ಮಂಗಳೂರು: ಸಿಡಿಲು ಬಡಿದು ಮನೆಯಲ್ಲಿ ಶಾರ್ಟ್ ಸರ್ಕ್ಯುಟ್, ಮಹಿಳೆ ಮಗುವಿಗೆ ಗಾಯ
ಮಂಗಳೂರು ನಗರ, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸೋಮವಾರ ಮಧ್ಯಾಹ್ನ ನಂತರ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಹಲವೆಡೆ ಧಾರಾಕಾರ ಮಳೆ ಸುರಿದಿದ್ದರೆ ಇನ್ನು ಕೆಲವೆಡೆ ಸಾಧಾರಣ ಮಳೆಯಾಗಿದೆ. ವಾಮಂಜೂರು ಅಮೃತ ನಗರದ ಗೋಪಾಲ ಪೂಜಾರಿ ಎಂಬುವವರ ಮನೆಯಲ್ಲಿ ಸಿಡಿಲಿನಿಂದ ಶಾರ್ಟ್ ಸರ್ಕ್ಯುಟ್ ಉಂಟಾಗಿ ಇಬ್ಬರು ಗಾಯಗೊಂಡಿದ್ದಾರೆ.
ಮಂಗಳೂರು, ಅಕ್ಟೋಬರ್ 16: ಸಿಡಿಲು ಬಡಿದು ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯುಟ್ (Short circuit) ಉಂಟಾಗಿ ಮಹಿಳೆ ಹಾಗೂ ಮಗುವೊಂದು ಗಾಯಗೊಂಡ ಘಟನೆ ಮಂಗಳೂರಿನ (Mangalore) ಮನೆಯೊಂದರಲ್ಲಿ ಸೋಮವಾರ ಸಂಭವಿಸಿದೆ. ಮಂಗಳೂರು ಹೊರವಲಯದ ವಾಮಂಜೂರು ಅಮೃತ ನಗರದ ಗೋಪಾಲ ಪೂಜಾರಿ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಸಿಡಿಲಿನ ಆರ್ಭಟಕ್ಕೆ ಮನೆಯ ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿವೆ. ಶಾರ್ಟ್ ಸರ್ಕ್ಯುಟ್ನಿಂದ ಸ್ವಿಚ್ ಬೋರ್ಡ್ ಹಾಗೂ ಮೀಟರ್ ಬಾಕ್ಸ್ ಹುಡಿಯಾಗಿವೆ.
ಸಿಡಿಲಿನ ಸದ್ದಿಗೆ ಮನೆಯಲ್ಲಿದ್ದ ಮಹಿಳೆ ಹಾಗೂ 5 ವರ್ಷದ ಮಗುವಿನ ಕಿವಿಗೆ ಹಾನಿಯಾಗಿದೆ. ಸಿಡಿಲಿನ ಸದ್ದಿಗೆ ಮಹಿಳೆ ಶ್ವೇತಾ ಹಾಗೂ ಮಗುವಿನ ಕಿವಿಗೆ ಹಾನಿಯಾಗಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂದರ್ಭ ಮನೆಯಲ್ಲಿ ನಾಲ್ವರು ಕುಟುಂಬಸ್ಥರು ಇದ್ದರು.
ಮಂಗಳೂರು ನಗರ, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸೋಮವಾರ ಮಧ್ಯಾಹ್ನ ನಂತರ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಹಲವೆಡೆ ಧಾರಾಕಾರ ಮಳೆ ಸುರಿದಿದ್ದರೆ ಇನ್ನು ಕೆಲವೆಡೆ ಸಾಧಾರಣ ಮಳೆಯಾಗಿದೆ.
ಇದನ್ನೂ ಓದಿ: ಅಡಕೆಗೆ ಬರುವ ಎಲೆ ಚುಕ್ಕೆ, ಹಳದಿ ಎಲೆ ರೋಗ ತಡೆಗೆ ಸರ್ಕಾರ ಬದ್ಧ: ಸಚಿವ ಎನ್ ಚಲುವರಾಯಸ್ವಾಮಿ ಭರವಸೆ
ನೇತ್ರಾವತಿ ಸೇತುವೆ ಮೇಲೆ ಸರಣಿ ಅಪಘಾತ: ಹಲವರಿಗೆ ಗಾಯ
ನೇತ್ರಾವತಿ ನದಿಯ ಹೊಸ ಸೇತುವೆಯ ಮೇಲೆ ಸೋಮವಾರ ಸಂಜೆ ಲಾರಿ ಕೆಟ್ಟು ನಿಂತಿದ್ದರಿಂದ ಸರಣಿ ಅಪಘಾತ ಸಂಭವಿಸಿ ಆರು ವಾಹನಗಳು ಜಖಂಗೊಂಡಿವೆ. ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಲಾರಿ ಪಲ್ಟಿಯಾಗಿ ಸೇತುವೆಯ ಮಧ್ಯಭಾಗದಲ್ಲಿ ಕೆಟ್ಟು ನಿಂತಿತ್ತು. ಅದೇ ಸಮಯದಲ್ಲಿ, ಭಾರೀ ಮಳೆ ಪ್ರಾರಂಭವಾಗಿದೆ. ನಿಯಂತ್ರಣ ತಪ್ಪಿದ ಆಲ್ಟೋ ಕಾರೊಂದು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ತರುವಾಯ ರಿಟ್ಜ್ ಕಾರು, ಕಾಂಟೆಸ್ಸಾ ಕಾರು, ಪಿಕಪ್ ಟ್ರಕ್ ಮತ್ತು ಅಂತಿಮವಾಗಿ ಕುಂಪಲ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿವೆ. ಈ ದುರ್ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ