ಮಂಗಳೂರು: ಮಂಗಳೂರಿನಲ್ಲಿ ಗಾಂಜಾ ಪ್ರಕರಣದಲ್ಲಿ ವೈದ್ಯರ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ಇಬ್ಬರು ವೈದ್ಯರನ್ನು ವಜಾಗೊಳಿಸಿದೆ. ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಅತ್ತಾವರ ಕೆಎಂಸಿ ಆಸ್ಪತ್ರೆ ಮೆಡಿಕಲ್ ಆಫೀಸರ್ ಡಾ.ಸಮೀರ್, ಮಣಿಪಾಲ ಕೆಎಂಸಿ ಆಸ್ಪತ್ರೆ ಮೆಡಿಕಲ್ ಸರ್ಜನ್ ಡಾ.ಮಣಿಮಾರನ್ ಅವರನ್ನು ಆಡಳಿತ ಮಂಡಳಿ ವಜಾ ಮಾಡಿ ಗುತ್ತಿಗೆ ರದ್ದುಪಡಿಸಿದೆ.
ಉಳಿದ 7 ವೈದ್ಯಕೀಯ ವಿದ್ಯಾರ್ಥಿಗಳು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಾದ ಡಾ.ನದೀಯಾ ಸಿರಾಜ್, ಡಾ.ವರ್ಷಿಣಿ ಪ್ರತಿ, ಡಾ.ರಿಯಾ ಚಡ್ಡಾ, ಡಾ.ಇರಾ ಬಾಸಿನ, ಡಾ.ಕ್ಷಿತಿಜ್ ಗುಪ್ತಾ ಹಾಗೂ ಡಾ.ವಿ.ಎಸ್.ಹರ್ಷಕುಮಾರ್ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಕೆಎಂಸಿ ಡೀನ್ ಉನ್ನಿಕೃಷ್ಣನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರು ಡಾಕ್ಟರುಗಳ ನಶಾ ಲೋಕ: ಊರು ಬಿಡುತ್ತಿರುವ ಆರೋಪಿ ವೈದ್ಯರು-ವಿದ್ಯಾರ್ಥಿಗಳು, ಬೆನ್ನುಹತ್ತಿದ CCB, ಅನೇಕರು ಅರೆಸ್ಟ್!
ಮಂಗಳೂರು ಮೆಡಿಕಲ್ ಕಾಲೇಜ್ಗಳು, ಗಾಂಜಾ ಅಡ್ಡೆಗಳಾಗ್ತಿರುವ ಸತ್ಯ ಬಯಲಾಗಿದ್ದು ಮೆಡಿಕಲ್ ಕಾಲೇಜ್ನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಗಾಂಜಾ ನಂಟಿರೋದು ಸಾಬೀತಾಗಿತ್ತು. ಈ ಸಂಬಂಧ ಹತ್ತು ಮಂದಿಯನ್ನ ಸಿಸಿಬಿ ಪೊಲೀಸರು ಈ ಹಿಂದೆಯೇ ಅರೆಸ್ಟ್ ಮಾಡಲಾಗಿದೆ. ಬಳಿಕ ನಶೆಕೋರರು ಕೊಟ್ಟ ಮಾಹಿತಿ ಮೇರೆಗೆ, ಮತ್ತೆ ಮೂವರನ್ನ ಬಂಧಿಸಲಾಗಿತ್ತು. ಕೊಚ್ಚಿನ ಮೂಲದ ಡಿಫಾರ್ಮ್ ವಿದ್ಯಾರ್ಥಿ ಅಡೋನ್ ದೇವ್, ಕೆಎಂಸಿ ವೈದ್ಯಕೀಯ ವಿದ್ಯಾರ್ಥಿ ಡಾ.ಹರ್ಷಕುಮಾರ್ ಹಾಗೂ ಕೆಎಂಸಿಯಲ್ಲಿ ಎಂಡಿ ಸ್ಟೂಡೆಂಟ್ ಆಗಿರುವ ತುಮಕೂರು ಮೂಲದ, ಮೊಹಮ್ಮದ್ ಆಫ್ರಾನ್ನನ್ನ ವಶಕ್ಕೆ ಪಡೆದಿದ್ದರು.
ಪಿಜಿ, ಹಾಸ್ಟೆಲ್ಗಳಲ್ಲಿದ್ದ ಯುವತಿಯರು, ತಮ್ಮ ಬಾಯ್ ಫ್ರೆಂಡ್ಗಳ ಜತೆ ಅಪಾರ್ಟ್ಮೆಂಟ್ಗೆ ಶಿಫ್ಟ್ ಆಗಿದ್ದರು ಎಂಬ ಬೆಚ್ಚಿಬೀಳಿಸುವ ಸಂಗತಿ ಪೊಲೀಸರ ತನಿಖೆ ವೇಳೆ ಬಯಲಾಗಿತ್ತು. ಇವರು ಓವರ್ನೈಟ್ ಪಾರ್ಟಿಯಲ್ಲಿ ಡಾಕ್ಟರ್ಸ್, ಸ್ಟೂಡೆಂಟ್ಗಳೆಲ್ಲ ಗಾಂಜಾ ಎಳೀತಾ ಇದ್ರಂತೆ. ಲೇಟ್ ನೈಟ್ ಪಾರ್ಟಿ ಬಗ್ಗೆ ಅನೇಕ ಸಲ ಸ್ಥಳೀಯರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ರಂತೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:29 pm, Fri, 20 January 23