ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಂದ ರಾಜ್ಯ ಸಾಹಿತ್ಯ ಅಧಿವೇಶನದ ಉದ್ಘಾಟನೆ
ಭಾರತದಲ್ಲಿ ಹಲವಾರು ಭಾಷೆಗಳಿದ್ದರೂ ಭಾರತ ಏಕರೂಪವಾಗಿದೆ. ಭಾಷೆಗಳ ಸಂಘಟನೆಗೆ ಸಾಹಿತ್ಯ ಬುನಾದಿಯಾಗಿದೆ. ಯುವಕರು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು. ಆದ್ದರಿಂದ ಸಮಗ್ರ ಜ್ಞಾನ ಚಿಂತನೆಯ ಒಂದು ಯುವ ಪೀಳಿಗೆಯ ಸೃಷ್ಟಿ ಸಾಧ್ಯ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.
ದಕ್ಷಿಣ ಕನ್ನಡ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಆಯೋಜಿಸಿರುವ ನುಡಿಸಾಮ್ರಾಜ್ಯದಲ್ಲಿ ಸ್ವರಾಜ್ಯ 3ನೆಯ ರಾಜ್ಯ ಅಧಿವೇಶನವನ್ನು ಇಂದು ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು(D. Veerendra Heggade) ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆ (Inauguration) ಬಳಿಕ ಮಾತನಾಡಿದ ಅವರು, ಭಾರತದಲ್ಲಿ ಹಲವಾರು ಭಾಷೆಗಳಿದ್ದರೂ ಭಾರತ ಏಕರೂಪವಾಗಿದೆ. ಭಾಷೆಗಳ ಸಂಘಟನೆಗೆ ಸಾಹಿತ್ಯ (Literature) ಬುನಾದಿಯಾಗಿದೆ. ಯುವಕರು ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು. ಆದ್ದರಿಂದ ಸಮಗ್ರ ಜ್ಞಾನ ಚಿಂತನೆಯ ಒಂದು ಯುವ ಪೀಳಿಗೆಯ ಸೃಷ್ಟಿ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಅಧಿವೇಶನದ ಸರ್ವಾಧ್ಯಕ್ಷ ಡಾ. ನಾ. ಮೊಗಸಾಲೆ ಮಾತನಾಡಿದ್ದು, ಭಾಷೆ, ಭಾಷೆಗಳಿಗಿರುವ ವೈಶಿಷ್ಟ್ಯ ಮತ್ತು ವಿಸ್ತಾರ, ಧಾರ್ಮಿಕ ಸಾಮರಸ್ಯದಲ್ಲಿ ಕಾಣಬಹುದಾದ ಭಾರತೀಯತೆಯ ಸೊಬಗು, ರಾಷ್ಟ್ರೀಯತೆಯ ಪರಂಪರೆ ವಿಷಯಗಳ ಕುರಿತು ಸುವಿಸ್ತಾರ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಅಧಿವೇಶನ ಸಮಿತಿಯ ಕಾರ್ಯಾಧ್ಯಕ್ಷ ಎ. ಶಾಂತಾರಾಮ ಶೆಟ್ಟಿ, ಅಭಾಸಾಪ ರಾಜ್ಯ ಉಪಾಧ್ಯಕ್ಷ ಹರಿಪ್ರಕಾಶ್ ಕೋಣೆಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾ.ವಿಜಯಕುಮಾರ್ ನಿರ್ವಹಿಸಿದರು. ಅಧಿವೇಶನವು ಮಾರ್ಚ್ 19 ಮತ್ತು 20 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆಯುತ್ತಿದ್ದು, ಸಾಹಿತ್ಯಾಸಕ್ತರು ಆಗಮಿಸಬಹುದಾಗಿದೆ.
ಇದನ್ನೂ ಓದಿ: ವಿಜಯಪುರ ಜಿಲ್ಲೆಯಲ್ಲಿ ಕೆರೆ ಹೂಳೆತ್ತುವ ಕಾರ್ಯ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ: ಡಾ.ವೀರೇಂದ್ರ ಹೆಗ್ಗಡೆ
ಹುಬ್ಬಳ್ಳಿಯಲ್ಲಿ ನೂತನ ಎಫ್.ಎಸ್.ಎಲ್ ಲ್ಯಾಬ್ ಉದ್ಘಾಟನೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ
Published On - 7:23 pm, Sat, 19 March 22