ಮಂಗಳೂರಿನಲ್ಲಿ ಮುಸ್ಲಿಂ ಯುವಕನ ಮೈಮೇಲೆ ದೈವದ ಆವೇಶ ಬೆನ್ನಲ್ಲೇ ನಡೆಯಿತು ಮತ್ತೊಂದು ಪವಾಡ

ಇದು ತುಳುನಾಡಿನ ದೈವಾರಾಧನೆಯ ಮತ್ತೊಂದು ರೋಚಕ ಸ್ಟೋರಿ. ಎರಡೇ ತಿಂಗಳಲ್ಲಿ ದೈವದ ಮತ್ತೊಂದು ಪವಾಡ ನಡೆದಿದೆ. ಒರಿಸ್ಸಾದ ಮುಸ್ಲಿಂ ಯುವಕನ ಮೈ ಮೇಲೆ ಪಿಲಿಚಾಮುಂಡಿ ದೈವದ ಆವೇಶ ಬಂದ ಘಟನೆ ಪೆರ್ಮುದೆಯ ಕಾಯಾರ್ ಕಟ್ಟೆಯಲ್ಲಿ ನಡೆದಿತ್ತು. ಅದರಂತೆ ನೇಮೋತ್ಸವಕ್ಕೆ ತಯಾರಿ ನಡೆಸುತ್ತಿದ್ದಾಗ ದೈವಸ್ಥಾನದಲ್ಲಿ ಹುಲಿ (ಪಿಲಿಚಾಮುಂಡಿ) ಹೆಜ್ಜೆ ಪತ್ತೆಯಾಗಿದೆ.

ಮಂಗಳೂರಿನಲ್ಲಿ ಮುಸ್ಲಿಂ ಯುವಕನ ಮೈಮೇಲೆ ದೈವದ ಆವೇಶ ಬೆನ್ನಲ್ಲೇ ನಡೆಯಿತು ಮತ್ತೊಂದು ಪವಾಡ
ಪೆರ್ಮುದೆಯ ಕಾಯರ್ ಕಟ್ಟೆಯಲ್ಲಿರುವ ಪಿಲಿಚಾಮುಂಡಿ ದೈವಸ್ಥಾನದಲ್ಲಿ ಪತ್ತೆಯಾದ ಹುಲಿ ಹೆಜ್ಜೆ
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: Rakesh Nayak Manchi

Updated on: Jan 02, 2024 | 6:17 PM

ಮಂಗಳೂರು, ಜ.2: ಇದು ತುಳುನಾಡಿನ ದೈವಾರಾಧನೆಯ ಮತ್ತೊಂದು ರೋಚಕ ಸ್ಟೋರಿ. ಎರಡೇ ತಿಂಗಳಲ್ಲಿ ದೈವದ ಮತ್ತೊಂದು ಪವಾಡ ನಡೆದಿದೆ. ಒರಿಸ್ಸಾದ ಮುಸ್ಲಿಂ ಯುವಕನ ಮೈ ಮೇಲೆ ಪಿಲಿಚಾಮುಂಡಿ ದೈವದ ಆವೇಶ ಬಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ (Mangaluru) ಪೆರ್ಮುದೆಯ ಕಾಯಾರ್ ಕಟ್ಟೆಯಲ್ಲಿ ನಡೆದಿತ್ತು. ಅದರಂತೆ ನೇಮೋತ್ಸವಕ್ಕೆ ತಯಾರಿ ನಡೆಸುತ್ತಿದ್ದಾಗ ದೈವಸ್ಥಾನದಲ್ಲಿ ಹುಲಿ (ಪಿಲಿಚಾಮುಂಡಿ) ಹೆಜ್ಜೆ ಪತ್ತೆಯಾಗಿದೆ.

ಕಳೆದ ಎರಡು ತಿಂಗಳ ಹಿಂದೆ ದೈವಸ್ಥಾನಕ್ಕೆ ಸಂಬಂಧಪಟ್ಟ ತಡೆಗೋಡೆ ನಿರ್ಮಿಸುವ ಸಂದರ್ಭ ಒರಿಸ್ಸಾ ಮೂಲದ ಯುವಕನ ಮೈಮೇಲೆ ಪಿಲಿಚಾಮುಂಡಿ ಆವೇಶ ಬಂದು ಮುನಿಸು ತೋರಿತ್ತು. ದೈವದ ಮುನಿಸಿನ ಬೆನ್ನಲ್ಲೇ ಪ್ರಶ್ನೆ ಇಟ್ಟಾಗ ಪಾಳುಬಿದ್ದ ದೈವಸ್ಥಾನ ಹಾಗೂ ನೇಮೋತ್ಸವ ಸ್ಥಗಿತಗೊಳಿಸಿದ್ದು ಕಾಣಿಸಿದೆ.

ಹೀಗಾಗಿ ಪೆರ್ಮುದೆಯ ಕಾಯಾರ್ ಕಟ್ಟೆಯಲ್ಲಿ 18 ವರ್ಷಗಳ ಬಳಿಕ ದೈವದ ನೇಮೋತ್ಸವಕ್ಕೆ ತಯಾರಿ ನಡೆಸಲಾಗುತ್ತಿದೆ. ಪಾಳು ಬಿದ್ದಿದ್ದ ಪಿಲಿಚಾಮುಂಡಿ ದೇವಸ್ಥಾನದ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ಜ.4 ರಂದು ನೇಮೋತ್ಸವ ನಡೆಯಲಿದ್ದು, ಎರಡೇ ತಿಂಗಳಲ್ಲಿ ದೈವಸ್ಥಾನಕ್ಕೆ ದ್ವಾರ, ಮೆಟ್ಟಿಲು ನಿರ್ಮಾಣ ಮಾಡಲಾಗಿದೆ.

ದೈವಸ್ಥಾನದಲ್ಲಿ ಹುಲಿ ಹೆಜ್ಜೆಯ ಪವಾಡ

ಪೆರ್ಮುದೆಯ ಪಿಲಿಚಾಮುಂಡಿ ದೈವಸ್ಥಾನದಲ್ಲಿ ಹುಲಿ ಹೆಜ್ಜೆಯ ಪವಾಡವೂ ನಡೆದಿದೆ. ಕಾಮಗಾರಿ ಹೊತ್ತಲ್ಲಿ ಪವಾಡ ಕಂಡು ದೈವಾರಧಕರಲ್ಲಿ ಅಚ್ಚರಿ ವ್ಯಕ್ತವಾಗಿದೆ. 18 ವರ್ಷಗಳಿಂದ ದೈವಾರಧನೆ ಸ್ಥಗಿತಗೊಂಡ ಜಾಗದಲ್ಲಿ ಇರುವಿಕೆ ತೋರಿಸಿತಾ ಪಿಲಿಚಾಮುಂಡಿ ದೈವ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ರಾಯಚೂರು: ಪೂಜೆ ವೇಳೆ ಪ್ರಜ್ವಲಿಸಿದ ಜ್ಯೋತಿ, ಅಯ್ಯಪ್ಪ ಸ್ವಾಮಿಯ ಪವಾಡ ಎನ್ನುತ್ತಿರುವ ಮಾಲಾಧಾರಿಗಳು

ಹೌದು, ಪಿಲಿಚಾಮುಂಡಿ ದೈವದ ಜೊತೆಗೆ ನಂಟು ಹೊಂದಿರುವ ಹುಲಿಯ ಹೆಜ್ಜೆ ದೈವಸ್ಥಾನದ ಅಭಿವೃದ್ಧಿ ಕಾಮಗಾರಿ ವೇಳೆ ಪತ್ತೆಯಾಗಿದೆ. ಸ್ಥಳೀಯ ಯುವಕರು ಕೆಲಸ ಮಾಡುತ್ತಿದ್ದಾಗ ದೈವಸ್ಥಾನದ ಮೇಲೆ ಹಾಗೂ ಮಣ್ಣಿನಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ.

ಸಾರ್ವಜನಿಕವಾಗಿ ಕಾಣ ಸಿಗದೇ ಇದ್ದರೂ ದೈವಸ್ಥಾನದ ಜಾಗದಲ್ಲಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ತುಳುವರು ಬಹಳ ನಂಬುಗೆಯಿಂದ ಪಿಲ್ಚಂಡಿ ಅಥವಾ ಪಿಲಿಚಾಮುಂಡಿ ಅಂತ ಕರೆಯುತ್ತಾರೆ. ಕನ್ನಡದಲ್ಲಿ ಇದನ್ನು ವ್ರಾಘ್ರ ಚಾಮುಂಡಿ ಅಂತಲೂ ಕರೆಯುತ್ತಾರೆ.

ತುಳುನಾಡಿನ ಲಕ್ಷಾಂತರ ಜನರ ಸಾವಿರ ವರ್ಷಗಳ ನಂಬಿಕೆಯ ಪ್ರತೀಕವೂ ಹೌದು. ಈಶ್ವರ ದೇವರ ಅಪ್ಪಣೆ ಪ್ರಕಾರ ತುಳುನಾಡಿನ ಜನರನ್ನ ರಕ್ಷಿಸಲು ಭೂಮಿಗಿಳಿದು ಬಂದ ದೈವಶಕ್ತಿ ಅನ್ನೋ ನಂಬಿಕೆ ಇದೆ. ಇದೀಗ ಕಾಯರ್ ಕಟ್ಟೆಯಲ್ಲಿ ಹುಲಿ ಹೆಜ್ಜೆ ಗುರುತು ಕಂಡು ಭಕ್ತರು ಪುಳಕಿತರಾಗಿದ್ದಾರೆ.

ದೈವಸ್ಥಾನದ ಪಕ್ಕದಲ್ಲಿ ಎಂಆರ್​ಪಿಎಲ್ ಕಂಪನಿ ಇದ್ದು, ಮುಂಜಾಗ್ರತಾ ಕ್ರಮವಾಗಿ ಕಂಪನಿ ಸಮೀಪ ನೇಮೋತ್ಸವಕ್ಕೆ ಅವಕಾಶ ನೀಡುತ್ತಿರಲಿಲ್ಲ. ಇದೀಗ ಮಾತುಕತೆ ನಂತರ ಕಂಪನಿಯು ನೇಮೋತ್ಸವ ನಡೆಸಲು ಅವಕಾಶ ಮಾಡಿಕೊಟ್ಟಿದ್ದು, ಗ್ರಾಮಸ್ಥರು ಮತ್ತು ಎಂಆರ್​ಪಿಎಲ್ ಸಹಕಾರದಲ್ಲಿ ಜ.4 ರಂದು ನೇಮೋತ್ಸವ ನಡೆಯಲಿದೆ. ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಿ ನೇಮೋತ್ಸವ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ