ಮಂಗಳೂರಿನಲ್ಲಿ ಅಮಾನುಷ ಘಟನೆ; ಮೀನುಗಾರಿಕಾ ಬೋಟ್​ನಲ್ಲಿ ವ್ಯಕ್ತಿಯನ್ನು ಉಲ್ಟಾ ನೇತುಹಾಕಿ ಹಲ್ಲೆ

ಮಂಗಳೂರಿನಲ್ಲಿ ಅಮಾನುಷ ಘಟನೆ; ಮೀನುಗಾರಿಕಾ ಬೋಟ್​ನಲ್ಲಿ ವ್ಯಕ್ತಿಯನ್ನು ಉಲ್ಟಾ ನೇತುಹಾಕಿ ಹಲ್ಲೆ
ವ್ಯಕ್ತಿಯನ್ನು ಉಲ್ಟಾ ನೇತುಹಾಕಿ ಹಲ್ಲೆ ನಡೆಸಿದ್ದಾರೆ

ಆಂಧ್ರಪ್ರದೇಶ ಮೂಲದ ವೈಲಾ ಸೀನು ಎಂಬುವವನು ಮೊಬೈಲ್ ಕದ್ದಿದ್ದಾನೆ ಅಂತ ಮೀನುಗಾರರು ಉಲ್ಟಾ ನೇತುಹಾಕಿ ಥಳಿಸಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

TV9kannada Web Team

| Edited By: sandhya thejappa

Dec 23, 2021 | 1:24 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಅಮಾನುಷ ಘಟನೆಯೊಂದು ನಡೆದಿದೆ. ಮೀನುಗಾರಿಕಾ ಬೋಟ್ನಲ್ಲಿ ವ್ಯಕ್ತಿಯೊಬ್ಬರನ್ನು ನೇತುಹಾಕಿ ಹಲ್ಲೆ ನಡೆಸಿದ್ದಾರೆ. ಮೀನುಗಾರರು ವ್ಯಕ್ತಿಯನ್ನು ಉಲ್ಟಾ ನೇತುಹಾಕಿ ಥಳಿಸಿದ್ದಾರೆ. ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಟಿವಿ9ಗೆ ಲಭ್ಯವಾಗಿದ್ದು, ಮೊಬೈಲ್ ಕಳ್ಳತನ ಮಾಡಿದ್ದಾನೆಂದು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆಂಧ್ರಪ್ರದೇಶ ಮೂಲದ ವೈಲಾ ಸೀನು ಎಂಬುವವನು ಮೊಬೈಲ್ ಕದ್ದಿದ್ದಾನೆ ಅಂತ ಮೀನುಗಾರರು ಉಲ್ಟಾ ನೇತುಹಾಕಿ ಥಳಿಸಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಸೆಕ್ಷನ್ 143, 147, 148, 323, 324, 307, 364, 342, 506, 149ರಡಿ ಕೇಸ್ ದಾಖಲಾಗಿದೆ.

ಆರೋಪಿಗಳು ಅರೆಸ್ಟ್ ಬೋಟ್‌ನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ 6 ಮಂದಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಕೊಂಡೂರು ಪೋಲಯ್ಯ(23), ಅವುಲ ರಾಜ್‌ಕುಮಾರ್(26), ಕಾಟಂಗರಿ‌ ಮನೋಹರ್(21), ವೊಟುಕೋರಿ ಜಾಲಯ್ಯ(30), ಕಲಪಿಂಗಾರ ರವಿ(23) ಪ್ರಲಯ ಕಾವೇರಿ ಗೋವಿಂದಯ್ಯ(47) ಎಂಬುವವರು ಅರೆಸ್ಟ್ ಆಗಿದ್ದಾರೆ.

ಕೃಷ್ಣಾ ನದಿಯಲ್ಲಿ ಮಹಿಳೆಯ ಶವ ಪತ್ತೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಬಳಿ ಕೃಷ್ಣಾ ನದಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ರಬಕವಿಯ ಕುಂಬಾರ ಗಲ್ಲಿಯ ನಿವಾಸಿ ಸುಮಿತ್ರಾ ಕೊಣ್ಣೂರ ಎಂಬ ಮಹಿಳೆ ಮೃತದೇಹ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಮಹಿಳೆ ಮದುವೆಗೆ ಎಂದು ಮನೆ ಬಿಟ್ಟು ಹೋಗಿದ್ದರು. ಸದ್ಯ ಕೃಷ್ಣಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೊಬೈಲ್ ಕಸಿದು ಪರಾರಿಯಾಗಿದ್ದ ಆರೋಪಿ ಬಂಧನ ಕದ್ದ ಸ್ಕೂಟರ್‌ನಲ್ಲಿ ಬಂದು ಮೊಬೈಲ್ ಕಸಿದು ಪರಾರಿಯಾಗಿದ್ದ ಆರೋಪಿಯನ್ನು ಬೆಂಗಳೂರು ಉಪ್ಪಾರಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಯಾಸಿನ್ ಬಂಧಿತ ಆರೋಪಿ. ಡಿ.17ರ ರಾತ್ರಿ ಉಪ್ಪಾರಪೇಟೆ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿತ್ತು. ಏರ್ ಫೋರ್ಸ್ ಸಿಬ್ಬಂದಿಯ ಮೊಬೈಲ್ ಕಸಿದು ಇಬ್ಬರು ಪರಾರಿಯಾಗಿದ್ದರು. ಸದ್ಯ ಓರ್ವ ಆರೋಪಿಯ ಬಂಧನಕ್ಕೊಳಗಾಗಿದ್ದು, ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ

Short Story Writing : ಅಭಿಜ್ಞಾನ ; ‘ಗಿಣಿಯೋ ಮಾರಾಯ, ನಮ್ಮ ಬಳ್ಳಾರಿ ಗಣಿಮಣ್ಣು ಮೆತ್ತಿಗೊಂಡು ಹಂಗೆ ಕೆಂಪಾಗ್ಯದೆ’

ಬೆಂಗಳೂರಿನಲ್ಲಿ ಕೋಟಿ ಕೋಟಿ ರೂ. ಹವಾಲಾ ದಂಧೆ ಬೆಳಕಿಗೆ! ಕೆಲ ಸ್ಫೋಟಕ ಮಾಹಿತಿ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada