇರಿದಂತೆ ಅನೇಕರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದಾರೆ.

ಕಂಬಳದಲ್ಲಿ ನಡೆದ ಘಟನೆಗೂ ಕಂಬಳ ಸಮಿತಿಗೂ ಯಾವುದೇ ಸಂಬಂಧವಿಲ್ಲ. ಅತಿಥಿಯಾಗಿ ಬಂದವರನ್ನು ಸುರಕ್ಷಿತವಾಗಿ ಕಳುಹಿಸಿ ಊಟ ಮಾಡಿಸಿ ಬಿಟ್ಟು ಬಂದಿದ್ದೇವೆ. ಆ ಬಳಿಕ ಏನು ಆಗಿದೆ ಎಂದು ಮರುದಿನ ನಮಗೆ ತಿಳಿದುಬಂದಿದೆ. ಪುತ್ತೂರಿನ ದೇವರಮಾರು ಗದ್ದೆಯಲ್ಲಿ ಜಗಳ ಅಥವಾ ಅಸಭ್ಯವಾಗಿ ನಡೆದರೆ ಅವರಿಗೆ ಕ್ಷೇಮವಿಲ್ಲ. ಮಹಾಲಿಂಗೇಶ್ವರ ದೇವರ ಕಾರಣಿಕ ಎಲ್ಲಾ ಜನರಿಗೂ ಗೊತ್ತಿದೆ. ಈ ಘಟನೆಗೆ ಕಂಬಳ ಸಮಿತಿಯನ್ನು ಹೊಣೆ ಮಾಡಿದವರಿಗೆ ದೇವರೆ ಬುದ್ದಿ ನೀಡಲಿ ಎಂದು ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಎದುರು ಪ್ರಾರ್ಥನೆ ಸಲ್ಲಿಸಲಾಗಿದೆ.

ಶನಿವಾರ (ಜ.28) ಪುತ್ತೂರಿನ ಕೋಟಿ ಚನ್ನಯ್ಯ ಜೋಡುಕೆರೆ ಕಂಬಳಕ್ಕೆ ಸಾನ್ಯಾ ಐಯ್ಯರ್ ಅತಿಥಿಯಾಗಿ ತೆರಳಿದ್ದರು. ಮಧ್ಯರಾತ್ರಿ ಸ್ನೇಹಿತರೊಂದಿಗೆ ಮತ್ತೆ ಕಂಬಳ ನೋಡಲು ಅವರು ಆಗಮಿಸಿದ್ದರು. ಅವರನ್ನು ನೋಡುತ್ತಿದ್ದಂತೆ ಒಂದಷ್ಟು ಮಂದಿ ಸೆಲ್ಫಿ ತೆಗೆದುಕೊಳ್ಳೋಕೆ ಮುಂದೆ ಬಂದಿದ್ದರು. ಆಗ ಯುವಕನೋರ್ವ ಸಾನ್ಯಾ ಅವರ ಕೈಹಿಡಿದು ಎಳೆದಿದ್ದ. ಕೋಪಗೊಂಡ ಅವರು ಯುವಕನಿಗೆ ಕಪಾಳಮೋಕ್ಷ ಮಾಡಿದ್ದರು. ಸಿಟ್ಟಾದ ಆತ ಮರಳಿ ಸಾನ್ಯಾ ಕೆನ್ನೆಗೆ ಬಾರಿಸಿದ್ದ. ಈ ಘಟನೆ ಬೆನ್ನಲ್ಲೇ ಸ್ಥಳೀಯರು ಯುವಕನಿಗೆ ಹೊಡೆದಿದ್ದರು.

ಇದನ್ನೂ ಓದಿ: Sanya Iyer: ‘ನಾನು ಮದ್ಯಪಾನ ಮಾಡಿರಲಿಲ್ಲ’: ಕಂಬಳ ಗಲಾಟೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸಾನ್ಯಾ ಐಯ್ಯರ್​ ಸ್ಪಷ್ಟನೆ

ಇನ್ನು ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದ ಸಾನ್ಯ, ನಾವು ಕಂಬಳ ನೋಡಲು ಪುತ್ತೂರಿಗೆ ಹೋಗಿದ್ವಿ. ನನ್ನನ್ನು ಅತಿಥಿಯಾಗಿ ಕರೆದಿದ್ದರು. ಆ ಸಾಂಸ್ಕೃತಿಕ ಕ್ರೀಡೆಯನ್ನು ಸರಿಯಾಗಿ ನೋಡಲು ಸಾಧ್ಯವಾಗಿರಲಿಲ್ಲ. ಮತ್ತೆ ಸ್ನೇಹಿತೆಯರ ಜೊತೆ ಕಂಬಳ ನೋಡಲು ಬಂದೆ. ಆಗ ನಶೆಯಲ್ಲಿ ಇದ್ದ ಓರ್ವ ಯುವಕ ಕಿರುಕುಳ ನೀಡಲು ಪ್ರಯತ್ನಿಸಿದ. ಆಗ ನಾವು ಜೋರಾಗಿ ಕಿರುಚಿಕೊಂಡೆವು ಎಂದಿದ್ದರು.

ಮುಂದುವರೆದ ಮಾತನಾಡಿದ್ದ ಅವರು, ನಾವು ಬರುತ್ತೇವೆ ಎಂಬುದನ್ನು ಮುಖ್ಯ ಆಯೋಜಕರಿಗೆ ನಾವು ತಿಳಿಸಿರಲಿಲ್ಲ. ಒಂದು ವೇಳೆ ತಿಳಿಸಿದ್ದರೆ ಅವರು ಸರಿಯಾಗಿ ಕರೆದುಕೊಂಡು ಹೋಗುತ್ತಿದ್ದರು. ಈ ಘಟನೆ ಆದ ಬಳಿಕ ಅವರಿಗೆ ವಿಷಯ ತಿಳಿಯಿತು. ಆಮೇಲೆ ಅವರು ಬಂದು ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ವೇದಿಕೆ ಮೇಲೆ ಕೂರಿಸಿದರು ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಮೋದಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನೈಜೀರಿಯಾದ ಜನ
ಪ್ರಧಾನಿ ಮೋದಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನೈಜೀರಿಯಾದ ಜನ
ಮಣಿಪುರ ಹಿಂಸಾಚಾರ, ಮುಖ್ಯಮಂತ್ರಿ, ಶಾಸಕರ ಮನೆಗೆ ನುಗ್ಗಲು ಯತ್ನ
ಮಣಿಪುರ ಹಿಂಸಾಚಾರ, ಮುಖ್ಯಮಂತ್ರಿ, ಶಾಸಕರ ಮನೆಗೆ ನುಗ್ಗಲು ಯತ್ನ
ಪತಿ-ಪತ್ನಿ ಒಂದೇ ರಾಶಿಯವರಾಗಿದ್ದರೆ ಏನರ್ಥ? ವಿಡಿಯೋ ನೋಡಿ
ಪತಿ-ಪತ್ನಿ ಒಂದೇ ರಾಶಿಯವರಾಗಿದ್ದರೆ ಏನರ್ಥ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 18 ರಿಂದ 24ರವರೆಗೆ ವಾರ ಭವಿಷ್
ವಾರ ಭವಿಷ್ಯ: ನವೆಂಬರ್​ 18 ರಿಂದ 24ರವರೆಗೆ ವಾರ ಭವಿಷ್
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಖರೀದಿಸುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಖರೀದಿಸುವ ಯೋಗವಿದೆ
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ