ಹನುಮ ಧ್ವಜ ಮರುಸ್ಥಾಪನೆ ಮಾಡದಿದ್ದರೆ ಕೆರೆಗೋಡು ಚಲೋಗೆ ಕರೆ, ಯಾವುದೇ ಅನಾಹುತ ಆದರೂ ಸರ್ಕಾರ ಹೊಣೆ: ವಿಹೆಚ್​ಪಿ ಮುಖಂಡ

ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಜನವರಿ 28 ರಂದು ಹಾರಿಸಲಾಗಿದ್ದ ಹನುಮ ಧ್ವಜವನ್ನು ಪೊಲೀಸರು ತೆರವುಗೊಳಿಸಿದ್ದರು. ಇದಕ್ಕೆ ಗ್ರಾಮಸ್ಥರು ಮತ್ತು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್​ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಇದೀಗ ವಿಹೆಚ್​ಪಿ ಮತ್ತು ಬಜರಂಗದಳ ಹನುಮ ಧ್ವಜ ಮರು ಸ್ಥಾಪನೆಗೆ ಪಟ್ಟು ಹಿಡಿದಿದೆ.

ಹನುಮ ಧ್ವಜ ಮರುಸ್ಥಾಪನೆ ಮಾಡದಿದ್ದರೆ ಕೆರೆಗೋಡು ಚಲೋಗೆ ಕರೆ, ಯಾವುದೇ ಅನಾಹುತ ಆದರೂ ಸರ್ಕಾರ ಹೊಣೆ: ವಿಹೆಚ್​ಪಿ ಮುಖಂಡ
ವಿಹೆಚ್​ಪಿ ಮುಖಂಡ ಶರಣ ಪಂಪವೆಲ್​​
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ವಿವೇಕ ಬಿರಾದಾರ

Updated on: Feb 09, 2024 | 2:28 PM

ಮಂಗಳೂರು, ಫೆಬ್ರವರಿ 09: ರಾಜ್ಯ ಸರ್ಕಾರ ದೇಶ ವಿಭಜನೆಯ ಕೆಲಸ ಮಾಡುತ್ತಿದೆ. ದೇಶವನ್ನು ವಿಭಜನೆ ಮಾಡುವ ಷಡ್ಯಂತ್ರ ಮಾಡಲಾಗುತ್ತಿದೆ. ರಾಜ್ಯದಲ್ಲಿ ಸಾಂಕೇತಿಕವಾಗಿ ಇಂದು (ಫೆ.09) ಪ್ರತಿಭಟನೆ ಮಾಡುತ್ತಿದ್ದೇವೆ. ಮುಂದಿನ ದಿನದಲ್ಲಿ ಹನುಮ ಧ್ವಜವನ್ನು (Hanuman Dhwaja) ಕೆರೆಗೋಡು (Keregodu) ಗ್ರಾಮದಲ್ಲಿ ಮರುಸ್ಥಾಪನೆ ಮಾಡಬೇಕು. ಮರುಸ್ಥಾಪನೆ ಮಾಡದೆ ಇದ್ದರೆ ಕೆರೆಗೋಡು ಚಲೋ ಎಂಬ ಕಾರ್ಯಕ್ರಮವನ್ನು ಮಾಡುತ್ತೇವೆ ವಿಹೆಚ್​ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್​​ವೆಲ್ ಹೇಳಿದರು. ಮಂಡ್ಯ (Mandya) ತಾಲೂಕಿನ ಕೆರಗೋಡಿನಲ್ಲಿನ ಹನುಮ ಧ್ವಜವನ್ನು ತೆರವುಗೊಳಿಸಿದನ್ನು ಖಂಡಿಸಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ (VHP)​ ಮಂಗಳೂರು (Mangaluru) ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿತು. ಬಜರಂಗದಳ (Bajarangadal) ಮತ್ತು ವಿಹೆಚ್​​ಪಿ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶರಣ್ ಪಂಪ್​​ವೆಲ್, ಕೆರೆಗೋಡುವಿನಲ್ಲಿ ವಾಸ್ತವ್ಯ ಮಾಡಲಿದ್ದೇವೆ. ರಾಜ್ಯದ ಎಲ್ಲ ವಿಹೆಚ್​ಪಿ ಮತ್ತು ಬಜರಂಗದಳ ಕಾರ್ಯಕರ್ತರು ಕೆರೆಗೋಡುಗೆ ಬರುತ್ತಾರೆ. ಸಂಘರ್ಷ ಆದರು, ಕೇಸು ಹಾಕಿದರು ಕೆರೆಗೋಡುನಲ್ಲಿ ಹನುಮಧ್ವಜ ಹಾರಿಸಿಯೇ ಹಾರಿಸುತ್ತೇವೆ. ಇಂದು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಹನುಮಾನ್ ಚಾಲೀಸಾ ಪಠಣ, ಪ್ರತಿಭಟನೆ ನಡೆಯುತ್ತಿದೆ. ಮಂಡ್ಯ ಜಿಲ್ಲೆ, ಕೆರೆಗೋಡು ಗ್ರಾಮ ಸಂಪೂರ್ಣ ಬಂದ್ ಆಗಿದೆ. ಮಂಡ್ಯ ಜಿಲ್ಲೆಯ ರಾಮಭಕ್ತರಿಗೆ ಬೆಂಬಲ ನೀಡಲು ಬಜರಂಗದಳದ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ ಎಂದು ತಿಳಿಸಿದರು.

ಏಕಾಏಕಿ ಬಂದು ಸಿದ್ದರಾಮಯ್ಯನವರ ಆದೇಶ ಮೇರೆಗೆ ಹನುಮಧ್ವಜ ಇಳಿಸಲಾಗಿದೆ. ಕಳೆದ 30 ವರ್ಷಗಳಿಂದ ಯಾವುದೇ ಗಲಾಟೆ ಇಲ್ಲದೇ ಎಲ್ಲಾ ಧ್ವಜ ಹಾಕಲಾಗುತ್ತಿತ್ತು. ವೋಟ್ ಬ್ಯಾಂಕ್​ಗಾಗಿ ಹನುಮಧ್ವಜ ತೆಗೆದು ರಾಷ್ಟ್ರ ಧ್ವಜ ಹಾಕಲಾಗಿದೆ. ಹನುಮಧ್ವಜದ ಜೊತೆ ಇನ್ನೊಂದು ಧ್ವಜ ಸ್ಥಂಭ ಹಾಕುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ರಾಜ್ಯದಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರವಿದೆ. ವಿಧಾನಸಭಾ ಚುನಾವಣೆ ಗೆಲ್ಲಬೇಕಾದರೆ ಹೊಸ ಅಸ್ತ್ರವನ್ನು ಉಪಯೋಗಿಸಿದರು. ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದು ಹೇಳಿದ್ದರು. ಮುಸ್ಲಿಂ ಮತದಾರರೆಲ್ಲರಿಗೂ ಇದರಿಂದ ಬಹಳ ಖುಷಿ ಆಯ್ತು. ಆದರೆ ಸರ್ಕಾರ ಬಂದ ಮೇಲೆ ಈವರೆಗೂ ಬಜರಂಗದಳ ಬ್ಯಾನ್ ಮಾಡೋಕೆ ಇವರಿಂದ ಆಗಿಲ್ಲ, ಮುಂದೆಯು ಆಗಲ್ಲ ಎಂದರು.

ಇದನ್ನೂ ಓದಿ: ಕೆರಗೋಡು ಹನುಮ ಧ್ವಜ ತೆರವು ವಿವಾದ: ರಾಜ್ಯಾದ್ಯಂತ ಹನುಮ ಧ್ವಜ ಅಭಿಯಾನ ನಡೆಸಲು ಬಜರಂಗದಳ ಕರೆ

ಹನುಮಾನ್ ಚಾಲೀಸಾ ಪಠಣ ಮಾಡಿದರೆ ನಮಗೆ ಇನ್ನಷ್ಟು ಶಕ್ತಿ ಬರುತ್ತೆ. ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೂ ಹನುಮಾನ್ ಚಾಲೀಸಾ ಪಠಣ ಮಾಡಿದ್ವಿ. ಹೀಗಾಗಿ ರಾಮಮಂದಿರ ನಿರ್ಮಾಣವೂ ಆಯ್ತು. ರಾಜ್ಯದ ಪ್ರತಿ ಜಿಲ್ಲೆ, ಹಳ್ಳಿಗಳಿಂದ ಲಕ್ಷಾಂತರ ಬಜರಂಗದಳ ಕಾರ್ಯಕರ್ತರು ಕೆರೆಗೋಡಿಗೆ ಬರುತ್ತಾರೆ. ಮುಂದೆ ಯಾವುದೇ ಅನಾಹುತ ಆದರು ರಾಜ್ಯ ಸರ್ಕಾರವೆ ಹೊಣೆ ಎಂದು ಎಚ್ಚರಿಕೆ ನೀಡಿದರು.

‘ಹಿಂದೂಗಳ ತೆರಿಗೆ, ಹಿಂದೂಗಳ ಹಕ್ಕು’ ಅಭಿಯಾನಕ್ಕೆ ಬಿಜೆಪಿ ಶಾಸಕ ಹರೀಶ್ ಪೂಂಜಾ ಕರೆ ಕೊಟ್ಟಿರುವ ವಿಚಾರವಾಗಿ ಮಾತನಾಡಿದ ಅವರು, ನಾವು ಈ ದೇಶದಲ್ಲಿ ರಾಮರಾಜ್ಯ ಆಗಬೇಕು ಅಂತ ಇದ್ದೇವೆ. ಅಂಬೇಡ್ಕರ್ ಸಂವಿಧಾನದ ಪ್ರಕಾರ ಇರಬೇಕು ಅನ್ನೋದು ವಿಹೆಚ್​ಪಿ ಉದ್ದೇಶ. ಇಲ್ಲಿ ಹಿಂದೂಗಳು ಹೆಚ್ಚು ತೆರಿಗೆ ಕಟ್ಟುತ್ತಾರೆ, ಆದರೆ ಇವರು ನಮ್ಮ ಹಣ ಮುಸಲ್ಮಾನರಿಗೆ ಕೊಡುತ್ತಿದ್ದಾರೆ. ನಾವು ಇದನ್ನು ವಿರೋಧ ಮಾಡುತ್ತೀರುವುದು ಇಂಥ ಮನಸ್ಥಿತಿಯನ್ನು. ತೆರಿಗೆ ಹಣ ಎಲ್ಲರಿಗೂ ಒಂದೇ ರೀತಿಯಲ್ಲಿ ಹಂಚಿಕೆ ಮಾಡಿ. ದೇವಸ್ಥಾನದ ಹಣ ಎಲ್ಲಿಗೆ ಹೋಗುತ್ತಿದೆ ಅನ್ನೋದು ಹೇಳಲಿ. ಎಷ್ಟೋ ದೇವಸ್ಥಾನ ಪಾಳು ಬಿದ್ದಿವೆ, ಅರ್ಚಕರಿಗೆ ಕೊಡಲು ಹಣ ಇಲ್ಲ. ಹಿಂದೂಗಳ ದುಡ್ಡನ್ನು ಅನ್ಯಧರ್ಮೀಯರ ಕೆಲಸಕ್ಕೆ ಬಳಕೆ‌ ಮಾಡಲಾಗುತ್ತಿದೆ. ಹೀಗಾಗಿ ಹಿಂದೂಗಳ ದುಡ್ಡು ನಮಗೆ ಬಳಕೆ ಆಗಬೇಕು ಎಂದು ಆಗ್ರಹಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ