Mangalore: ದೋಣಿಯಿಂದ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು
ಮೀನುಗಾರಿಕಾ ದೋಣಿಯಿಂದ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಮೀನುಗಾರರೊಬ್ಬರ ಮೃತದೇಹ ಶುಕ್ರವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಒಡಿಶಾ ಮೂಲದ ಪ್ರಮೋದ್ ಮಿಂಜ್ (32) ಎಂದು ಗುರುತಿಸಲಾಗಿದೆ.
ಮಂಗಳೂರು: ಮೀನುಗಾರಿಕಾ ದೋಣಿಯಿಂದ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಮೀನುಗಾರರೊಬ್ಬರ ಮೃತದೇಹ ಶುಕ್ರವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಒಡಿಶಾ ಮೂಲದ ಪ್ರಮೋದ್ ಮಿಂಜ್ (32) ಎಂದು ಗುರುತಿಸಲಾಗಿದೆ.
ಮೀನುಗಾರಿಕೆಗೆ ಎಂದು ತೆರಳಿದ್ದ ಪ್ರಮೋದ್ ಮಿಂಜ್ ಶ್ರೀ ಯಕ್ಷೇಶ್ವರಿ ದೋಣಿಯಲ್ಲಿ ಕೆಲಸ ಮಾಡುತ್ತಿದ್ದರು. ವಾಪಸಾಗುತ್ತಿದ್ದಾಗ ಉಡುಪಿ ಜಿಲ್ಲೆಯ ಗಂಗೊಳ್ಳಿ ಬಂದರಿನ ಬಳಿಯ ಪಂಚಗಂಗಾವಳಿ ನದಿಯಲ್ಲಿ ದೋಣಿ ನಿಂತಿತ್ತು. ಮಂಗಳವಾರ ದೋಣಿಗೆ ಕ್ಯಾಚ್ ಅನ್ನು ಖಾಲಿ ಮಾಡುವಾಗ, ಪ್ರಮೋದ್ ಮಿಂಜ್ ಆಕಸ್ಮಿಕವಾಗಿ ನದಿಗೆ ಬಿದ್ದು ನಾಪತ್ತೆಯಾಗಿದ್ದಾರೆ. ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ
ಸಾಲ ಬಾಧೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಹೊಲದಲ್ಲಿ ಇರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಕರಡಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ರೈತನ ನಾಗನಗೌಡ ಮರಿಗೌಡ್ರ (40) ಎಂದು ಗುರುತಿಸಲಾಗಿದೆ.
ಇದನ್ನು ಓದಿ: ಹೆಚ್ಚುವರಿ ಲಗಾನಿಗೆ ಡಿಮ್ಯಾಂಡ್; ಬಾಗಲಕೋಟೆ ಕಬ್ಬು ಬೆಳೆಗಾರರು ಕಂಗಾಲು
ಕೃಷಿ ಪತ್ತಿನ ಸಹಕಾರಿ ಸಂಘ, ಕೆನರಾ ಬ್ಯಾಂಕ್ ಹಾಗೂ ಕೈಗಡ ಸಾಲ ಮಾಡಿಕೊಂಡಿದ್ದ ಎಮದು ಹೇಳಲಾಗಿದೆ. 1 ಲಕ್ಷ 15 ಸಾವಿರ ರೂ. ಸಾಲ ಇತ್ತು ಎಂದು ಹೇಳಲಾಗಿದೆ. 4 ಎಕರೆ 18 ಗುಂಟೆ ಜಮೀನಿದ್ದು ಕಳೆದ ವರ್ಷ ತೊಗರಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದರೆ ಗುಣಮಟ್ಟದ ಕಾರಣ ನೀಡಿ ಖರೀದಿ ಮಾಡಿರಲಿಲ್ಲ. ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ, ಮಾಡಿದ ಸಾಲ ಹಾಗೆಯೇ ಉಳಿದಿತ್ತು. ಇದರಿಂದ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಳಕಲ್ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರೈತ ನಾಗನಗೌಡ ತಾನು ತೊಟ್ಟಿದ್ದ ಧೋತರದಿಂದಲೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:13 pm, Fri, 2 December 22