ಮಂಗಳೂರು: ದಿಗಂತ್ ಪತ್ತೆಗೆ ಆಗ್ರಹಿಸಿ ಪ್ರತಿಭಟಿಸಿದ್ದ ಭಜರಂಗದಳ ಮುಖಂಡನಿಗೆ ಕೊಲೆ ಬೆದರಿಕೆ

ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಪತ್ತೆಯಾದ ನಂತರ ಭಜರಂಗದಳ ಮುಖಂಡ ಭರತ್ ಕುಮ್ಡೇಲ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ. ದಿಗಂತ್ ಪತ್ತೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯ ನಂತರ ಈ ಬೆದರಿಕೆಗಳು ಹೆಚ್ಚಾಗಿವೆ. ಈ ಬೆದರಿಕೆಗಳನ್ನು BEARY_ROYAL_NAWAB ಮುಂತಾದ ಪೇಜ್‌ಗಳು ಹಂಚಿಕೊಂಡಿವೆ ಎಂದು ಹೇಳಲಾಗಿದೆ.

ಮಂಗಳೂರು: ದಿಗಂತ್ ಪತ್ತೆಗೆ ಆಗ್ರಹಿಸಿ ಪ್ರತಿಭಟಿಸಿದ್ದ ಭಜರಂಗದಳ ಮುಖಂಡನಿಗೆ ಕೊಲೆ ಬೆದರಿಕೆ
ಭಜರಂಗದಳ ಮುಖಂಡ ಭರತ್ ಕುಮ್ಡೇಲ್​
Updated By: ವಿವೇಕ ಬಿರಾದಾರ

Updated on: Mar 10, 2025 | 11:39 AM

ಮಂಗಳೂರು, ಮಾರ್ಚ್​ 10: ನಿಗೂಢವಾಗಿ ನಾಪತ್ತೆಯಾಗಿದ್ದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ (Bantwala) ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ‌, ವಿದ್ಯಾರ್ಥಿ ದಿಗಂತ್ ಪತ್ತೆಗೆ ಆಗ್ರಹಿಸಿ ಪ್ರತಿಭಟಿಸಿದ್ದ ಭಜರಂಗದಳ (Bajrangdal) ಮುಖಂಡ ಭರತ್ ಕುಮ್ಡೇಲ್​ ಅವರಿಗೆ ಸಾಮಾಜಿಕ ತಾಣಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. BEARY_ROYAL_NAWAB, ಬ್ಯಾರಿ ಟ್ರೋಲರ್, ಮಂಗಳೂರು ಕಿಂಗ್ ಎಂಬ ಹೆಸರಿನ ಪೇಜ್​ಗಳ ಮುಖಾಂತರ ಕೊಲೆ ಬೆದರಿಕೆ ಹಾಕಲಾಗಿದೆ.

ದಿಗಂತ್ ಪತ್ತೆಗಾಗಿ ಮಾರ್ಚ್​ 1ರಂದು ಭಜರಂಗದಳ ಮುಖಂಡ ಭರತ್ ನೇತೃತ್ವದಲ್ಲಿ ಫರಂಗೀಪೇಟೆ ಬಂದ್ ನಡೆಸಲಾಗಿತ್ತು. ದಿಗಂತ್ ನಾಪತ್ತೆ ಹಿಂದೆ ಅನ್ಯಮತೀಯರ ಹಾಗೂ ಗಾಂಜಾ ಗ್ಯಾಂಗ್ ಕೈವಾಡ ಎಂದು ಪ್ರತಿಭಟನೆ ವೇಳೆ ಭರತ್ ಕುಮ್ಡೇಲು ಆರೋಪಿಸಿದ್ದರು.

ಇದೀಗ, ವಿದ್ಯಾರ್ಥಿ ದಿಗಂತ್ ಪತ್ತೆಯಾದ ಬೆನ್ನಲ್ಲೇ ಸಾಮಾಜಿ ಜಾಲತಾಣದಲ್ಲಿ ಕಿಡಿಗೇಡಿಗಳು ಭರತ್ ಕುಮ್ಡೇಲುಗೆ ಬೆದರಿಕೆ ಹಾಕಿದ್ದಾರೆ. “ಭರತ್‌ ಕುಮ್ಮೇಲು ರಕ್ತ ಈ ಭೂಮಿಗೆ ಹರಿಸದೆ ನಮಗೆ ಸಮಾಧಾನವಿಲ್ಲ. ಶಾಂತಿಯುತವಾದ ಪರಂಗಿಪೇಟೆಯಲ್ಲಿ ಕೋಮುಗಲಭೆ ನಡೆಸಲು ಸಂಘ ಪರಿವಾರದ ಅಜಂಡವಿತ್ತು. ಅದು ನಡೆಯಲಿಲ್ಲ, ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ ಕೋಮು ಬಣ್ಣ ಬಳಿಯಲು ನೋಡಿದರು. ಆದರೆ, ಪೊಲೀಸ್‌ ಇಲಾಖೆಯ ಕಠಿಣ ಶ್ರಮದಿಂದ ಚಾನ್ಸ್ ಸಿಕ್ಕಿಲ್ಲ. ದಿಗಂತ್ ಪತ್ತೆಹಚ್ಚಿದ ಪೊಲೀಸ್‌ ಇಲಾಖೆಗೆ ಅಭಿನಂದನೆಗಳು. ದಿಗಂತ್ ಅಪರಣ ಪ್ರಕರಣವನ್ನು ಭರತ್‌ ಕುಮ್ಮೇಲು ಮುಸಲ್ಮಾನರ ತಲೆಗೆ ಕಟ್ಟುವ ಹುನ್ನಾರವಿತ್ತು.”

ಇದನ್ನೂ ಓದಿ
ಪಿಯುಸಿ ಪರೀಕ್ಷೆ ಭಯದಿಂದ ಮನೆಬಿಟ್ಟು ಊರೂರು ಸುತ್ತಿದ್ದ ವಿದ್ಯಾರ್ಥಿ ದಿಗಂತ್
ನಿಗೂಢ ನಾಪತ್ತೆಯಾಗಿದ್ದ ಮಂಗಳೂರು ವಿದ್ಯಾರ್ಥಿ ಉಡುಪಿಯಲ್ಲಿ ಪತ್ತೆ
ಮಂಗಳೂರು ವಿದ್ಯಾರ್ಥಿ ನಾಪತ್ತೆ: ಮಂಗಳಮುಖಿಯರ ಜೊತೆ ಹೋದ್ನಾ ದಿಗಂತ?
ವಿದ್ಯಾರ್ಥಿ ನಿಗೂಢ ನಾಪತ್ತೆ: ಸಿಗದ ಸುಳಿವು, ಪೊಲೀಸರಿಗೆ ಹೈಕೋರ್ಟ್ ಸೂಚನೆ

ಇದನ್ನೂ ಓದಿ: ದಿಗಂತ್ ನಾಪತ್ತೆ ಕೆಸ್​ಗೆ ಬಿಗ್​ ಟ್ವಿಸ್ಟ್​: ಎಸ್​ಪಿ ಬಿಚ್ಚಿಟ್ಟ ಸ್ಫೋಟಕ ಮಾಹಿತಿ ಇಲ್ಲಿದೆ

“ಇವನು ಇನ್ನು ಎಲ್ಲಿಯಾದರೂ ಮುಸಲ್ಮಾನರ ಹೆಸರು ಎತ್ತಿದರೆ ಅದೇ ಪ್ರತಿಭಟನೆಗೆ ದಾಳಿ ಮಾಡುತ್ತೇವೆ. ಮತ್ತೆ ಇಲ್ಲಿ ಕೋಮು ಗಲಭೆ ಉಂಟಾದರೆ ನಾವು ಜವಾಬ್ದಾರರಲ್ಲ ಎಚ್ಚರಿಕೆ, ಇವನ ಬಗ್ಗೆ ಕ್ರಮ ತೆಗಿದುಕೊಳ್ಳಿ. ನಮ್ಮ ಸಹೋದರ ಶಾಹಿದ್ ಅಶ್ರಫ್ ಕಲಾಯಿಯನ್ನು ಮರೆತಿಲ್ಲ, ಪ್ರತಿರೋಧ ಅಪರಾಧವಲ್ಲ” ಎಂದು ಪೋಸ್ಟ್ ಹಾಕಲಾಗಿದೆ. ಭರತ್ ಕುಮ್ಡೇಲು 2017ರಲ್ಲಿ ನಡೆದ ಎಸ್​ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆ ಆರೋಪಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ