AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ ಕೇಸ್​: SIT ಮುಂದೆ ಕೊನೆಗೂ ಬುರುಡೆ ರಹಸ್ಯ ಬಿಚ್ಚಿಟ್ಟ ಗಿರೀಶ್ ಮಟ್ಟಣ್ಣವರ್

ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ದೊಡ್ಡ ತಿರುವು ಸಿಕ್ಕಿದೆ. ಸೌಜನ್ಯ ಮಾವ ವಿಠ್ಠಲ್​ಗೌಡನೇ ನಮಗೆ ಬುರುಡೆ ತಂದುಕೊಟ್ಟಿರುವುದು ಎಂದು ಸಾಮಾಜಿಕ ಹೋರಾಟಗಾರ ಗಿರೀಶ್​ ಮಟ್ಟಣ್ಣನವರ್, ಎಸ್​ಐಟಿ ಮುಂದೆ ಸ್ಫೋಟಕ ಹೇಳಿಕೆ ನೀಡಿರುವುದು ಮತ್ತಷ್ಟು ಪ್ರಕರಣ ಗಂಭೀರ ಪಡೆದುಕೊಂಡಿದೆ.

ಧರ್ಮಸ್ಥಳ ಕೇಸ್​: SIT ಮುಂದೆ ಕೊನೆಗೂ ಬುರುಡೆ ರಹಸ್ಯ ಬಿಚ್ಚಿಟ್ಟ ಗಿರೀಶ್ ಮಟ್ಟಣ್ಣವರ್
ಚಿನ್ನಯ್ಯ, ಗಿರೀಶ್ ಮಟ್ಟಣ್ಣವರ್, ವಿಠಲ್​ ಗೌಡ​
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 07, 2025 | 1:51 PM

Share

ಮಂಗಳೂರು, ಸೆಪ್ಟೆಂಬರ್​ 07: ಧರ್ಮಸ್ಥಳ ಬುರುಡೆ ಪ್ರಕರಣದ (Dharmasthala Case) ಒಂದೊಂದೆ ಸತ್ಯಗಳು ಹೊರ ಬರುತ್ತಿವೆ.  ಇಷ್ಟು ದಿನ ಬುರುಡೆ ಕಥೆ ಕೇಳಿ ಗುಂಡಿ ತೋಡಿದ್ದ ಎಸ್​​ಐಟಿ ಅಧಿಕಾರಿಗಳಿಗೂ ಪಿತ್ತ ನೆತ್ತಿಗೇರಿತ್ತು. ತನಿಖೆ ವೇಳೆ ಒಬ್ಬೊಬ್ಬರದ್ದೂ ಒಂದೊಂದು ಹೇಳಿಕೆ ನೀಡಿದ್ದರು. ಜಯಂತ್​.ಟಿ ನೋಡಿದರೆ ನಾನು ಕೊಟ್ಟಿರೋದು ಅಲ್ಲ, ಗಿರೀಶ್ ಮಟ್ಟಣ್ಣನವರ್ (Girish Mattannavar) ​​ ಬುರುಡೆ ಕೊಟ್ಟಿರೋದು ಅಂತಾ ಆರೋಪಿಸಿದ್ದರು. ಮೊನ್ನೆ ಗಿರೀಶ್​ ಮಣ್ಣನವರ್​​ನ ವಿಚಾರಣೆ ಮಾಡಿದರೆ ನನಗೇನೂ ಗೊತ್ತಿಲ್ಲ ಅಂದಿದ್ದರು. ಇದೀಗ ಸತತ ನಾಲ್ಕೈದು ದಿನಗಳ ಕಾಲ ವಿಚಾರಣೆ ನಡೆಸಿ ಬೆಂಡೆತ್ತಿದಾಗ, ಸೌಜನ್ಯ ಮಾವ ವಿಠ್ಠಲ್​ ಗೌಡರ ಹೆಸರು ಮುನ್ನೆಲೆಗೆ ಬಂದಿದೆ.

ಮಟ್ಟಣ್ಣನವರ್ ಹೇಳಿಕೆ ಕೇಳಿ ಎಸ್​ಐಟಿಯೇ ಶಾಕ್!

ಧರ್ಮಸ್ಥಳ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಎಸ್​ಐಟಿಗೆ ಬುರುಡೆ ಕಥೆ ಹಿಂದಿನ ಸ್ಫೋಟಕ ಮಾಹಿತಿಗಳೇ ಸಿಗುತ್ತಿವೆ. ಸೌಜನ್ಯ ಮಾವ ವಿಠ್ಠಲ್​ಗೌಡನೇ ನಮಗೆ ಬುರುಡೆ ತಂದುಕೊಟ್ಟಿರುವುದು ಅಂತಾ ಸಾಮಾಜಿಕ ಹೋರಾಟಗಾರ ಗಿರೀಶ್​ ಮಟ್ಟಣ್ಣನವರ್, ಎಸ್​ಐಟಿ ಮುಂದೆ ಸ್ಫೋಟಕ ಹೇಳಿಕೆ ಕೊಟ್ಟಿರೋದು ಮತ್ತಷ್ಟು ಪ್ರಕರಣ ಗಂಭೀರ ಪಡೆದುಕೊಂಡಿದೆ.

ಇದನ್ನೂ ಓದಿ: ಧರ್ಮಸ್ಥಳ ಕೇಸ್​: ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟಿದ್ದೇ ಸೌಜನ್ಯ ಮಾವ ವಿಠ್ಠಲ ಗೌಡ!

ಇದನ್ನೂ ಓದಿ
Image
ಚಿನ್ನಯ್ಯನಿಗೆ ಬುರುಡೆ ತಂದುಕೊಟ್ಟಿದ್ದೇ ಸೌಜನ್ಯ ಮಾವ ವಿಠ್ಠಲ ಗೌಡ!
Image
ಧರ್ಮಸ್ಥಳ ಶವ ಹೂತಿಟ್ಟ ಕೇಸ್​: ಚಿನ್ನಯ್ಯಗೆ 14 ದಿನ ನ್ಯಾಯಾಂಗ ಬಂಧನ
Image
ಚಿನ್ನಯ್ಯನಿಗೆ ಎಸ್​ಐಟಿ ಗ್ರಿಲ್: ‘ಬುರುಡೆ’ ಕೊಟ್ಟಿದ್ದೇ ಜಯಂತ್!
Image
ಧರ್ಮಸ್ಥಳ ಪ್ರಕರಣ: ಬೆಂಗಳೂರಿನಲ್ಲೇ ಷಡ್ಯಂತ್ರಕ್ಕೆ ಮಹಾ ಸ್ಕೆಚ್!

ಗಿರೀಶ್ ಮಟ್ಟಣ್ಣನವರ್ ಹೇಳಿಕೆ ಕೇಳಿ ಎಸ್​ಐಟಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ ಅಂತೆ. ನಮಗೆ ಸೌಜನ್ಯ ಮಾವ ವಿಠ್ಠಲ್​ಗೌಡರೇ ಬುರುಡೆ ತಂದುಕೊಟ್ಟಿರೋದು, ಮಾಸ್ಕ್​ಮ್ಯಾನ್ ಚಿನ್ನಯ್ಯ ತೋರಿಸಿದ 11A ಸ್ಪಾಟ್​ನ ಸ್ವಲ್ಪ ದೂರದಲ್ಲೇ ಬುರುಡೆ ಸಿಕ್ಕಿರೋದು. ಬಂಗ್ಲಗುಡ್ಡ ಕಾಡಿನಿಂದಲೇ ತಂದಿರೋ ಬುರುಡೆಯನ್ನ ನಮಗೆ ಕೊಟ್ಟಿದ್ದಾರೆ ಅಂತಾ ವಿಚಾರಣೆಯಲ್ಲಿ ಗಿರೀಶ್ ಮಟ್ಟಣ್ಣನವರ್ ಬಾಯ್ಬಿಟ್ಟಿದ್ದಾರಂತೆ.

ಸೌಜನ್ಯ ಮಾವ ವಿಠಲ್​ ಗೌಡ​ಗೂ ಎಸ್​ಐಟಿ ಗ್ರಿಲ್

ಗಿರೀಶ್​ ಮಟ್ಟಣ್ಣನವರ್ ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸೌಜನ್ಯ ಮಾವ ವಿಠ್ಠಲ್​ಗೌಡರನ್ನ ಎಸ್​ಐಟಿ ಅಧಿಕಾರಿಗಳು ಬೆಂಡೆತ್ತಿದ್ದು, ಹಂತ ಹಂತವಾಗಿ ಬುರುಡೆ ರಹಸ್ಯವನ್ನ ತೆರೆದಿಟ್ಟಿದ್ದಾರೆ. ನನಗೆ ಸ್ಥಳದಲ್ಲಿ ಕೇವಲ ಬುರುಡೆ ಮಾತ್ರ ಸಿಕ್ಕಿರೋದು, ಮರದ ಕೆಳಗೆ ಭೂಮಿ ಮೇಲ್ಭಾಗದಲ್ಲಿ ನನಗೆ ಬುರುಡೆ ಸಿಕ್ಕಿದ್ದು ಅಂತಾ ಎಸ್​ಐಟಿ ವಿಚಾರಣೆಯಲ್ಲಿ ಸೌಜನ್ಯ ಮಾವ ವಿಠ್ಠಲ್​ಗೌಡ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ. ಹಾಗಾದರೆ ಇವರು ಹೇಳ್ತಿರೋ ಪ್ರಕಾರ ಬುರುಡೆ ಸಿಕ್ಕಮೇಲೆ ಅಸ್ಥಿಪಂಜರವೂ ಸಿಗಬೇಕು, ಹಾಗಾಗಿ ಎಸ್​ಐಟಿ, ಕಾಡಿನಲ್ಲಿ ಅಸ್ಥಿಪಂಜರಕ್ಕಾಗಿ ಹುಡುಕಾಟ ನಡೆಸುತ್ತಿದೆ.

ಚಿನ್ನಯ್ಯನನ್ನು ಗ್ಯಾಂಗ್​ಗೆ ಪರಿಚಯಿಸಿದ್ದ ವಿಠಲಗೌಡ

ಇನ್ನು ಇಂಟ್ರಸ್ಟಿಂಗ್ ವಿಚಾರ ಏನಂದರೆ, ಸೌಜನ್ಯ ಮಾವ ಆಗಿರುವ ವಿಠ್ಠಲ್​ಗೌಡನಿಗೆ ಮಾಸ್ಕ್​ಮ್ಯಾನ್​ ಚಿನ್ನಯ್ಯ ಮೊದಲೇ ಪರಿಚಯ ಇರೋ ವಿಚಾರ ಇದೀಗ ಗೊತ್ತಾಗಿದೆ. 2 ವರ್ಷದ ಹಿಂದೆ ಉಜಿರೆಯಲ್ಲಿ ಚಿನ್ನಯ್ಯ ಕೆಲಸ ಮಾಡುತ್ತಿದ್ದ. ಇದೇ ವೇಳೆ ವಿಠ್ಠಲ್​ಗೌಡನ ಕಣ್ಣಿಗೆ ಚಿನ್ನಯ್ಯ ಬಿದ್ದಿದ್ದ. ಇಬ್ಬರ ನಡುವೆಯೂ ಪರಿಚಯ ಕೂಡ ಆಗುತ್ತೆ. ಕಾನೂನು ಪ್ರಕ್ರಿಯೆಗೆ ಒಳಪಟ್ಟ ಅಪರಿಚಿತ ಶವಗಳನ್ನ ಚಿನ್ನಯ್ಯ ಹೂಳ್ತಿರೋ ವಿಚಾರವೂ ವಿಠ್ಠಲ್​ಗೌಡನಿಗೆ ಗೊತ್ತಿತ್ತು. ಇದೇ ವಿಚಾರವನ್ನ ಬಂಡವಾಳ ಮಾಡಿಕೊಂಡ ವಿಠ್ಠಲ್​ಗೌಡ, ಗ್ಯಾಂಗ್​ಗೆ ಚಿನ್ನಯ್ಯನನ್ನ ಪರಿಚಯಿಸುತ್ತಾನೆ. ನಂತರದಲ್ಲಿ ಬುರುಡೆ ಕಥೆ ಕಟ್ಟಿ ಷಡ್ಯಂತ್ರ ಮಾಡಿರುವ ಆರೋಪ ಇದೀಗ ಕೇಳಿ ಬಂದಿದೆ. ಇದೆಲ್ಲವೂ ಎಸ್​ಐಟಿ ವಿಚಾರಣೆಯಲ್ಲಿ ಬಯಲಾಗಿದೆ.

ಬುರುಡೆ ತಂದಿದ್ದು ಯಾವಾಗ ಗೊತ್ತಾ?

ಒಂದು ವರ್ಷದ ಹಿಂದೆ ಈ ಬುರುಡೆ ತರಲಾಗಿದೆ. ಕಳೆದ ಮಳೆಗಾಲದ ವೇಳೆ ಬಂಗ್ಲೆಗುಡ್ಡ ಬಳಿ ವಿಠಲಗೌಡ ಬುರುಡೆ ತಂದಿದ್ದ. ಅಂದಿನಿಂದ ಒಂದು ವರ್ಷಗಳ ಕಾಲ ಬುರುಡೆ ಗ್ಯಾಂಗ್ ಬಳಿ ಇತ್ತು ಎಂಬುವುದು ಎಸ್​ಐಟಿ ವಿಚಾರಣೆ ವೇಳೆ ಬಯಲಾಗಿದೆ.

ಇದನ್ನೂ ಓದಿ: ಚಿನ್ನಯ್ಯನಿಗೆ ಎಸ್​ಐಟಿ ಗ್ರಿಲ್: ‘ಬುರುಡೆ’ ಕೊಟ್ಟಿದ್ದೇ ಜಯಂತ್! ಮತ್ತಷ್ಟು ಸ್ಫೋಟಕ ಸಂಗತಿ ಬಹಿರಂಗ

ಇಷ್ಟೆಲ್ಲಾ ಮಾಹಿತಿ ಸಿಕ್ಕಿದರೂ ಎಸ್​ಐಟಿ ಮಾತ್ರ ವಿಚಾರಣೆಯನ್ನ ನಿಲ್ಲಿಸ್ತಿಲ್ಲ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತೀವ್ರ ವಿಚಾರಣೆ ನಡೆಸುತ್ತಿದೆ. ಮಟ್ಟಣ್ಣನವರ್, ಜಯಂತ್​ಗೆ ಎಸ್​​ಐಟಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದೆ. ಜಯಂತ್​ಗೆ 4ನೇ ದಿನವೂ ವಿಚಾರಣೆ ಬಿಸಿ ತಟ್ಟಿದರೆ, ಮಟ್ಟಣ್ಣನವರ್​ಗೆ 3ನೇ ದಿನವೂ ಗ್ರಿಲ್ ಮಾಡಲಾಗ್ತಿದೆ. ವಿಠ್ಠಲ್​ಗೌಡನನ್ನ ನಿನ್ನೆಯಿಂದ ಎಸ್​ಐಟಿ ಠಾಣೆಯಲ್ಲೇ ಇರಿಸಿಕೊಂಡು ವಿಚಾರಣೆ ಮಾಡಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.