ನವರಾತ್ರಿ ಪ್ರಯುಕ್ತ ಮುಸ್ಲಿಂ ನೇಕಾರರಿಂದ ಮಂಗಳೂರಿನ ಶಾರದಾ ದೇವಿಗೆ 8 ಲಕ್ಷ ರೂ. ಮೌಲ್ಯದ ಚಿನ್ನದ ಸೀರೆ ಕೊಡುಗೆ

ಈ ಸೀರೆಯು ಸುಮಾರು 2,600 ಚಿನ್ನದ ಹೂವಿನ ವಿನ್ಯಾಸಗಳನ್ನು ಹೊಂದಿದೆ ಮತ್ತು ಒಟ್ಟು 11 ಪವನ್ ಚಿನ್ನ ಮತ್ತು 700 ಗ್ರಾಂ ಬೆಳ್ಳಿಯನ್ನು ಹೊಂದಿದೆ.

ನವರಾತ್ರಿ ಪ್ರಯುಕ್ತ ಮುಸ್ಲಿಂ ನೇಕಾರರಿಂದ ಮಂಗಳೂರಿನ ಶಾರದಾ ದೇವಿಗೆ 8 ಲಕ್ಷ ರೂ. ಮೌಲ್ಯದ ಚಿನ್ನದ ಸೀರೆ ಕೊಡುಗೆ
ಮಂಗಳೂರಿನಲ್ಲಿ ಶಾರದಾ ದೇವಿಗೆ ಅಲಂಕಾರ
TV9kannada Web Team

| Edited By: Sushma Chakre

Sep 28, 2022 | 3:30 PM

ಮಂಗಳೂರು: ಮಂಗಳೂರಿನಲ್ಲಿಯೂ ನವರಾತ್ರಿ ಉತ್ಸವ (Navaratri Festival) ಬಹಳ ವಿಶೇಷವಾಗಿರುತ್ತದೆ. ಈಗಾಗಲೇ ದಸರಾ ಆರಂಭವಾಗಿರುವುದರಿಂದ ಮಂಗಳೂರಿನಲ್ಲಿ (Mangaluru Dasara) ಹಬ್ಬ ಕಳೆಗಟ್ಟಿದೆ. ಈ ಬಾರಿ ಮಂಗಳೂರಿನ ರಥಬೀದಿಯ ಶಾರದಾ ಮಹೋತ್ಸವದ ಶತಮಾನೋತ್ಸವದ ಪ್ರಯುಕ್ತ ಶಾರದಾ ದೇವಿಯ ವಿಗ್ರಹವನ್ನು ಅಲಂಕರಿಸಲು ಉತ್ತರ ಪ್ರದೇಶದ (Uttar Pradesh) ಜ್ಞಾನವಾಪಿಯ ಮುಸ್ಲಿಂ ನೇಕಾರರು 8 ಲಕ್ಷ ರೂ. ಮೌಲ್ಯದ ಚಿನ್ನದ ಕಸೂತಿ ಹೊಂದಿರುವ ಸೀರೆಯನ್ನು ನೀಡಿದ್ದಾರೆ. ಜೊತೆಗೆ ಶಾರದಾ ದೇವಿಯನ್ನು ಚಿನ್ನದ ವೀಣೆ ಮತ್ತು ಚಿನ್ನದ ನವಿಲು ಹಾಗೂ ಬೆಳ್ಳಿಯ ಪ್ರಭಾವಳಿಯಿಂದ ಅಲಂಕರಿಸಲಾಗುತ್ತದೆ.

ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದಲ್ಲಿ ಸೋಮವಾರ ಪ್ರತಿಷ್ಠಾಪಿಸಲಾದ ದೇವಿಯ ವಿಗ್ರಹವನ್ನು 8 ಮೀಟರ್ ಉದ್ದದ ಹಸಿರು ಬನಾರಸ್ ರೇಷ್ಮೆ ಸೀರೆಯಿಂದ ಅಲಂಕರಿಸಲಾಗಿದೆ. ಅಕ್ಟೋಬರ್ 6ರಂದು ‘ಶೋಭಾಯಾತ್ರೆ’ ಕಾರ್ಯಕ್ರಮ ನಡೆಯಲಿದೆ. ಈ ದೇವಿಗೆ ಸಾಮಾನ್ಯವಾಗಿ ಬೆಳ್ಳಿಯ ಝರಿ ಅಂಚು ಇರುವ ಬನಾರಸಿ ರೇಷ್ಮೆ ಸೀರೆಗಳನ್ನು ಉಡಿಸಲಾಗುತ್ತದೆ. ಇದರ ಬೆಲೆ ಸುಮಾರು 2 ಲಕ್ಷ ರೂ. ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: Navratri: ನವರಾತ್ರಿಯ ನಾಲ್ಕು ಮತ್ತು ಐದನೇಯ ದಿನದ ದೇವಿಯ ಸ್ವರೂಪ ಮತ್ತು ನೈವೇದ್ಯ ಭಕ್ಷ್ಯ ಯಾವುದು?

ಶಾರದಾ ದೇವಿಯ ಸೀರೆಗಳನ್ನು ಪ್ರತಿ ವರ್ಷ ಕುಲ್ಯಾಡಿಕರ ಸುಧೀರ್ ಪೈ ಪ್ರಾಯೋಜಿಸುತ್ತಿದ್ದರು. ಆದರೆ, 100ನೇ ವರ್ಷದ ಸಂಭ್ರಮಾಚರಣೆಯ ನಿಮಿತ್ತ ಚಿನ್ನದ ಝರಿಯ ಸೀರೆಯನ್ನು ಪ್ರಾಯೋಜಿಸಲು ನಿರ್ಧರಿಸಿದ್ದಾರೆ. ಮುಸ್ಲಿಂ ನೇಕಾರರ ಗುಂಪು ಈ ಸೀರೆಯನ್ನು ಕೈಯಿಂದ ತಯಾರಿಸಿದೆ. ಇದನ್ನು ಸಿದ್ಧಪಡಿಸಲು ಅವರಿಗೆ ಸುಮಾರು ಒಂದೂವರೆ ತಿಂಗಳು ಬೇಕಾಯಿತು ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಈ ಸೀರೆಯು ಸುಮಾರು 2,600 ಚಿನ್ನದ ಹೂವಿನ ವಿನ್ಯಾಸಗಳನ್ನು ಹೊಂದಿದೆ ಮತ್ತು ಒಟ್ಟು 11 ಪವನ್ ಚಿನ್ನ ಮತ್ತು 700 ಗ್ರಾಂ ಬೆಳ್ಳಿಯನ್ನು ಹೊಂದಿದೆ.

ದಸರಾ ಉತ್ಸವದ ಮೊದಲ ದಿನ ದೇವಿಗೆ ಸರಸ್ವತಿ ಅಲಂಕಾರ ಮಾಡಲಾಗಿತ್ತು. ‘ಸರಸ್ವತಿ ಅಲಂಕಾರ’ಕ್ಕಾಗಿ ದೇವಿಗೆ ಬಿಳಿ ಸೀರೆಯನ್ನು ಉಡಿಸಲಾಗಿತ್ತು. ಈ ವರ್ಷ ದೇವಿಗೆ ಚಿನ್ನದ ವೀಣೆ ಮತ್ತು ನವಿಲು ಉಡುಗೊರೆಯಾಗಿ ನೀಡಲಾಗಿದೆ.

ಇದನ್ನೂ ಓದಿ: Mysore Dasara 2022: ವಿಶ್ವವಿಖ್ಯಾತ ಮೈಸೂರು ದಸರಾ 2022: ಈ ಬಾರಿ 41 ಸ್ತಬ್ಧಚಿತ್ರಗಳಿಗೆ ಅವಕಾಶ

ಈ ವರ್ಷ ಮಂಗಳೂರಿನಲ್ಲಿ ನವರಾತ್ರಿ ಮಹೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ. ಮಂಗಳವಾರದಿಂದ ಅಕ್ಟೋಬರ್ 2ರವರೆಗೆ 50 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿರುವ ‘ಸಹಸ್ರ ಚಂಡಿಕಾ ಹವನ’ದಲ್ಲಿ ಪಾಲ್ಗೊಳ್ಳುವ ಸುಮಾರು 30,000 ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಶಾರದಾ ದೇವಿಯನ್ನು ಪೂಜಿಸುವ ಮೂಲಕ ಮಂಗಳೂರಿನಲ್ಲಿ ವಿಶಿಷ್ಟವಾಗಿ ನವರಾತ್ರಿಯನ್ನು ಆಚರಿಸಲಾಗುತ್ತದೆ.

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada