Kambala: ಕಂಬಳದಲ್ಲಿ ಮಹಿಳೆಯರಿಗೂ ಅವಕಾಶ, ತರಬೇತಿಗೆ ಸಿದ್ಧವಾಗುತ್ತಿದೆ ವೇದಿಕೆ

ಮಹಿಳೆಯರು ಹಲವು ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ್ದಾರೆ, ಮಾಡುತ್ತಿದ್ದರೆ, ಇದೀಗ ಇದಕ್ಕೆ ಹೊಸ ಸಾಧನೆ ಹಂತ ಸೇರಿಕೊಳ್ಳುತ್ತಿದೆ, ಹೌದು ಕರಾವಳಿ ಭಾಗದಲ್ಲಿ ಕಂಬಳ ಮಹತ್ವದ ಪಾತ್ರವನ್ನು ವಹಿಸಿದೆ. ಇದೀಗ ಈ ಕ್ಷೇತ್ರದಲ್ಲಿ ಮಹಿಳೆಯರು ಕೂಡ ಸಾಧನೆಯನ್ನು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Kambala: ಕಂಬಳದಲ್ಲಿ ಮಹಿಳೆಯರಿಗೂ ಅವಕಾಶ, ತರಬೇತಿಗೆ ಸಿದ್ಧವಾಗುತ್ತಿದೆ ವೇದಿಕೆ
ಸಾಂದರ್ಭಿಕ ಚಿತ್ರ
Follow us
|

Updated on: May 30, 2023 | 1:36 PM

ಕಂಬಳ (Kambala) ಮತ್ತು ಜಲ್ಲಿಕಟ್ಟುಗಳಂತಹ ಸಾಂಪ್ರದಾಯಿಕ ಕ್ರೀಡೆಗಳಿಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಹಸಿರು ನಿಶಾನೆ ನೀಡಿದ್ದು, ಕಂಬಳ ಮತ್ತು ಜಲ್ಲಿಕಟ್ಟು ನಡೆಸಬಹುದು ಎಂದು ಹೇಳಿದೆ. ಈಗಾಗಲೇ ಕಂಬಳದಲ್ಲಿ ತಂತ್ರಜ್ಞಾನದ ಪರಿಚಯದೊಂದಿಗೆ ಕ್ರೀಡೆಯ ಆಧುನೀಕರಣಕ್ಕೆ ವೇದಿಕೆ ಸಜ್ಜಾಗಿದೆ ಮತ್ತು ಮುಂಬರುವ ನವೆಂಬರ್‌ನಿಂದ ಮಹಿಳೆಯರು ಕೂಡ ಈ ಕಂಬಳದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇತ್ತೀಚೆಗೆ, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರವು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ, ಎತ್ತಿನಗಾಡಿ ಓಟದ ಜೊತೆಗೆ ಗೂಳಿ ಪಳಗಿಸುವ ಕ್ರೀಡೆಗಳಾದ ಜಲ್ಲಿಕಟ್ಟು ಮತ್ತು ಕಂಬಳಕ್ಕೆ ಅವಕಾಶ ನೀಡಿತು.

ಕರಾವಳಿ ಜಿಲ್ಲೆಯ ಕಂಬಳ ಅಕಾಡೆಮಿಯಿಂದ ಮಹಿಳೆಯರಿಗೆ ಕ್ರೀಡೆಯಲ್ಲಿ ತರಬೇತಿ ನೀಡಲು ಸಜ್ಜಾಗಿದೆ. ಈಗಾಗಲೇ ಈ ಪ್ರಯತ್ನವನ್ನು ಕರಾವಳಿ ಜಿಲ್ಲೆಯ ಕಂಬಳ ಅಕಾಡೆಮಿ ಮಾಡುತ್ತಿದೆ, ಮಹಿಳೆಯರು ಕೂಡ ಕೋಣಗಳನ್ನು ಓಡಿಸಬಹುದು ಎಂದು ಕರಾವಳಿ ಜಿಲ್ಲೆಯ ಕಂಬಳ ಅಕಾಡೆಮಿ ತಿಳಿಸಿದೆ.

ಈಗಾಗಲೇ ಮಾಡಿರುವ ಸಿದ್ಧತೆಗಳು ಸಫಲಗೊಂಡರೆ ಮಹಿಳೆಯರು ಕೂಡ ಕಂಬಳದಲ್ಲಿ ಭಾಗವಹಿಸಬಹುದು. ಈಗಾಗಲೇ ಮಹಿಳೆಯರು ಕರವಾಳಿ ಭಾಗದಲ್ಲಿ ರಂಗಭೂಮಿ ಯಕ್ಷಗಾನ, ಇನ್ನೂ ಅನೇಕ ಕ್ಷೇತ್ರಗಳಲ್ಲಿ ಭಾಗವಹಿಸುತ್ತಿದ್ದಾರೆ, ಇದೀಗ ಕಂಬಳ ಒಂದು ಪ್ರಮುಖವಾಗಿದೆ.

ಇದನ್ನೂ ಓದಿ:Kambala | ಕಂಬಳ ಗದ್ದೆಗೆ ಇಳಿದ ಬಾಲಕಿ.. ಉಡುಪಿಯ ಕುವರಿಯಿಂದ ಹೊಸ ದಾಖಲೆ

ದಕ್ಷಿಣ ಕನ್ನಡ ಕಂಬಳ ಸಮಿತಿಯ ಸಂಸ್ಥಾಪಕ-ಕಾರ್ಯದರ್ಶಿ ಕೆ ಗುಣಪಾಲ ಕದಂಬ ಅವರು ಟೈಮ್ಸ್​​ ಆಫ್​​​ ಇಂಡಿಯಾ (TOI) ಕ್ಕೆ ನೀಡಿದ ಹೇಳಿಕೆ ಪ್ರಕಾರ ಪಾರದರ್ಶಕತೆಯನ್ನು ತರುವ ಮತ್ತು ಪ್ರಾರಂಭದ ಹಂತದಲ್ಲಿ ವಿಳಂಬವನ್ನು ತಡೆಯುವ ತಂತ್ರಜ್ಞಾನವನ್ನು ಪರಿಚಯಿಸುವ ಕುರಿತು ತಜ್ಞರು ಚರ್ಚೆ ನಡೆಸುತ್ತಿದ್ದಾರೆ. ಕಂಬಳ 24 ಗಂಟೆಗಳ ಒಳಗೆ ಮುಕ್ತಾಯಗೊಳಿಸುವುದು ನಮ್ಮ ಮುಖ್ಯ ಗುರಿಯಾಗಿದೆ.

ಮಿಯಾರ್ ಮತ್ತು ಮೂಡುಬಿದಿರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಬಳ ಅಕಾಡೆಮಿಯು ತುಳುನಾಡಿನ ಸಾಂಪ್ರದಾಯಿಕ ಪುರುಷ ಪ್ರಧಾನ ಕ್ರೀಡೆಯಾದ ಕಂಬಳದ ವಿವಿಧ ಅಂಶಗಳಲ್ಲಿ ಮಹಿಳೆಯರಿಗೆ ತರಬೇತಿ ನೀಡಲು ಚಿಂತನೆ ನಡೆಸಿದೆ. ಅವರಿಗೂ ಹೆಚ್ಚಿನ ತರಬೇತಿಯ ಅವಶ್ಯಕತೆ ಇದೆ ಎಂದು ಹೇಳಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ