Crime News: ತ್ರಿಕೋನ ಪ್ರೇಮ ಪ್ರಕರಣದಲ್ಲಿ ಲಾಯ್ಡ್ ಡಿಸೋಜ ಸಾವು; ಘಟನೆಯ ವಿವರ ನೀಡಿದ ಪೊಲೀಸ್ ಆಯುಕ್ತ

| Updated By: ganapathi bhat

Updated on: Jan 29, 2022 | 5:08 PM

ಪ್ರೇಯಸಿಯರಾದ ಅಶ್ವಿತಾ, ವೇಗಸ್ ಜೊತೆ ಮಾತುಕತೆ ನಡೆಸಲಾಗಿತ್ತು. ಈ ವೇಳೆ ಅಶ್ವಿತಾ ಪೆರಾವೋ ಸಮುದ್ರಕ್ಕೆ ಹಾರಿದ್ದಳು. ಅಶ್ವಿತಾಳನ್ನು ರಕ್ಷಿಸಲು ಲಾಯ್ಡ್ ಸಮುದ್ರಕ್ಕೆ ಹಾರಿದ್ದರು. ಇಬ್ಬರನ್ನೂ ರಕ್ಷಿಸಲು ಸ್ಥಳೀಯ ನಿವಾಸಿಗಳು ಮುಂದಾಗಿದ್ದರು ಎಂದು ಘಟನೆ ವಿವರಣೆ ನೀಡಿದ್ದಾರೆ.

Crime News: ತ್ರಿಕೋನ ಪ್ರೇಮ ಪ್ರಕರಣದಲ್ಲಿ ಲಾಯ್ಡ್ ಡಿಸೋಜ ಸಾವು; ಘಟನೆಯ ವಿವರ ನೀಡಿದ ಪೊಲೀಸ್ ಆಯುಕ್ತ
ಸಾಂಕೇತಿಕ ಚಿತ್ರ
Follow us on

ಮಂಗಳೂರು: ಇಲ್ಲಿನ ಸೋಮೇಶ್ವರ ಬೀಚ್‌ನಲ್ಲಿ ಲಾಯ್ಡ್‌ ಡಿಸೋಜ ಸಾವು ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ತ್ರಿಕೋನ ಪ್ರೇಮ ಪ್ರಕರಣದಲ್ಲಿ ಡಿಸೋಜ ಮೃತಪಟ್ಟಿದ್ದಾರೆ. ಡಿಸೋಜರನ್ನು ಇಬ್ಬರು ಯುವತಿಯರು ಪ್ರೀತಿಸುತ್ತಿದ್ದರು. ಈ ಬಗ್ಗೆ ನಿನ್ನೆ ಸಂಜೆ ಬೀಚ್ ಬಳಿ ಮಾತುಕತೆ ನಡೆದಿತ್ತು. ಪ್ರೇಯಸಿಯರಾದ ಅಶ್ವಿತಾ, ವೇಗಸ್ ಜೊತೆ ಮಾತುಕತೆ ನಡೆಸಲಾಗಿತ್ತು. ಈ ವೇಳೆ ಅಶ್ವಿತಾ ಪೆರಾವೋ ಸಮುದ್ರಕ್ಕೆ ಹಾರಿದ್ದಳು. ಅಶ್ವಿತಾಳನ್ನು ರಕ್ಷಿಸಲು ಲಾಯ್ಡ್ ಸಮುದ್ರಕ್ಕೆ ಹಾರಿದ್ದರು. ಇಬ್ಬರನ್ನೂ ರಕ್ಷಿಸಲು ಸ್ಥಳೀಯ ನಿವಾಸಿಗಳು ಮುಂದಾಗಿದ್ದರು ಎಂದು ಘಟನೆ ವಿವರಣೆ ನೀಡಿದ್ದಾರೆ.

ಅಶ್ವಿತಾ ಪೆರಾವೋಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ದಡಕ್ಕೆ ತರಲು ಯತ್ನಿಸಿದ್ರೂ ಯುವಕ ಲಾಯ್ಡ್‌ ಮೃತಪಟ್ಟಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ. ಮಂಗಳೂರಿನ ಉಳಿಯ ಕುದ್ರುಗೆ ರಸ್ತೆ ವ್ಯವಸ್ಥೆ ಇಲ್ಲದ ಹಿನ್ನೆಲೆ ಒಂದು ಕಿಲೋಮೀಟರ್ ದೂರ ಮೃತದೇಹ ಹೊತ್ತು ಸಾಗಾಟ‌ ಮಾಡಲಾಗಿದೆ. ರಸ್ತೆ ಸಂಪರ್ಕವಿಲ್ಲದೆ ಲಾಯ್ಡ್‌ ಡಿಸೋಜ ಗೆಳೆಯರು ಪರದಾಟ ಪಟ್ಟಿದ್ದಾರೆ.

ಬೆಂಗಳೂರು: ಅಣ್ಣ ತಮ್ಮಂದಿರ ಜಗಳ ಬಿಡಿಸಲು ಬಂದಿದ್ದ ಸಂಬಂಧಿ ಕೊಲೆ

ಅಣ್ಣ ತಮ್ಮಂದಿರ ಜಗಳ ಬಿಡಿಸಲು ಬಂದಿದ್ದ ಸಂಬಂಧಿ ಕೊಲೆಯಾದ ದುರ್ಘಟನೆ ಬೆಂಗಳೂರಿನ ಜೆ.ಬಿ. ನಗರದ ಹನುಮನಗರದಲ್ಲಿ ನಡೆದಿದೆ. ಬಾಟಲಿಯಿಂದ ಹೊಡೆದು ವೆಂಕಟೇಶ್ ​(21) ಕೊಲೆ ಮಾಡಲಾಗಿದೆ. ಕಾಟ್ ಮೇಲೆ ಮಲಗುವ ವಿಚಾರಕ್ಕೆ ಸಹೋದರರು ಜಗಳ ಮಾಡಿದ್ದರು. ಜಗಳ ಆಡುತ್ತಿದ್ದ ವಿನಯ್, ಮನು ಗಲಾಟೆ ಬಿಡಿಸಲು ವೆಂಕಟೇಶ್ ಬಂದಿದ್ದರು. ಪಕ್ಕದ ಮನೆಯಲ್ಲಿ ವಾಸವಾಗಿದ್ದ ಸಂಬಂಧಿ ಮಧ್ಯಪ್ರವೇಶ ಮಾಡಿದ್ದರು.

ವೆಂಕಟೇಶ್ ಮೇಲೆ ಕುಡಿದ ಅಮಲಿನಲ್ಲಿದ್ದ ವಿನಯ್​​ ಹಲ್ಲೆ ನಡೆಸಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವವಾಗಿ ವೆಂಕಟೇಶ್ ಮೃತಪಟ್ಟಿದ್ದಾರೆ. ಘಟನೆ ವೇಳೆ ವಿನಯ್ ಜೊತೆಗಿದ್ದ ಮೋಹನ್ ವಶಕ್ಕೆ ಪಡೆಯಲಾಗಿದೆ. ಜೆ.ಬಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಮನಗರ: ನಿರ್ಮಾಣ ಹಂತದ ಕಟ್ಟಡ ಕುಸಿದು ಬಾಲ ಕಾರ್ಮಿಕ ಸಾವು

ನಿರ್ಮಾಣ ಹಂತದ ಕಟ್ಟಡ ಕುಸಿದು ಬಾಲ ಕಾರ್ಮಿಕ ಸಾವನ್ನಪ್ಪಿದ ದುರ್ಘಟನೆ ಕೃಷ್ಣಾಪುರದಲ್ಲಿ ನಡೆದಿದೆ. ಬಳ್ಳಾರಿ‌ಯ ಭೀಮ ನಾಯಕ್ (13) ಮೃತ ದುರ್ದೈವಿ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರದಲ್ಲಿ ಘಟನೆ ನಡೆದಿದೆ. ಸಿದ್ದರಾಜು ಎಂಬುವವರ ನಿರ್ಮಾಣ ಹಂತದ ಕಟ್ಟಡ ಕುಸಿದು ಘಟನೆ ಸಂಭವಿಸಿದೆ. ಎರಡನೇ ಅಂತಸ್ತಿನ ಮೌಲ್ಡ್ ಹಾಕುವಾಗ ಕಟ್ಟಡ ಕುಸಿದಿದೆ. ಕಟ್ಟಡದ ಮೇಲಿಂದ ಬಿದ್ದು ಭೀಮ ನಾಯಕ್ ಸಾವನ್ನಪ್ಪಿದ್ದಾರೆ. ತನ್ನ ಸಂಬಂಧಿಕರ ಜೊತೆ ಕೆಲಸಕ್ಕೆ ಬಂದಿದ್ದ ಬಾಲಕ ಮೃತಪಟ್ಟಿದ್ದಾನೆ. ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಿವಮೊಗ್ಗ: ಕೌಟುಂಬಿಕ ಕಲಹ ಹಿನ್ನೆಲೆ; ಪುರಸಭೆ ನೌಕರ ಆತ್ಮಹತ್ಯೆ

ಕೌಟುಂಬಿಕ ಕಲಹ ಹಿನ್ನೆಲೆ ಶಿವಮೊಗ್ಗ ನಗರದ ಮನೆಯಲ್ಲಿ ಶಿಕಾರಿಪುರ ಪುರಸಭೆ ನೌಕರ ಸಂತೋಷ್ (40) ನೇಣಿಗೆ ಶರಣಾಗಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಮಂಗಳೂರು: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ವಿಡಿಯೋ ಗೇಮ್​ ಆಡುವುದರಲ್ಲಿ ಬ್ಯುಸಿ; ವೈದ್ಯರ ನಿರ್ಲಕ್ಷ್ಯ ಆರೋಪ

ಇದನ್ನೂ ಓದಿ: ಮಂಗಳೂರು: ಫಿಶ್ ಮಿಲ್ ಚಿಮಣಿಯಲ್ಲಿ ಹಾರುತ್ತಿದೆ ಸಣ್ಣ ಬೆಂಕಿ ಉಂಡೆಗಳು; ಸ್ಥಳೀಯರಲ್ಲಿ ಹೆಚ್ಚಿದ ಆತಂಕ