ಮುಸ್ಲಿಂ ವ್ಯಕ್ತಿ ಹತ್ಯೆಯ ಕಾರಣ ನಿಗೂಢ: ಬೂದಿಮುಚ್ಚಿದ ಕೆಂಡವಾದ ಕರಾವಳಿ..!

ಕಡಲತಡಿ ಮಂಗಳೂರಿನಲ್ಲಿ ಒಂದು ಗುಂಪು ಹತ್ಯೆ ಆಗಿದೆ. ವ್ಯತಿರಿಕ್ತ ಹೇಳಿಕೆಗಳು ಈಗ ವಿವಾದಗಳಿಗೆ ಕಾರಣವಾಗುತ್ತಿದೆ. ಮುಸ್ಲಿಂ ಸಮುದಾಯ ಗೃಹ ಸಚಿವರು ಹಾಗೂ ಉಸ್ತುವಾರಿ ಸಚಿವರ ಮೇಲೆ ತಿರುಗಿ ಬಿದ್ದಿದೆ. ಎಸ್.ಡಿ.ಪಿ.ಐ ಬೀದಿಗಿಳಿದು ಪ್ರತಿಭಟನೆ ನಡೆಯುತ್ತಿದೆ. ಆ ಗುಂಪು ಹತ್ಯೆ ಯಾವುದು. ಗುಂಪು ಹತ್ಯೆಗೆ ಕಾರಣ ಏನು. ಇಲ್ಲಿದೆ ಕಂಪ್ಲೀಟ್​​​ ರಿಪೋರ್ಟ್.

ಮುಸ್ಲಿಂ ವ್ಯಕ್ತಿ ಹತ್ಯೆಯ ಕಾರಣ ನಿಗೂಢ: ಬೂದಿಮುಚ್ಚಿದ ಕೆಂಡವಾದ ಕರಾವಳಿ..!
Kudupu Murder Case
Updated By: ರಮೇಶ್ ಬಿ. ಜವಳಗೇರಾ

Updated on: Apr 30, 2025 | 7:46 PM

ಮಂಗಳೂರು, (ಏಪ್ರಿಲ್ 30): ಮಂಗಳೂರು (Mangaluru) ಹೊರವಲಯದ ಕುಡುಪು ಎಂಬಲ್ಲಿ ಏಪ್ರಿಲ್ 27 ರಂದು ಸಂಜೆ ಒಂದು ಗುಂಪು ಹತ್ಯೆ (Group Murder) ನಡೆದಿತ್ತು. ಈ ಗುಂಪು ಹತ್ಯೆಯಿಂದ ಕರಾವಳಿ ಬೂದಿಮುಚ್ಚಿದ ಕೆಂಡವಾಗಿದ್ದು, ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದಕ್ಕೆ ಮುಸ್ಲಿಂ ವ್ಯಕ್ತಿಯ ಹತ್ಯೆ (Muslim Man Murder) ನಡೆಯಿತಾ? ಅಥವಾ ಬೇರೆ ಕಾರಣದಿಂದ ಕೊಲೆ ಮಾಡಲಯ್ತಾ ಎನ್ನುವ ಬಗ್ಗೆ ಚರ್ಚೆಗಳು ನಡೆದಿವೆ. ಇದರ ಮಧ್ಯ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳಿದ್ರಿಂದ ಆ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎನ್ನುವ ಮಾಹಿತಿ ಇದೆ ಎಂದು ಹೇಳಿದ್ದಾರೆ.

ಅಲ್ಲಿನ ಗ್ರೌಂಡ್ ಬಳಿ ಸಣ್ಣ ಮಟ್ಟದ ಒಂದು ಕ್ರಿಕೆಟ್​​ ಟೂರ್ನಿಮೆಂಟ್ ನಡೆಯುತ್ತಿತ್ತು. ಅಲ್ಲಿ ಓರ್ವ ವಲಸೆ ಕಾರ್ಮಿಕ ಬಂದಿದ್ದ, ಕ್ರಿಕೆಟ್​ ಆಡುತ್ತಿದ್ದವರಿಗೂ ಆತನಿಗೆ ಗಲಾಟೆ ನಡೆದಿದೆ. ಅಲ್ಲಿದ್ದ ಗುಂಪು ಆತನಿಗೆ ಹಿಗ್ಗಾಮುಗ್ಗಾ ಥಳಿಸಿತ್ತು. ನಂತರ ಆತ ಮೃತಪಟ್ಟಿದ್ದ. ಈ ಸಂಬಂಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿತ್ತು. ಎರಡು ದಿನ ಆದ್ರೂ ಆತನ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ಮರಣೋತ್ತರ ಪರೀಕ್ಷೆಯಾದ ಮೇಲೆ ಅದು ಕೊಲೆ ಅನ್ನೊದು ಗೊತ್ತಾಯ್ತು. ನಿನ್ನೆ(ಏಪ್ರಿಲ್ 29) ಸುದ್ದಿಗೋಷ್ಟಿ ನಡೆಸಿದ ಪೊಲೀಸರು ಈ ಕೊಲೆ ಮಾಡಿದ 15 ಆರೋಪಿಗಳನ್ನು ಬಂಧಿಸಿದ್ದೇವೆ. ಕೊಲೆಗೆ ಕಾರಣ ಏನು ಅಂತಾ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಮಂಗಳೂರಿನಲ್ಲೂ ಗುಂಪು ಹಲ್ಲೆ, ಹತ್ಯೆ: ಕ್ರಿಕೆಟ್ ಪಂದ್ಯದ ವೇಳೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದಿದ್ದಕ್ಕೆ ನಡೆಯಿತಾ ಕೊಲೆ?

ಇನ್ನು ನಿನ್ನೆ ಸಂಜೆ ವೇಳೆಗೆ ಕೊಲೆಯಾದ ವ್ಯಕ್ತಿ ಮೊಹಮ್ಮದ್ ಅಶ್ರಫ್ ಅನ್ನೊದು ಗೊತ್ತಾಗಿತ್ತು. ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲೂಕಿನ ಪುಲ್ಪಲ್ಲಿ ನಿವಾಸಿ ಎಂದು ಗುರುತಿಸಲಾಗಿತ್ತು. ಆತನ ಮನೆಯವರು ಮದ್ಯರಾತ್ರಿ ಬಂದು ಮೃತದೇಹವನ್ನು ಗುರುತಿಸಿ ಅದನ್ನು ತೆಗೆದುಕೊಂಡು ಹೋಗಿದ್ದಾರೆ. ಸ್ಥಳೀಯ ಮಸೀದಿ ಒಂದರಲ್ಲಿ ಮೃತದೇಹವನ್ನು ಇಟ್ಟು ಪ್ರಾರ್ಥನೆ ಮಾಡಿ ಕಳುಹಿಸಿಕೊಡಲಾಗಿದೆ. ಇನ್ನು ಗೃಹ ಸಚಿವರ ಪಾಕಿಸ್ತಾನ್ ಜಿಂದಾಬಾದ್ ನಿಂದ ಕೊಲೆ ಎಂಬ ಹೇಳಿಕೆಗೆ ಕರಾವಳಿಯಲ್ಲಿ ಮುಸ್ಲಿಂ ಸಮುದಾಯ ತೀರ್ವ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ
ಭಕ್ತಿಯಿಂದ ನಮಸ್ಕರಿಸಿ ಕಾಣಿಕೆ ಹುಂಡಿ ಕದ್ದೊಯ್ದ! ಸಿಸಿಟಿವಿ ವಿಡಿಯೋ ನೋಡಿ
ಕೇವಲ 120 ದಿನಗಳಲ್ಲಿ ಕರ್ನಾಟಕದಲ್ಲಿ 3 ಸಾವಿರ ಮಂದಿಗೆ ಹಾವು ಕಡಿತ!
ಗಡುವು ಮುಗಿದರೂ ಕರ್ನಾಟಕದಲ್ಲಿ ಇನ್ನೂ ಇದ್ದಾರೆ ಪಾಕಿಸ್ತಾನೀಯರು!
‘ಭಾರತವನ್ನು ದ್ವೇಷಿಸುತ್ತೇನೆ’: ವೈದ್ಯೆ ಅಫೀಫ ಫಾತಿಮಾ ದೇಶ ವಿರೋಧಿ ಪೋಸ್ಟ್

ಸುದ್ದಿಗೋಷ್ಟಿ ನಡೆಸಿದ ಎಸ್.ಡಿ.ಪಿ.ಐ ಪಕ್ಷ ಗೃಹಸಚಿವರಿಗೆ ಈ ಮಾಹಿತಿ ಕೊಟ್ಟಿದ್ದು ಯಾರು. ಕೊಲೆಯಾದ ಅಶ್ರಫ್ ನಿಂದ ಜೈಶ್ರೀರಾಮ್ ಹೇಳಿಸೊ ಯತ್ನ ನೆಡೆದಿದೆ. ಜಿ.ಪರಮೇಶ್ವರ್ ಅವರ ರಾಜೀನಾಮೆ ತೆಗೆದೊಳ್ಳಬೇಕು ಅಂತಾ ಆಗ್ರಹ ಮಾಡಿದ್ರು. ಇನ್ನು ಬಿಜೆಪಿಯ ಮಾಜಿ ಕಾರ್ಪೂರೇಟರ್ ಸಂಗೀತಾ ಆರ್ ನಾಯಕ್ ಗಂಡ ರವಿಂದ್ರ ಈ ಕೊಲೆಯ ಹಿಂದೆ ಇದ್ದು ಅವರನ್ನು ಬಚಾವ್ ಮಾಡಲು ಬಿಜೆಪಿ ಶಾಸಕರು ಒತ್ತಡ ಹಾಕಿದ್ದಾರೆ. ತಕ್ಷಣ ರವೀಂದ್ರ ಅವರನ್ನು ಬಂಧಿಸಿಬೇಕು ಅಂತಾ ಒತ್ತಾಯಿಸಿದ್ದಾರೆ.

ಈ ಪ್ರಕರಣ ಸಂಬಂಧ ಸರಿಯಾದ ತನಿಖೆ ಆಗಬೇಕು ಎಂದು ಎಸ್.ಡಿ.ಪಿ.ಐ ಪ್ರತಿಭಟನೆ ನಡೆಸಿತು. ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಲಾಯ್ತು. ಇನ್ನು ಪ್ರಕರಣ ಸಂಬಂಧ ಒಟ್ಟು 20 ಜನರನ್ನು ಬಂಧಿಸಲಾಗಿದೆ. ಕೊಲೆಗೆ ಕಾರಣ ಏನು ಅನ್ನೊದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಾಕಿಸ್ತಾನ್ ಗೆ ಜೈಕಾರ ಕೂಗಿದ ಆದ್ರಿಂದ ಥಳಿಸಿದ್ವಿ ಎಂದು ಆರೋಪಿ ನಂ ಒನ್ ಸಚಿನ್ ಪೊಲೀಸರ ಬಳಿ ಹೇಳಿದ್ದಾನೆ ಎನ್ನುವುದು ತಿಳಿದು ಬಂದಿದೆ.

ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಪೊಲೀಸರನ್ನು ಅಮಾನತ್ತು ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್, ಹೋಮ್ ಮಿನಿಸ್ಟರ್ ಗೆ ಪತ್ರ ಬರೆದಿದ್ದಾರೆ. ಇನ್ನು ಮುಸ್ಲಿಂ ಸಮುದಾಯ ದಿನೇಶ್ ಗುಂಡುರಾವ್ ವಿರುದ್ಧ ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದೆ. ಅದೇನೆ ಇದ್ದರೂ ಈ ಪ್ರಕರಣ ರಾಜಕೀಯ ಪ್ರೇರಿತವಾಗದೆ ನಿಸ್ಪಕ್ಷಪಾತ ತನಿಖೆಯಾಗಿ ತಪ್ಪತಸ್ಪರಿಗೆ ಶಿಕ್ಷಯಾಗಬೇಕು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ