Mangaluru International Airport: ಜೂನ್‌ 1 ರಿಂದ ಎಂದಿನಂತೆ ವಿಮಾನ ಹಾರಾಟ ಪುನರಾರಂಭ

ಕರ್ನಾಟಕದ ಎರಡನೇ ಅತ್ಯಂತ ಜನನಿಬಿಡ ಮಂಗಳೂರು ವಿಮಾನ ನಿಲ್ದಾಣವಾದಲ್ಲಿ ಜೂನ್‌ 1 ರಿಂದ ಎಂದಿನಂತೆ ದಿನವಿಡೀ ವಿಮಾನಗಳು ಸಂಚಾರ ನಡೆಸಲಿವೆ ಎಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

Mangaluru International Airport: ಜೂನ್‌ 1 ರಿಂದ ಎಂದಿನಂತೆ ವಿಮಾನ ಹಾರಾಟ ಪುನರಾರಂಭ
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ
Follow us
ವಿವೇಕ ಬಿರಾದಾರ
|

Updated on: May 31, 2023 | 7:13 AM

ಮಂಗಳೂರು: ಕರ್ನಾಟಕದ (Karnataka) ಎರಡನೇ ಅತ್ಯಂತ ಜನನಿಬಿಡ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾದಲ್ಲಿ (Mangaluru International Airport) ಜೂನ್‌ 1 ರಿಂದ ಎಂದಿನಂತೆ ದಿನವಿಡೀ ವಿಮಾನಗಳು (Aeroplane) ಸಂಚಾರ ನಡೆಸಲಿವೆ ಎಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಜನವರಿ 27 ರಿಂದ ವಿಮಾನ ನಿಲ್ದಾಣದ 2.45 ಕಿಮೀ ಉದ್ದದ ರನ್‌ವೇ ನವೀಕರಣ (ಮರುಕಾರ್ಪಟಿಂಗ್) ಕಾಮಗಾರಿ ಆರಂಭವಾಗಿತ್ತು. ಮೊದಲೇ ತಿಳಿಸಿದಂತೆ ಈ ಕಾಮಗಾರಿ ಮೇ.28 ರಂದು ಮುಕ್ತಾಯವಾಗಿದೆ. ಹೀಗಾಗಿ ಜೂನ್​ 1ರಿಂದ ಈ ಹಿಂದಿನಂತೆ ವಿಮಾನಗಳು ಸಂಚಾರ ನಡೆಸಲಿವೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಇದು ಒಂದು ಮೈಲಿಗಲ್ಲು ಘಟನೆಯಾಗಿದೆ. ಯೋಜನೆಯ ವಿಶಿಷ್ಟ ಅಂಶವೆಂದರೆ, ವಾಯುಯಾನದ ಸುರಕ್ಷತೆ ದೃಷ್ಟಿಯಿಂದ ಎಲ್ಲ ಮಾನದಂಡಗಳನ್ನು ಅನುಸರಿಸಲಾಗಿದೆ. ಈ ವಿಮಾನ ನಿಲ್ದಾಣದ ಮೂಲಕ ಪುತಿ ದಿನ ಸುಮಾರು 36 ವಿಮಾನಗಳು ಸಂಚರಿಸುತ್ತವೆ. ನಿಗದಿತ ವಿಮಾನಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರದಂತೆ ರನ್‌ವೇಯನ್ನು ಮರುಕಾರ್ಪೆಟ್ ಮಾಡಲು ವಿಮಾನ ನಿಲ್ದಾಣದಲ್ಲಿ ಪ್ರತಿ ದಿನ ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ಪರೀಕ್ಷಿಸಲಾಗಿದೆ.

ಯೋಜನೆಯನ್ನು ಪೂರ್ಣ ಗೊಳಿಸಲು ತೆಗೆದುಕೊಂಡ 75 ದಿನಗಳು ಮತ್ತು 529 ಗಂಟೆಗಳ ಅವಧಿಯಲ್ಲಿ, ವಿಮಾನ ನಿಲ್ದಾಣದಲ್ಲಿ ಉಳಿದ 14.5 ಗಂಟೆಗಳ ಅವಧಿಯಲ್ಲಿ ಸರಾಸರಿ 18 ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಿಗೆ ರನ್‌ವೇಯನ್ನು ಪ್ರತಿದಿನ ತೆರೆಯಲಾಗಿತ್ತು. ಮಾರ್ಚ್ 10 ರಿಂದ ಮೇ 28 ರವರೆಗೆ ಯೋಜನೆಯು 80 ಅತ್ಯಾಧುನಿಕ ಉಪಕರಣಗಳನ್ನು ಬಳಸಿಕೊಂಡು 82 ಕಿಮೀ ರಸ್ತೆಗೆ ಹಾಕುವುದಕ್ಕೆ ಸಮಾನವಾದ 81,696 ಟನ್‌ಗಳನ್ನು ಡಾಂಬರನ್ನು ಬಳಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Train Service: ವಿಜಯಪುರ – ಮಂಗಳೂರು ರೈಲು ಸಂಚಾರ ಜೂನ್ 4ರ ವರೆಗೆ ರದ್ದು

2010ರಲ್ಲಿ ನಡೆದಿದ್ದ ವಿಮಾನ ದುರಂತ ಬಳಿಕ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗಾಗಲೇ ಆಧುನಿಕ ರೀತಿಯ ಎರಡು ರನ್‌ ವೇ ಹೊಂದಿರುವ ರಾಜ್ಯದ ವಿಮಾನ ನಿಲ್ದಾಣವು ಇದಾಗಿದೆ. ಇದೀಗ ಮತ್ತೆ ರನ್‌ ವೇ ಕಾಮಗಾರಿ ಮೂಲಕ ಅಂತರಾಷ್ಟ್ರೀಯ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಆಧುನಿಕ ಶೈಲಿಯಲ್ಲಿ ಕಾರ್ಪೆಟ್‌ ಕೆಲಸ ನಡೆಸಲಾಗಿದೆ. ಇದರಿಂದಾಗಿ ಮಂಜು ಕವಿದ ವಾತಾವರಣದಲ್ಲಿಯೂ ವಿಮಾನ ಇಳಿಯುವಂತಹ ವ್ಯವಸ್ಥೆ ಇರಲಿದೆ. ಇದಕ್ಕಾಗಿ ನಾಲ್ಕು ತಿಂಗಳ ಕಾಲ ಹಗಲಿಡೀ ರನ್‌ ವೇ ಬಂದ್‌ ಮಾಡಲಾಗಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ