ಮಂಗಳೂರು: 8 ವರ್ಷಗಳ ನಂತರ ಸಮುದ್ರದಾಳದಲ್ಲಿ ಪತ್ತೆಯಾಯ್ತು ಸೇನಾ ವಿಮಾನ
8 ವರ್ಷಗಳ ನಂತರ ಆಳವಾದ ಸಮುದ್ರದಲ್ಲಿ AN-32-2743 ವಿಮಾನ ಪತ್ತೆಯಾಗಿದೆ. ಟಿವಿ9ಗೆ ಭಾರತೀಯ ವಾಯು ಸೇನೆ ಮೂಲಗಳಿಂದ ಅಧಿಕೃತ ಮಾಹಿತಿ ನೀಡಲಾಗಿದೆ. ಚೆನ್ನೈ ನೌಕಾನೆಲೆಯಿಂದ 310 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಯೋಧ ಏಕನಾಥಶೆಟ್ಟಿ ಸೇರಿದಂತೆ 29 ಜನರಿದ್ದರು.
ಮಂಗಳೂರು, ಜನವರಿ 12: 8 ವರ್ಷಗಳ ನಂತರ ಆಳವಾದ ಸಮುದ್ರದಲ್ಲಿ AN-32-2743 ವಿಮಾನ (army plane) ಪತ್ತೆಯಾಗಿದೆ. ಟಿವಿ9ಗೆ ಭಾರತೀಯ ವಾಯು ಸೇನೆ ಮೂಲಗಳಿಂದ ಅಧಿಕೃತ ಮಾಹಿತಿ ನೀಡಲಾಗಿದೆ. ಚೆನ್ನೈ ನೌಕಾನೆಲೆಯಿಂದ 310 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ. 2016ರ ಜುಲೈ 22 ರಂದು ಚೆನ್ನೈನ ತಾಂಬರಂ ವಾಯುನೆಲೆಯಿಂದ ಬೆಳಗ್ಗೆ 8.30ಕ್ಕೆ ಹೊರಟಿದ್ದ AN-32-2743 ವಿಮಾನ, ಬೆಳಗ್ಗೆ 9.12ಕ್ಕೆ ಸಂಪರ್ಕ ಕಡಿತಗೊಂಡಿತ್ತು. 11.45ಕ್ಕೆ ಪೋರ್ಟ್ಬ್ಲೇರ್ ತಲುಪಬೇಕಿತ್ತು. ಮಧ್ಯಾಹ್ನ 1.50ಕ್ಕೆ ವಿಮಾನ ಕಣ್ಮರೆಯಾಗಿದೆ ಎಂದು IAF ಪ್ರಕಟಣೆಯಲ್ಲಿ ತಿಳಿಸಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಯೋಧ ಏಕನಾಥಶೆಟ್ಟಿ ಸೇರಿದಂತೆ 29 ಜನರಿದ್ದರು. ವಿಮಾನದಲ್ಲಿ ನಾಪತ್ತೆಯಾಗಿದ್ದ ಸೈನಿಕ ಏಕನಾಥ್ ಶೆಟ್ಟಿ, ಕಾರ್ಗಿಲ್ ವಾರ್ನಲ್ಲಿ ಭಾಗವಹಿಸಿದ್ದ ಹೆಮ್ಮೆಯ ಯೋಧ. ಏಕನಾಥ್ ಅವರ ಸರ್ವಿಸ್ ರೆಕಾರ್ಡ್ ಟಿವಿ9 ಗೆ ಲಭ್ಯವಾಗಿದೆ.
▶️ An Indian Air Force An-32 aircraft (registration K-2743), had gone missing over the Bay of Bengal on 22 July 2016 during an op mission
▶️ Analysis of search images had indicated the presence of debris of a crashed aircraft on the sea bed approximately, 140 nautical miles…
— PIB India (@PIB_India) January 12, 2024
ಪತ್ತೆಗಾಗಿ ಕೇಂದ್ರ ಸರಕಾರ ಹಾಗೂ ಮಿಲಿಟರಿ ತಜ್ಞರು ಸತತ ಮೂರು ತಿಂಗಳಿಂದ ಪ್ರಯತ್ನ ವಿಫಲವಾಗಿತ್ತು. ಇದಕ್ಕಾಗಿ ಪಿ-8ಎ ವಿಮಾನ, 3 ಡೋರ್ನಿಯರ್ ವಿಮಾನ, ಒಂದು ಜಲಂತರ್ಗಾಮಿ, ನೌಕಾಸೇನೆಯ 12 ನೌಕೆಗಳನ್ನು ಬಳಸಲಾಗಿತ್ತು. ಕುರುವೇ ಇಲ್ಲದಂತೆ ನಾಪತ್ತೆಯಾಗಿದ್ದ ಮೊದಲ ವಿಮಾನವಾಗಿತ್ತು. ಇಂದು ವಿಮಾನ ಅವಶೇಷವಾಗಿ ಪತ್ತೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:36 pm, Fri, 12 January 24