AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು ನಗರ ಕಂಬಳ; ಗೋಲ್ಡ್ ಫಿಂಚ್ ಸಿಟಿಯಲ್ಲಿ ಕೋಣಗಳದ್ದೇ ದರ್ಬಾರ್

Mangalore Kambala: ಸುಗ್ಗಿ ಬೇಸಾಯ ಮುಗಿಸಿದ ರೈತರಿಗೆ ಮನರಂಜನೆಯ ಆಟವಾಗಿ ಆರಂಭವಾದ ಕಂಬಳ ಇಂದು ಕರಾವಳಿಯ ಜಾನಪದ ಸಂಸ್ಕೃತಿಯ ಪ್ರತೀಕವಾಗಿ ಬೆಳೆದು ನಿಂತಿದೆ. ಗ್ರಾಮೀಣ ಪ್ರದೇಶದಲ್ಲಿ ಮಾತ್ರ ನಡೆಯುವ ಕಂಬಳ ಕಳೆದ ಏಳು ವರ್ಷದ ಹಿಂದೆ ಮಂಗಳೂರು ನಗರಕ್ಕೆ ಕಾಲಿಟ್ಟು ಇತ್ತೀಚೆಗಷ್ಟೇ ಬೆಂಗಳೂರಿನಲ್ಲೂ ಸದ್ದು ಮಾಡಿತ್ತು. ಹಾಗಾದರೆ, ಮಂಗಳೂರು ನಗರದ ಗೋಲ್ಡ್ ಫಿಂಚ್ ಸಿಟಿಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆದಿರುವ ಕಂಬಳ ಹೇಗಿತ್ತು? ಇಲ್ಲಿದೆ ಡಿಟೈಲ್ಸ್.

ಮಂಗಳೂರು ನಗರ ಕಂಬಳ; ಗೋಲ್ಡ್ ಫಿಂಚ್ ಸಿಟಿಯಲ್ಲಿ ಕೋಣಗಳದ್ದೇ ದರ್ಬಾರ್
ಮಂಗಳೂರು ನಗರ ಕಂಬಳImage Credit source: ANI
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Jan 01, 2024 | 2:53 PM

Share

ಮಂಗಳೂರು, ಜ.1: ಗ್ರಾಮೀಣ ಪ್ರದೇಶದಲ್ಲಿ ಮಾತ್ರ ನಡೆಯುವ ಕಂಬಳ ಕಳೆದ ಏಳು ವರ್ಷದ ಹಿಂದೆ ಮಂಗಳೂರು ನಗರಕ್ಕೆ ಕಾಲಿಟ್ಟಿತ್ತು. ಇತ್ತೀಚೆಗಷ್ಟೇ ಬೆಂಗಳೂರಿನಲ್ಲೂ ಕಂಬಳ ಸದ್ದು ಮಾಡಿತ್ತು. ಇದೀಗ ಇದರ ಬೆನ್ನಲ್ಲೇ ಮಂಗಳೂರು ನಗರದ ಗೋಲ್ಡ್ ಫಿಂಚ್ ಸಿಟಿಯಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ (Captain Brijesh Chowta) ಅವರ ನೇತೃತ್ವದಲ್ಲಿ ಅದ್ಧೂರಿಯಾಗಿ ಕಂಬಳ (Mangaluru Kambala) ನಡೆದಿದೆ.

ದೇಶದ ಸೇನೆಯಲ್ಲಿ ಸೇವೆ ಮಾಡಿ ಊರಿಗೆ ಬಂದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕರಾವಳಿಯ ಸಂಸ್ಕೃತಿಯನ್ನೂ ಉಳಿಸಿ ಬೆಳೆಸುವ ಪಣ ತೊಟ್ಟು ಈ ಕಂಬಳ ಆಯೋಜಿಸಿದ್ದಾರೆ. ನಗರದ ಬಂಗ್ರ ಕೂಳೂರು ಎಂಬಲ್ಲಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನೂರಾರು ಕೋಣಗಳ ಜೊತೆ ಓಡಿವೆ. ಕರಾವಳಿಗರಿಗೆ ಕಂಬಳ ಕ್ರೀಡೆ ಮಾಮೂಲಿ ವಿಚಾರವಾಗಿದ್ದರೂ ಮಂಗಳೂರು ನಗರವಾಸಿಗಳಿಗೆ ಕಂಬಳ ನೋಡಲು ಸಿಗುವುದು ಅಪರೂಪ.

ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ತೆರೆ, ಫೈನಲ್​ನಲ್ಲಿ ಚಿನ್ನ ಬೇಟೆಯಾಡಿದ ಕೋಣಗಳ ವಿವರ ಇಲ್ಲಿದೆ

ಕಂಬಳ ನೋಡಬೇಕು ಅಂದರೆ ಗ್ರಾಮೀಣ ಪ್ರದೇಶದತ್ತ ಹೋಗಬೇಕಾಗಿದ್ದ ಮಂಗಳೂರಿನ ಜನರಿಗೆ ಕಳೆದ ಏಳು ವರ್ಷದಿಂದ ಮಂಗಳೂರಿನಲ್ಲೇ ಕಂಬಳ ವೀಕ್ಷಿಸಬಹುದಾಗಿದೆ. ಬಿಜೆಪಿ ಮುಖಂಡ, ಉದ್ಯಮಿ ಬ್ರಿಜೇಶ್ ಚೌಟ ಮಂಗಳೂರಿನ ಜನರಿಗೆ ಇಂತಹ ಒಂದು ಅವಕಾಶ ಮಾಡಿಕೊಟ್ಟದ್ದಾರೆ. ನಗರದಲ್ಲಿ ಗದ್ದೆಗಳು ಇದ್ದ ಜಾಗದಲ್ಲಿ ದೊಡ್ಡ ದೊಡ್ಡ ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಹಾಗಂತ ನಗರದ ಬಂಗ್ರಕೂಳೂರು ಎಂಬ ಪ್ರದೇಶದಲ್ಲಿ ಉದ್ಯಮಿ ಪ್ರಕಾಶ್ ಶೆಟ್ಟಿ ಅವರಿಗೆ ಸೇರಿದ ಗೋಲ್ಡ್ ಪಿಂಚ್ ಸಿಟಿಯಲ್ಲಿ ಹಡಿಲು ಬಿದ್ದಿರುವ ಗದ್ದೆಗಳಲ್ಲೇ ಮಂಗಳೂರು ಕಂಬಳ ಆಯೋಜಿಸಲಾಗುತ್ತಿದೆ. ನಗರದ ಜನರು ತಮ್ಮ ಸಂಪ್ರದಾಯ ಕಲೆ ಹಾಗೂ ಸಂಸ್ಕೃತಿಯನ್ನು ಮರೆಯಬಾರದು ಅನ್ನೋ ಕಾರಣಕ್ಕೆ ಈ ಕಂಬಳ ಆಯೋಜನೆಗೆ ಬ್ರಿಜೇಶ್ ಚೌಟ ಕೈ ಹಾಕಿದ್ದಾರೆ.

ಮಂಗಳೂರು ಕಂಬಳದಲ್ಲಿ ಸುಮಾರು 140 ಜೊತೆ ಕೋಣಗಳು ಭಾಗವಹಿಸಿದ್ದು, ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಕನೆ ಹಲಗೆ, ಅಡ್ಡ ಹಲಗೆ ವಿಭಾಗದಲ್ಲಿ ಸ್ಪರ್ಧೆಗಳು ನಡೆದಿವೆ. ಕಂಬಳದಲ್ಲಿ ಕೇವಲ ಕೋಣಗಳ ಓಟ ನೋಡುವುದಷ್ಟೇ ಅಲ್ಲದೇ ಮಕ್ಕಳ ಪ್ರತಿಭೆಯನ್ನ ಪ್ರದರ್ಶಿಸಲೂ ಅವಕಾಶ ಕಲ್ಪಿಸಲಾಗಿತ್ತು.

ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ರೀಲ್ಸ್ ಮಾಡುವ ಸ್ಪರ್ಧೆ ಹಾಗೂ ಫೋಟೋಗ್ರಾಫಿ ಸ್ಪರ್ಧೆಯನ್ನೂ ನಡೆಸಲಾಗಿತ್ತು. ನಗರದಲ್ಲೇ ಕಂಬಳ ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಶಿಸುವ ಮೂಲಕ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಾಗುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಮಂಗಳೂರು ಕಂಬಳ ಒಂದು ರೀತಿಯ ಜಾತ್ರೆಯ ವಾತಾವರಣವನ್ನೇ ಕಾಣಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ