Beachside Startup Fest: ತಣ್ಣೀರುಬಾವಿ ಬೀಚ್​ನಲ್ಲಿ ಫೆಬ್ರವರಿ 16 ರಿಂದ ಭಾರತದ ಮೊದಲ ಬೀಚ್‌ಸೈಡ್ ಸ್ಟಾರ್ಟ್ಅಪ್ ಫೆಸ್ಟ್

ಇದೇ ಮೊದಲ ಬಾರಿಗೆ ಮಂಗಳೂರಿನ ತಣ್ಣೀರಭಾವಿ ಬೀಚ್​ನಲ್ಲಿ ಫೆ.16 ರಿಂದ 18 ರವರೆಗೆ ಸ್ಟಾರ್ಟ್ಅಪ್ ಫೆಸ್ಟ್ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮ ಉದಯೋನ್ಮುಖ ಸ್ಟಾರ್ಟ್ಅಪ್​ಗಳನ್ನು ಘೋಷಿಸುವ ಮತ್ತು ಪೋಷಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮ ಉತ್ಪನ್ನ ಆಧಾರಿತ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಸಜ್ಜಾಗಿದೆ ಮತ್ತು ಸ್ಪೇನ್‌ನಲ್ಲಿ ನಡೆದ ದಕ್ಷಿಣ ಶೃಂಗಸಭೆಯ ಮಾದರಿಯಲ್ಲಿ ಇದನ್ನು ನಡೆಸಲಾಗುತ್ತಿದೆ.

Beachside Startup Fest: ತಣ್ಣೀರುಬಾವಿ ಬೀಚ್​ನಲ್ಲಿ ಫೆಬ್ರವರಿ 16 ರಿಂದ ಭಾರತದ ಮೊದಲ ಬೀಚ್‌ಸೈಡ್ ಸ್ಟಾರ್ಟ್ಅಪ್ ಫೆಸ್ಟ್
ತಣ್ಣೀರುಬಾವಿ ಬೀಚ್​
Follow us
|

Updated on:Jan 31, 2024 | 12:10 PM

ಮಂಗಳೂರು, ಜ.31: ಇದೇ ಮೊದಲ ಬಾರಿಗೆ ತಣ್ಣೀರುಬಾವಿ ಬೀಚ್​ನಲ್ಲಿ ಸ್ಟಾರ್ಟ್ಅಪ್ ಫೆಸ್ಟ್ ಆಯೋಜಿಸಲಾಗುತ್ತಿದೆ (Beachside Startup Fest). ನೆಟ್‌ವರ್ಕಿಂಗ್, ಇನ್ನೋವೇಶನ್, ಉದ್ಯಮಶೀಲತೆ ಪ್ರೋತ್ಸಾಹಕ್ಕಾಗಿ ನೀಲಿ ಧ್ವಜ ಬೀಚ್‌ನ ಪಕ್ಕದಲ್ಲಿರುವ ತಣ್ಣೀರಭಾವಿ ಬೀಚ್​ನಲ್ಲಿ ಫೆ.16 ರಿಂದ 18 ರವರೆಗೆ ಎಮರ್ಜ್-2024 (Emerge-2024) ಕಾರ್ಯಕ್ರಮ ಏರ್ಪಡಿಸಲಾಗಿದೆ. ತಪಸ್ಯ ಬೀಚ್ ಫೆಸ್ಟಿವಲ್ (TBF) ಬ್ಯಾನರ್ ಅಡಿಯಲ್ಲಿ ಈ ಫೆಸ್ಟ್ ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಉದಯೋನ್ಮುಖ ಸ್ಟಾರ್ಟ್ಅಪ್​ಗಳನ್ನು ಘೋಷಿಸುವ ಮತ್ತು ಪೋಷಿಸುವ ಗುರಿಯನ್ನು ಹೊಂದಿದೆ.

ಈ ಬೀಚ್​ ಸೈಡ್ ಸ್ಟಾರ್ಟ್ಅಪ್ ಫೆಸ್ಟ್ ಮುನ್ನಡೆಸುತ್ತಿರುವ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಇನ್ವೆಂಟರ್ಸ್ ಅಸೋಸಿಯೇಷನ್ (IFIA) ಭಾರತ್‌ನ ಪ್ರಾದೇಶಿಕ ನಿರ್ದೇಶಕ ವಿಶ್ವಾಸ್ ಯುಎಸ್ ಅವರು ಮಾತನಾಡಿ, ಇದು ಸ್ಟಾರ್ಟ್​ಅಪ್ ವ್ಯವಸ್ಥೆಯನ್ನು ಒಂದುಗೂಡಿಸುವ ಪ್ರಯತ್ನವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: IMF: ಈ ಎರಡು ವರ್ಷ ಚೀನಾ, ಅಮೆರಿಕ ಮತ್ತು ಭಾರತದ ಆರ್ಥಿಕ ಬೆಳವಣಿಗೆ ಹೇಗೆ? ಐಎಂಎಫ್ ಹೊಸ ವರದಿಯಲ್ಲೇನಿದೆ?

ಈ ಕಾರ್ಯಕ್ರಮದಲ್ಲಿ ಸ್ಟಾರ್ಟ್​ಅಪ್​ಗೆ ಬೇಕಾದ ಕೌಶಲ್ಯ, ಐಪಿಆರ್ ಮತ್ತು ಆರಂಭಿಕ ವ್ಯವಸ್ಥೆಯ ವಿವಿಧ ಅಂಶಗಳ ಬಗ್ಗೆ ಹಾಗೂ ನಮ್ಮ ಐಡಿಯಾವನ್ನು ಸಕ್ರಿಯಗೊಳಿಸುವ ವಿಭಿನ್ನ ವಿಧಾನಗಳ ಬಗ್ಗೆ ತಿಳಿಸಿಕೊಡಲಾಗುತ್ತೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಪ್ರಸ್ತುತಪಡಿಸಿದರೆ, ಸುಮಾರು 20 ಸ್ಟಾರ್ಟ್‌ಅಪ್‌ಗಳು ತಮ್ಮ ಪರಿಕಲ್ಪನೆಯ ಪುರಾವೆಗಳನ್ನು ಪ್ರಸ್ತುತಪಡಿಸುತ್ತವೆ. ಐಡಿಯಾಥಾನ್ ಕೂಡ ನಡೆಯಲಿದೆ. 18 ವಲಯಗಳಲ್ಲಿ AI ಕಡಿತ, IPR, ತಂತ್ರಜ್ಞಾನ ವರ್ಗಾವಣೆ ಮತ್ತು ಇತರ ಅಂಶಗಳಂತಹ ವೈವಿಧ್ಯಮಯ ಕ್ಷೇತ್ರಗಳ ಮೇಲೆ ತಜ್ಞರು ಮಾಹಿತಿ ನೀಡಲಿದ್ದಾರೆ ಎಂದು ಅವರು ಹೇಳಿದರು.

ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಇನ್ವೆಂಟರ್ಸ್ ಅಸೋಸಿಯೇಷನ್ (IFIA) ಹಾಗೂ ಇಂಟರ್ನ್ಯಾಷನಲ್ ಸ್ಟಾರ್ಟ್ಅಪ್ ಫೌಂಡೇಶನ್ ಜೊತೆಗೆ ತಪಸ್ಯ ಬೀಚ್ ಫೆಸ್ಟಿವಲ್ (TBF) ಪಾಲುದಾರಿಕೆ ಹೊಂದಿದೆ ಮತ್ತು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಮತ್ತು ರಾಜ್ಯದ ವಿಷನ್ ಗ್ರೂಪ್‌ನ ಡಾ ವಿಶಾಲ್ ರಾವ್ ಅವರು ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಕಾರ್ಯಕ್ರಮ ಉತ್ಪನ್ನ ಆಧಾರಿತ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಸಜ್ಜಾಗಿದೆ ಮತ್ತು ಸ್ಪೇನ್‌ನಲ್ಲಿ ನಡೆದ ದಕ್ಷಿಣ ಶೃಂಗಸಭೆಯ ಮಾದರಿಯಲ್ಲಿ ಇದನ್ನು ನಡೆಸಲಾಗುತ್ತಿದೆ ಎಂದು ವಿಶ್ವಾಸ್ ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:53 am, Wed, 31 January 24

ತಾಜಾ ಸುದ್ದಿ
ಮಂಕಾಗಿ ಬಂದು ವ್ಯಾನ್​ ಹತ್ತಿದ ದರ್ಶನ್; ರೇಣುಕಾ ಸ್ವಾಮಿ ಕೊಲೆ ಕೇಸ್​ ಮಹಜರು
ಮಂಕಾಗಿ ಬಂದು ವ್ಯಾನ್​ ಹತ್ತಿದ ದರ್ಶನ್; ರೇಣುಕಾ ಸ್ವಾಮಿ ಕೊಲೆ ಕೇಸ್​ ಮಹಜರು
ದರ್ಶನ್​ ಕಾರಣಕ್ಕೆ ಅರೆಸ್ಟ್​ ಆದ ಅನು ಮನೆ ಎಂಥಾ ದುಸ್ಥಿತಿಯಲ್ಲಿದೆ ನೋಡಿ..
ದರ್ಶನ್​ ಕಾರಣಕ್ಕೆ ಅರೆಸ್ಟ್​ ಆದ ಅನು ಮನೆ ಎಂಥಾ ದುಸ್ಥಿತಿಯಲ್ಲಿದೆ ನೋಡಿ..
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಪೋಕ್ಸೋ ಕೇಸ್​: ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಕಾಂಚನಜುಂಗಾ ಎಕ್ಸ್​ಪ್ರೆಸ್​ಗೆ ಗೂಡ್ಸ್​ ರೈಲು ಡಿಕ್ಕಿ, ಐದು ಸಾವು
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
ಮುಸ್ಲಿಂ ಟೋಪಿ ಧರಿಸಿ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಿದ್ದರಾಮಯ್ಯ
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
‘ನಾನು ಇದರಲ್ಲಿ ಮುಗ್ಧ’; ಬ್ಯಾನ್ ವಿಚಾರದಲ್ಲಿ ಸುದೀಪ್ ಹೀಗೆ ಹೇಳಿದ್ಯಾಕೆ?
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟ ಪ್ರಮುಖ ಅರೆಸ್ಟ್
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
ಶುಭ ಕಾರ್ಯ ಪ್ರಾರಂಭಕ್ಕೂ ಮುನ್ನ ಓಂ ಅಂತ ಏಕೆ ಬರೆಯಬೇಕು? ಈ ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
Daily Horoscope: ಈ ರಾಶಿಯವರಿಗೆ ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು