ಫಾಜಿಲ್ ಹತ್ಯೆ ಪ್ರಕರಣ: ಶೀಘ್ರದಲ್ಲೇ ಕೊಲೆ ಆರೋಪಿಗಳನ್ನು ಬಂಧಿಸಲಾಗುವುದು; ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್
ಫಾಜಿಲ್ ಹತ್ಯೆ ಪ್ರಕರಣ ಹಿನ್ನೆಲೆ ಕರಾವಳಿ ಕೋಮು ಕಿಚ್ಚಿಗೆ ಯುವಕ ಫಾಜಿಲ್ ಬಲಿಯಾದ್ನಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.
ಮಂಗಳೂರು: ನಿಷೇಧಾಜ್ಞೆ ಜಾರಿಯಲ್ಲಿದೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಶೀಘ್ರದಲ್ಲೇ ಕೊಲೆ ಆರೋಪಿಗಳನ್ನು ಬಂಧಿಸಲಾಗುವುದು. ಸೂಕ್ಷ್ಮ ಪರಿಸ್ಥಿತಿ ಹಿನ್ನೆಲೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿಕೆ ನೀಡಿದರು. ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಲಾಗಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ 19 ಚೆಕ್ಪೋಸ್ಟ್ ಸ್ಥಾಪನೆ ಮಾಡಿದ್ದು, ಪ್ರತಿ ಚೆಕ್ಪೋಸ್ಟ್ನಲ್ಲಿ 7 ರಿಂದ 8 ಸಿಬ್ಬಂದಿ ಇರಲಿದ್ದಾರೆ. ಚೆಕ್ಪೋಸ್ಟ್ನಲ್ಲಿ ಸಿಬ್ಬಂದಿ 24×7 ಕಾರ್ಯನಿರ್ವಹಿಸುತ್ತಾರೆ. ಭಯದ ವಾತಾವರಣ ಹೋಗಲಾಡಿಸಲು ರೂಟ್ ಮಾರ್ಚ್ ಮಾಡಲಾಗಿದೆ. ಸಾರ್ವಜನಿಕರು ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ತನಿಖೆ ಒಳ್ಳೆ ರೀತಿಯಲ್ಲಿ ಹೋಗುತ್ತಿದೆ ಆರೋಪಿಗಳು ಆದಷ್ಟು ಬೇಗ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ಇದನ್ನೂ ಓದಿ; ಪ್ರವೀಣ್ ಹತ್ಯೆ ಪ್ರಕರಣ: ಸರ್ಕಾರದ ಒತ್ತಡಕ್ಕೆ ಮಣಿದು ಇಬ್ಬರನ್ನು ಬಂಧಿಸಿದ ಪೊಲೀಸರು? ಪೊಲೀಸರ ನಡೆ ಮೇಲೆ ಬೆಟ್ಟದಷ್ಟು ಅನುಮಾನ
ಫಾಜಿಲ್ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ 21 ಶಂಕಿತರು ವಶಕ್ಕೆ
ಇನ್ನೂ ಫಾಜಿಲ್ ಹತ್ಯೆ ಪ್ರಕರಣ ಹಿನ್ನೆಲೆ ಕರಾವಳಿ ಕೋಮು ಕಿಚ್ಚಿಗೆ ಯುವಕ ಫಾಜಿಲ್ ಬಲಿಯಾದ್ನಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಫಾಜಿಲ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ಫಾಜಿಲ್ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ 21 ಶಂಕಿತರನ್ನ ನಿನ್ನೆ ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ 21 ಶಂಕಿತರ ಪೈಕಿ ಹತ್ಯೆಯಲ್ಲಿ 6 ಜನರ ಪಾತ್ರ ಇರುವುದು ದೃಢಪಟ್ಟಿರುವ ಹಿನ್ನೆಲೆ ಬಂಧಿಸಲು ಮಂಗಳೂರು ಪೊಲೀಸರ ಸಿದ್ಧತೆ ನಡೆಸಿದ್ದು, ಈ ಕುರಿತು ಸಂಜೆಯೊಳಗೆ ಪೊಲೀಸರು ದೃಢಪಡಿಸಲಿದ್ದಾರೆ.
ನಿಷೇಧಾಜ್ಞೆ ಉಲ್ಲಂಘಿಸಿದ 14 ಜನ ವಶಕ್ಕೆ
ಫಾಜಿಲ್ ಹತ್ಯೆ ಪ್ರಕರಣ ಸಂಬಂಧ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿಕೆ ನೀಡಿದ್ದು, ಫಾಜಿಲ್ ಹತ್ಯೆಯ ನಂತರ ಅನುಮಾನಾಸ್ಪದವಾಗಿ ಕಂಡುಬಂದ 12 ಜನರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ. ನಿಷೇಧಾಜ್ಞೆ ಉಲ್ಲಂಘಿಸಿದ 14 ಜನರನ್ನು ವಶಕ್ಕೆ ಪಡೆದಿದ್ದೇವೆ. ಫಾಜಿಲ್ ಹತ್ಯೆ ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯಗಳನ್ನಾಧರಿಸಿ ಕೆಲವರನ್ನ ವಶಕ್ಕೆ ಪಡೆದಿದ್ದೇವೆ. ಎಲ್ಲವೂ ಶಾಂತಿಯುತವಾಗಿ ನಡೆಯುತ್ತಿದೆ. ಸುರತ್ಕಲ್ನ ಗಣೇಶಪುರದಲ್ಲಿ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ ಎಂದು ಹೇಳಿದರು.