ಎಸ್​​​​ಎಫ್​​​​ಡಿ ವತಿಯಿಂದ ಬೀಚ್ ಶುಚೀಕರಣ ಅಭಿಯಾನ: ಪಣಂಬೂರು ಬೀಚ್ ಸ್ವಚ್ಛತೆಗೆ ಶ್ರಮಿಸಿದ ವಿದ್ಯಾರ್ಥಿ ಸಮೂಹ

ಸ್ಟೂಡೆಂಟ್ಸ್ ಫಾರ್ ಡೆವಲಪ್‌ಮೆಂಟ್ ಮಂಗಳೂರಿನ ಸದಸ್ಯರು ಪಣಂಬೂರು ಬೀಚ್​​ನಲ್ಲಿ ಶುಚಿಕರಣ ಅಭಿಯಾನವನ್ನು ಆಯೀಜಿಸಿದರು. ವರ್ಷದ ಕೊನೆಯಲ್ಲಿ ಊ ಅಭಿಯಾನ ಭಾರೀ ಮಹತ್ವದ ಪಡೆದಿತ್ತು. ಈ ಅಭಿಯಾನದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಯಿತು.

ಎಸ್​​​​ಎಫ್​​​​ಡಿ ವತಿಯಿಂದ ಬೀಚ್ ಶುಚೀಕರಣ ಅಭಿಯಾನ: ಪಣಂಬೂರು ಬೀಚ್ ಸ್ವಚ್ಛತೆಗೆ ಶ್ರಮಿಸಿದ ವಿದ್ಯಾರ್ಥಿ ಸಮೂಹ
Follow us
Digi Tech Desk
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 02, 2024 | 1:09 PM

ಮಂಗಳೂರು: ಸ್ಟೂಡೆಂಟ್ಸ್ ಫಾರ್ ಡೆವಲಪ್‌ಮೆಂಟ್ ಮಂಗಳೂರಿನ ಸದಸ್ಯರು ಪಣಂಬೂರು ಬೀಚ್​​ನಲ್ಲಿ ಶುಚೀಕರಣ ಅಭಿಯಾನವನ್ನು ಆಯೋಜಿಸಿದರು. ವರ್ಷದ ಕೊನೆಯಲ್ಲಿ ಈ ಅಭಿಯಾನ ಭಾರೀ ಮಹತ್ವದ ಪಡೆದಿತ್ತು. ಈ ಅಭಿಯಾನದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಮಂಗಳೂರಿನ ಪಣಂಬೂರು ಬೀಚ್ ಒಂದು ಪ್ರವಾಸಿ ತಾಣವಾಗಿದ್ದು, ಸಾವಿರಾರೂ ಪ್ರವಾಸಿಗರು ಕಡಲ ಸೌಂದರ್ಯವನ್ನು ಕಾಣಲು ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿನ ಪರಿಸರ ಸೌಂದರ್ಯಕ್ಕೆ ಧಕ್ಕೆ ಮಾಡುವ ಕೆಲಸಗಳು ನಡೆಯುತ್ತಿದೆ. ಇದರ ಸುತ್ತಿನ ಪರಿಸರದಲ್ಲಿ ಕಸದ ರಾಶಿಗಳು ಎದ್ದು ಕಾಣುತ್ತಿದೆ. ಇದಕ್ಕಾಗಿ ನಗರದ ವಿವಿಧ ಕಾಲೇಜುಗಳ SFDಯ 120ಕ್ಕೂ ಹೆಚ್ಚು ವಿದ್ಯಾರ್ಥಿ ಸ್ವಯಂಸೇವಕರು ಪಣಂಬೂರು ಬೀಚ್‌ನಲ್ಲಿ ತ್ಯಾಜ್ಯವನ್ನು ಸ್ವಚ್ಛಗೊಳಿಸಿದ್ದಾರೆ.

ಹೊಸ ವರ್ಷದ ಪ್ರಯುಕ್ತ  ಗೋಣಿ ಚೀಲ ಹಿಡಿದು ಸುಮಾರು 30 ಜನರಂತೆ 4 ಗುಂಪುಗಳಾಗಿ ಸ್ವಚ್ಛ ಕಾರ್ಯದಲ್ಲಿ ತೋಡಗಿಕೊಂಡಿದ್ದರು. ಪ್ರತಿ ಗುಂಪಿಗೆ ನಿರ್ದಿಷ್ಟ ಕಸಗಳನ್ನು ಸಂಗ್ರಹಿಸುವ ಕಾರ್ಯವನ್ನು ನೀಡಲಾಯಿತು. ಒಂದು ಗುಂಪು ಗಾಜು ಮತ್ತು ಇತರ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಸಂಗ್ರಹಿಸಿದರೆ, ಉಳಿದ ಗುಂಪುಗಳಿಗೆ ಪ್ಲಾಸ್ಟಿಕ್ ಮತ್ತು ಇತರ ಮರುಬಳಕೆ ಮಾಡಲಾಗದ ವಸ್ತುಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ನೀಡಲಾಯಿತು. ವರ್ಷದ ಕೊನೆಗೆ ವಿದಾಯ ಹಾಗೂ ಹೊಸ ವರ್ಷದ ಸ್ವಾಗತಕ್ಕೆ ಈ ಅಭಿಯಾನ ಮಾಡುವ ಮೂಲಕ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದರು. ಪರಿಸರದ ವಾತಾವರಣ ಸಂರಕ್ಷಣಾ ಹಾಗೂ ಸಮುದಾಯ ಸೇವೆಗೆ ಪ್ರಾಮುಖ್ಯತೆಯನ್ನು ನೀಡಿದರು. SFD ಈ ಹಿಂದೆಯೂ ಇಂತಹ ಅನೇಕ ಸ್ವಚ್ಛತಾ ಅಭಿಯಾನಗಳನ್ನು ನಡೆಸಿತ್ತು. 2023 ಜನವರಿ 1ರಂದು ಮೆಗಾ ಬೀಚ್ ಶುಚೀಕರಣ ಅಭಿಯಾನವನ್ನು ಪ್ರಾರಂಭಿಸಿದರು. ಈ ಅಭಿಯಾನಕ್ಕೆ ಸ್ಥಳೀಯ ಆಡಳಿತವೂ ಕೂಡ ಸಹಾಯ ನೀಡಿದೆ. ಇಲ್ಲಿನ ಜನರ ಸಹಕಾರ ಕೂಡ ಇದೆ. ಅಂದಿನಿಂದ ಇಂದಿನ ವರೆಗೆ SFD ಕೆಲಸಕ್ಕೆ ಸಾರ್ವಜನಿಕರು ಹಾಗೂ ಹಲವಾರು ವಿದ್ಯಾರ್ಥಿಗಳು ಬೆಂಬಲ ನೀಡಿದ್ದಾರೆ.

ಎಸ್‌ಎಫ್‌ಡಿ ಮಂಗಳೂರು ಪ್ರಮುಖರಾದ ನಿಶಾನ್ ಆಳ್ವಾ ಕಾವೂರು, ಪ್ರಮುಖರಾದ ನಿಶಿತ್ ಬಂಟ್ವಾಳ್, ಪ್ರಥಮ್ ರೈ ಕೊಡಿಕಲ್ , ಶ್ರೀಶ ರಾವ್ ಸೇರಿದಂತೆ ಎಸ್‌ಎಫ್‌ಡಿ ಮಂಗಳೂರು ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಮುಂದಿನ ದಿನಗಳಲ್ಲಿ ಅದ್ಭುತ ಆರ್ಥಿಕ ಹಾಗೂ ಪ್ರಕೃತಿಗೆ ಸಹಾಯಕಾರಿ ಮಾರ್ಗಗಳನ್ನು ಸಾರುವ ಉದ್ದೇಶದಿಂದ ವಿದ್ಯಾರ್ಥಿಗಳ ವೃದ್ಧಿಗೆ ಸಾಕಷ್ಟು ಕೆಲಸವನ್ನು ಮಾಡಲಿದೆ ಎಂದು ಇದರ ಪ್ರಮುಖ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ಲೋಗ್ ಅಂಡ್ ವಾಕ್ ಅಭಿಯಾನ: ಕಾರಿಂಜೇಶ್ವರ ದೇವಸ್ಥಾನದ ಆವರಣ ಶುಚಿಗೊಳಿಸಿದ ಎಸ್​ಎಫ್​ಡಿ

ಸ್ವಚ್ಛತಾ ಕಾರ್ಯದ ಬಗ್ಗೆ ವಿದ್ಯಾರ್ಥಿಗಳ ಅಭಿಪ್ರಾಯ

ವಿದ್ಯಾರ್ಥಿಗಳಿಗೆ ಪ್ರಕೃತಿಯ ಮಹತ್ವವನ್ನು ತಿಳಿಸಿ ಕೊಡುವಲ್ಲಿ ಈ ರೀತಿಯ ಕಾರ್ಯಕ್ರಮ SFD ವತಿಯಿಂದ ಆಗುತ್ತಿರುವುದು ಅತ್ಯಂತ ಶ್ಲಾಘನೀಯ. -ಜನಿಫರ್, ವಿದ್ಯಾರ್ಥಿನಿ.

“2023 ರ ಕೊನೆಯ ದಿನವನ್ನು ಪ್ರಕೃತಿಯನ್ನು ಸ್ವಚ್ಛಗೊಳಿಸುವ ಮೂಲಕ ಹೊಸವರ್ಷವನ್ನು ಆಚರಿಸಿರುವುದು ಬಹಳ ಖುಷಿಯಾಗಿದೆ – ಆದಿತ್ಯ ಶೆಟ್ಟಿ , ವಿದ್ಯಾರ್ಥಿ

“ನಮ್ಮ ಪ್ರಕೃತಿಗೆ ವಿಶೇಷ ಗಮನ ನೀಡಿದ ಈ ಸುಂದರ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರಕಿತು, ಹೊಸ ವರ್ಷದ ಉದಯದಲ್ಲಿ ಈ ಹೊಸ ನಿಯಮನಿರ್ಧಾರಕ್ಕೆ ನಾವು ಖುಷಿಯಾಗಿ ಭಾಗಿಗಾಗಿದ್ದೇವೆ.” – ಆಫ್ರಿಮಾ, ವಿದ್ಯಾರ್ಥಿನಿ

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ