ಅರಣ್ಯ ಇಲಾಖೆ ಸಿಬ್ಬಂದಿ ಕೈಗೆ ಸಿಗದೆ ಪರಾರಿಯಾಯ್ತು ನಾಯಿ ಜೊತೆ ಬಂಧಿಯಾಗಿದ್ದ ಚಿರತೆ

ಚಿರತೆಯನ್ನು ಬೋನಿಗೆ ಹಾಕಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕೈ ತಪ್ಪಿಸಿಕೊಂಡ ಚಿರತೆ, ಕೈಕಂಬ ವ್ಯಾಪ್ತಿಯ ಕಾಡಿನತ್ತ ಓಡಿಹೋಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಕೈಗೆ ಸಿಗದೆ ಪರಾರಿಯಾಯ್ತು ನಾಯಿ ಜೊತೆ ಬಂಧಿಯಾಗಿದ್ದ ಚಿರತೆ
ಶೌಚಾಲಯದಲ್ಲಿ ಲಾಕ್​ ಆಗಿರುವ ಚಿರತೆ ಮತ್ತು ನಾಯಿ
Follow us
TV9 Web
| Updated By: ganapathi bhat

Updated on:Apr 06, 2022 | 8:15 PM

ಮಂಗಳೂರು: ಜಿಲ್ಲೆಯ ಕಡಬ ತಾಲ್ಲೂಕಿನ ಕೈಕಂಬ ಗ್ರಾಮದ ಮನೆಯೊಂದರ ಶೌಚಾಲಯದಲ್ಲಿ ನಾಯಿಯೊಂದಿಗೆ ಬಂಧಿಯಾಗಿದ್ದ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಯ ಪ್ರಯತ್ನ ಕೊನೆಗೂ ಫಲ ನೀಡಲಿಲ್ಲ.

ನಾಯಿಯನ್ನು ಹಿಡಿಯಲು ರೇಗಪ್ಪ ಎಂಬವರ ಮನೆಯ ಶೌಚಾಲಯದೊಳಕ್ಕೆ ಚಿರತೆಯೊಂದು ನುಗ್ಗಿತ್ತು. ಇದರಿಂದ ಭಯಗೊಂಡ ಮನೆಯವರು ಮನೆಯಿಂದ ಹೊರ ಓಡಿ, ಶೌಚಾಲಯದ ಬಾಗಿಲು ಹಾಕಿ ನಾಯಿ ಮತ್ತು ಚಿರತೆಯನ್ನು ಕೂಡಿ ಹಾಕಿದ್ದರು.

ಬಳಿಕ, ಚಿರತೆಯನ್ನು ಬೋನಿಗೆ ಹಾಕಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕೈ ತಪ್ಪಿಸಿಕೊಂಡ ಚಿರತೆ, ಕೈಕಂಬ ವ್ಯಾಪ್ತಿಯ ಕಾಡಿನತ್ತ ಓಡಿಹೋಯಿತು. ಅರೆವಳಿಕೆ ಮದ್ದು ನೀಡಲು ಯತ್ನಿಸುತ್ತಿರುವ ವೇಳೆ, ಚಿರತೆ ತಪ್ಪಿಸಿಕೊಂಡು ಓಡಿದೆ.

ಅರಣ್ಯ ಇಲಾಖೆಯ ಸಿಬ್ಬಂದಿ ಬಲೆ ಹಾಕಿ, ಅರೆವಳಿಕೆ ಮದ್ದು ನೀಡಿ, ಚಿರತೆಯನ್ನು ಹಿಡಿಯಲು ಯತ್ನಿಸಿದ್ದರು. ಆದರೆ, ಚಿರತೆ ಸೆರೆಯಾಗುವುದರಿಂದ ತಪ್ಪಿಸಿಕೊಂಡು, ಸಿಬ್ಬಂದಿ ಪ್ರಯತ್ನವನ್ನು ವಿಫಲಗೊಳಿಸಿತು. ಯಾರ ಮೇಲೂ ದಾಳಿ ಮಾಡದೆ ಕಾಡಿನತ್ತ ತಪ್ಪಿಸಿಕೊಂಡಿತು.

ನಾಯಿಯನ್ನು ಹಿಡಿಯಲು ಬಂದು ಶೌಚಾಲಯದಲ್ಲಿ ಲಾಕ್ ಆಯ್ತು ಚಿರತೆ.. ಗ್ರಾಮಸ್ಥರಲ್ಲಿ ಆತಂಕ

Published On - 7:31 pm, Wed, 3 February 21