ಹೋಂಸ್ಟೇ ಮೇಲೆ ಹಿಂದೂ ಜಾಗರಣಾ ವೇದಿಕೆ ದಾಳಿ: 12 ವರ್ಷ ಬಳಿಕ ಕೇಸ್ ಸುಖಾಂತ್ಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 06, 2024 | 7:16 PM

2012ರ ಜುಲೈ 28ರಂದು ಮಂಗಳೂರಿನ ಪಡೀಲ್ ಬಳಿಯ ಮಾರ್ನಿಂಗ್ ಮಿಸ್ಟ್ ಹೋಂಸ್ಟೇಯಲ್ಲಿ ಬರ್ತ್​ಡೇ ಪಾರ್ಟಿಯಲ್ಲಿ ನಿರತರಾಗಿದ್ದ ಯುವಕ-ಯುವತಿಯರ ಮೇಲೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದರು. ಈ ವೇಳೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು 44 ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ 12 ವರ್ಷ ಬಳಿಕ ಕೇಸ್ ಸುಖಾಂತ್ಯ ಕಂಡಿದೆ.

ಹೋಂಸ್ಟೇ ಮೇಲೆ ಹಿಂದೂ ಜಾಗರಣಾ ವೇದಿಕೆ ದಾಳಿ: 12 ವರ್ಷ ಬಳಿಕ ಕೇಸ್ ಸುಖಾಂತ್ಯ
ಹೋಂಸ್ಟೇ ಮೇಲೆ ಹಿಂದೂ ಜಾಗರಣಾ ವೇದಿಕೆ ದಾಳಿ: 12 ವರ್ಷ ಬಳಿಕ ಕೇಸ್ ಸುಖಾಂತ್ಯ
Follow us on

ದಕ್ಷಿಣ ಕನ್ನಡ, ಆ.06: ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಒಟ್ಟು 44 ಆರೋಪಿಗಳ ಪೈಕಿ ಮೂವರು ಸಾವನ್ನಪ್ಪಿದರು. ಜೊತೆಗೆ ಓರ್ವ ಪತ್ರಕರ್ತ ನವೀನ್ ಸೂರಿಂಜೆ ಪ್ರಕರಣವನ್ನು ನ್ಯಾಯಾಲಯ ಈ ಹಿಂದೆಯೇ ಕೈಬಿಟ್ಟಿತ್ತು. ಇಂದು ಸಾಕ್ಷ್ಯಾಧಾರಗಳ ಕೊರತೆಯಿಂದ ಉಳಿದ 40 ಆರೋಪಿಗಳನ್ನ ದೋಷ ಮುಕ್ತಗೊಳಿಸಿ ನ್ಯಾಯಾಧೀಶ ಕಾಂತರಾಜು ಅವರು ಆದೇಶ ಹೊರಡಿಸಿದ್ದಾರೆ.

12 ವರ್ಷಗಳ ಬಳಿಕ ಮಂಗಳೂರು ಕೋರ್ಟ್​ನಿಂದ ಅಂತಿಮ ತೀರ್ಪು; ಏನಿದು ಘಟನೆ

2012ರ ಜುಲೈ 28ರಂದು ಮಂಗಳೂರಿನ ಪಡೀಲ್ ಬಳಿಯ ಮಾರ್ನಿಂಗ್ ಮಿಸ್ಟ್ ಹೋಂಸ್ಟೇಯಲ್ಲಿ ಬರ್ತ್​ಡೇ ಪಾರ್ಟಿಯಲ್ಲಿ ನಿರತರಾಗಿದ್ದ ಯುವಕ-ಯುವತಿಯರ ಮೇಲೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದರು. ಈ ವೇಳೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು 44 ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಸಂಬಂಧ ಇಬ್ಬರು ಪತ್ರಕರ್ತರನ್ನೂ ಬಂಧಿಸಲಾಗಿತ್ತು. ಇದರಲ್ಲಿ ಓರ್ವ ಪತ್ರಕರ್ತನ ಕೇಸ್ ಸಿದ್ದರಾಮಯ್ಯ ಸರ್ಕಾರ ವಾಪಾಸ್ ಪಡೆದಿತ್ತು.  ಹೀಗಾಗಿ ಮಂಗಳೂರು ಕೋರ್ಟ್ 2018ರಲ್ಲಿ ಪತ್ರಕರ್ತನನ್ನು ಕೇಸ್​ನಿಂದ ಖುಲಾಸೆ ಮಾಡಿತ್ತು.

ಇದನ್ನೂ ಓದಿ:ಬೆಂಗಳೂರು: ಜಾಮೀನಿಗಾಗಿ ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಕೆ!

ಪ್ರಕರಣ ಸಂಬಂಧ ಅಂದು ರಾಜ್ಯ ಮಹಿಳಾ ಆಯೋಗದಿಂದಲೂ ತನಿಖೆ ನಡೆಸಿ ಅಂದಿನ ಗೃಹ ಸಚಿವ ಆರ್.ಅಶೋಕ್​ಗೆ ವರದಿ ಸಲ್ಲಿಸಿದ್ದರು. ಪೊಲೀಸ್ ವೈಫಲ್ಯ ಹಾಗೂ ದಾಳಿಯ ಬಗ್ಗೆ ಡಿಐಜಿ ಗ್ರೇಡ್ ಅಧಿಕಾರಿ ತನಿಖೆಗೆ ಆಯೋಗ ಶಿಫಾರಸ್ಸು ಮಾಡಿದ್ದರು. ಇನ್ನು ಮದ್ಯ ಸೇವಿಸಿ ಅಸಭ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹಿಂಜಾವೇ ಮುಖಂಡ ಸುಭಾಷ್ ಪಡೀಲ್ ನೇತೃತ್ವದಲ್ಲಿ ದಾಳಿ ನಡೆಸಿತ್ತು. ದಾಳಿ ನಡೆಸಿ ಯುವತಿಯರ ಮೇಲೂ ಕಾರ್ಯಕರ್ತರು ಯದ್ವಾತದ್ವಾ ಹಲ್ಲೆ ನಡೆಸಿದ್ದರು. 5 ಹುಡುಗಿಯರು ಸೇರಿದಂತೆ ಪಾರ್ಟಿಯಲ್ಲಿದ್ದ 12 ಜನರನ್ನು ವಿವಸ್ತ್ರಗೊಳಿಸಿ ಥಳಿಸಿದ ಆರೋಪ ಕೇಳಿಬಂದಿತ್ತು.

ರಾಜ್ಯದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ