Mysore Dasara 2022: ನಾಡ ಹಬ್ಬ ಮೈಸೂರು ದಸರಾ 2022 ವೀಕ್ಷಣೆಗಾಗಿ ಗೋಲ್ಡ್ ಕಾರ್ಡ್ ವಿತರಣೆ
ವಿಶ್ವವಿಖ್ಯಾತ ನಾಡಹಬ್ಬ ಸಾಂಕೃತಿಕ ಐತಿಹ್ಯ ಹೊಂದಿರುವ ಮೈಸೂರು ದಸರಾ ಮಹೋತ್ಸವ-2022 ವೀಕ್ಷಿಸಲು ದೇಶಿ, ವಿದೇಶಿ ಪ್ರವಾಸಿಗಳಿಗೆ ಅನುಕೂಲವಾಗಲೆಂದು ಸರ್ಕಾರ ಗೋಲ್ಡ್ ಕಾರ್ಡ್ ನೀಡಲು ಮುಂದಾಗಿದೆ.
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಸಾಂಕೃತಿಕ ಐತಿಹ್ಯ ಹೊಂದಿರುವ ಮೈಸೂರು ದಸರಾ ಮಹೋತ್ಸವ-2022 (Mysore Dasara Festival 2022) ವೀಕ್ಷಿಸಲು ದೇಶಿ, ವಿದೇಶಿ ಪ್ರವಾಸಿಗಳಿಗೆ ಅನುಕೂಲವಾಗಲೆಂದು ಸರ್ಕಾರ ಗೋಲ್ಡ್ ಕಾರ್ಡ್ (Gold Card) ನೀಡಲು ಮುಂದಾಗಿದೆ. ಈ ಗೋಲ್ಡ್ ಕಾರ್ಡ್ನ್ನು ಆನ್ಲೈನ್ ಮೂಲಕ ಮಾತ್ರ ಖರೀದಿಸಲು ಅವಕಾಶ ನೀಡಲಾಗಿದೆ. ಪ್ರತಿ ಗೋಲ್ಡ್ ಕಾರ್ಡ್ಗೆ 4,999 ರೂಪಾಯಿ ನಿಗದಿ ಮಾಡಲಾಗಿದೆ. ಈ ಗೋಲ್ಡ್ ಕಾರ್ಡ್ನ್ನು www.mysoredasara.gov.in ವೈಬ್ಸೈಟ್ನಲ್ಲಿ ಖರೀದಿಸಬಹುದಾಗಿದೆ. ಒಬ್ಬರು ಒಂದು ಬಾರಿಗೆ ಗರಿಷ್ಠ 2 ಗೋಲ್ಡ್ ಕಾರ್ಡ್ ಖರೀದಿಸಲು ಅವಕಾಶ ನೀಡಲಾಗಿದೆ. ಆನ್ಲೈನ್ ಪಾವತಿ ದೃಢೀಕರಿಸಿದ ನಂತರ ಗೋಲ್ಡ್ ಕಾರ್ಡ್ ನೀಡಲಾಗುತ್ತದೆ.
29-09-2022ರಿಂದ ಕೆಎಸ್‌ಡಿಟಿಸಿ (ಪ್ರವಾಸೋದ್ಯಮ ಇಲಾಖೆ) ಮಯೂರ ಹೋಟೆಲ್ ಹತ್ತಿರ ಗೋಲ್ಡ್ ಕಾರ್ಡ್ನ್ನು ವಿತರಿಸಲಾಗುತ್ತದೆ. ಬೆಳಗ್ಗೆ 11ರಿಂದ ಸಂಜೆ 5.30ರವರೆಗೆ ಗೋಲ್ಡ್ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ಗೋಲ್ಡ್ ಕಾರ್ಡ್ ಮುಖಾಂತರ ವೀಕ್ಷಿಸಬಹುದಾದ ಸಮಾರಂಭಗಳು
1. ದಸರಾ ಮೆರವಣಿಗೆ ಜಂಬೂಸವಾರಿ ವೀಕ್ಷಣೆಗೆ ಅವಕಾಶ
2. ಬನ್ನಿಮಂಟಪದಲ್ಲಿ ಪಂಜಿನ ಕವಾಯತು ವೀಕ್ಷಣೆಗೆ ಅವಕಾಶ
3. ಪ್ರವಾಸಿ ತಾಣಗಳಿಗೆ ಒಮ್ಮೆ ಮಾತ್ರ ಉಚಿತವಾಗಿ ವೀಕ್ಷಣೆಗೆ ಅವಕಾಶ
4. ಮೈಸೂರು ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ
5. ಚಾಮುಂಡೇಶ್ವರಿ ದೇವಸ್ಥಾನ, ಫಲಪುಷ್ಪ ಪ್ರದರ್ಶನ
6. ದಸರಾ ವಸ್ತು ಪ್ರದರ್ಶನ, ಸೇಂಟ್ ಫಿಲೋಮಿನಾ ಚರ್ಚ್
7. ರೈಲ್ವೆ ಮ್ಯೂಸಿಯಮ್, ಕೆಆರ್ಎಸ್ ಜಲಾಶಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Wed, 28 September 22