Mangaluru: ಮಂಗಳೂರಿನಲ್ಲಿ ಆಳವಾದ ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

ಮಂಗಳೂರಿನ ಕಿನ್ಯಾದಲ್ಲಿ ಜಿಂಕೆಯೊಂದು ಬಾವಿಗೆ ಬಿದ್ದಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಕೂಡಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬಾವಿಗೆ ಇಳಿದು ಜಿಂಕೆಯನ್ನು ರಕ್ಷಿಸಿದ್ದಾರೆ.

Mangaluru: ಮಂಗಳೂರಿನಲ್ಲಿ ಆಳವಾದ ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ
ಮಂಗಳೂರಿನ ಬಾವಿಗೆ ಬಿದ್ದ ಜಿಂಕೆ
Updated By: ಸುಷ್ಮಾ ಚಕ್ರೆ

Updated on: Mar 26, 2022 | 7:19 PM

ಮಂಗಳೂರು: ಮಂಗಳೂರಿನ ಕಿನ್ಯಾದಲ್ಲಿ ಆಳವಾದ ಬಾವಿಗೆ ಬಿದ್ದಿದ್ದ ಜಿಂಕೆಯನ್ನು (Deer) ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಶುಕ್ರವಾರ ರಕ್ಷಿಸಿರುವ ಫೋಟೋ (Photos Viral), ವಿಡಿಯೋಗಳು (Video Viral) ಭಾರೀ ವೈರಲ್ ಆಗಿವೆ. ಬಾವಿಯೊಳಗೆ ಇಳಿದು ರಕ್ಷಿಸಿದ ಜಿಂಕೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಜಿಂಕೆಯ ಕಾಲು ಮತ್ತು ಬೆನ್ನೆಲುಬಿನ ಗಾಯಗಳಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಕಿನ್ಯಾದಲ್ಲಿ ಜಿಂಕೆಯೊಂದು ಬಾವಿಗೆ ಬಿದ್ದಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ಕೂಡಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬಾವಿಗೆ ಇಳಿದು ಜಿಂಕೆಯನ್ನು ರಕ್ಷಿಸಿದ್ದಾರೆ. ಎತ್ತರದಿಂದ ಬಾವಿಯೊಳಗೆ ಬಿದ್ದಿದ್ದರಿಂದ ಜಿಂಕೆಯ ಕಾಲಿಗೆ ಗಾಯವಾಗಿದೆ. ಆ ಜಿಂಕೆಯನ್ನು ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ.

ಆಳವಾದ ಬಾವಿಯೊಳಗೆ ಹಗ್ಗವನ್ನು ಇಳಿಬಿಟ್ಟು, ಓರ್ವ ರಕ್ಷಣಾ ಸಿಬ್ಬಂದಿ ಬಾವಿಯೊಳಗೆ ಇಳಿದು, ಜಿಂಕೆಯ ಸುತ್ತಲೂ ಹಗ್ಗವನ್ನು ಸುತ್ತಿ ಜಿಂಕೆಯನ್ನು ಮೇಲಕ್ಕೆ ಎತ್ತಲಾಯಿತು.

ಇದನ್ನೂ ಓದಿ: ಜಿಂಕೆಯ ಮೇಲೆ ದಾಳಿ ಮಾಡಲು ಯತ್ನಿಸಿ ಸೋತ ಚಿರತೆ: ಆಮೇಲಾಗಿದ್ದೇನು? ವಿಡಿಯೋ ನೋಡಿ

viral video: ಜಿಂಕೆಯನ್ನು ಗಾಳಿಯಲ್ಲಿ ಹಾರಿ ಬೇಟೆಯಾಡಿದ ಚಿರತೆ; ಇಲ್ಲಿದೆ ಅಪರೂಪದ ದೃಶ್ಯ