ಸುರತ್ಕಲ್​ನಲ್ಲಿ ಫಾಜಿಲ್ ಕೊಲೆ ಪ್ರಕರಣ; ಕಾರು ಚಾಲಕ ಪೊಲೀಸರ ವಶಕ್ಕೆ!

ಪೊಲೀಸರು ಮೊದಲು ಸ್ಪಾಟ್​ಗೆ ಬಂದಿದ್ದ ಕಾರನ್ನು ಗುರುತಿಸಿದ್ದಾರೆ. ಈ ವೇಳೆ ಹ್ಯುಂಡೈ ಇಯಾನ್ ಕಾರು ಅನ್ನೋದು ಗೊತ್ತಾಗಿತ್ತು. ನಂತರ ಮಂಗಳೂರಲ್ಲಿದ್ದ ಎಲ್ಲಾ ಇಯಾನ್ ಕಾರುಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಸುರತ್ಕಲ್​ನಲ್ಲಿ ಫಾಜಿಲ್ ಕೊಲೆ ಪ್ರಕರಣ; ಕಾರು ಚಾಲಕ ಪೊಲೀಸರ ವಶಕ್ಕೆ!
ಮೃತ ಫಾಸಿಲ್, ಕೊಲೆ ನಡೆದಿದ್ದ ಸ್ಥಳ
Follow us
TV9 Web
| Updated By: sandhya thejappa

Updated on:Jul 31, 2022 | 12:19 PM

ಮಂಗಳೂರು: ಸುರತ್ಕಲ್​ನಲ್ಲಿ (Surathkal) ನಡೆದಿದ್ದ ಫಾಜಿಲ್ ಕೊಲೆ (Fazil Murder) ಪ್ರಕರಣಕ್ಕೆ ಸಂಬಂಧಿಸಿ ಹತ್ಯೆಗೆ ಆರೋಪಿಗಳನ್ನ ಕರೆತಂದಿದ್ದ ಕಾರು ಚಾಲಕನನ್ನು (Car Driver) ಪೊಲೀಸರು ನಿನ್ನೆ (ಜುಲೈ 30) ರಾತ್ರಿ ವಶಕ್ಕೆ ಪಡೆದಿದ್ದಾರೆ. ಅಜಿತ್ ಪೊಲೀಸರ ವಶದಲ್ಲಿರುವ ಕಾರು ಚಾಲಕ. ಜುಲೈ 28ರ ರಾತ್ರಿ ಫಾಜಿಲ್​ನ ಬರ್ಬರ ಕೊಲೆ ನಡೆದಿತ್ತು. ಕೊಲೆ ಆರೋಪಿಗಳನ್ನ ಅಜಿತ್ ಕಾರಿನಲ್ಲಿ ಕರೆತಂದು ಹತ್ಯೆ ನಡೆದ ಬಳಿಕ ಕರೆದೊಯ್ದಿದ್ದ. ಸದ್ಯ ಮಂಗಳೂರು ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಕಾರು ಚಾಲಕನನ್ನು ವಶಕ್ಕೆ ಪಡೆದ ಕಹಾನಿಯೇ ರೋಚಕವಾಗಿದೆ. ಪೊಲೀಸರು ಮೊದಲು ಸ್ಪಾಟ್​ಗೆ ಬಂದಿದ್ದ ಕಾರನ್ನು ಗುರುತಿಸಿದ್ದಾರೆ. ಈ ವೇಳೆ ಹ್ಯುಂಡೈ ಇಯಾನ್ ಕಾರು ಅನ್ನೋದು ಗೊತ್ತಾಗಿತ್ತು. ನಂತರ ಮಂಗಳೂರಲ್ಲಿದ್ದ ಎಲ್ಲಾ ಇಯಾನ್ ಕಾರುಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅದರಲ್ಲಿ ಬಿಳಿ ಬಣ್ಣದ ಕಾರುಗಳ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಇಯಾನ್ ಕಾರು ಮಾಲೀಕರನ್ನು ಕರೆಸಿ ವಿಚಾರಣೆ ನಡೆಸಿದ್ದರು.

ಇದನ್ನೂ ಓದಿ
Image
CWG 2022: ಒಂದೇ ದಿನ ನಾಲ್ಕು ಪದಕ: ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತ ಭರ್ಜರಿ ಪ್ರದರ್ಶನ
Image
18 ವರ್ಷದ ಮಕ್ಕಳು ನಿಮ್ಮ ಮಾತು ಕೇಳ್ತಾ ಇಲ್ವಾ? ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟರವರ ಸಲಹೆ ಇಲ್ಲಿದೆ
Image
ಪಶ್ಚಿಮ ಬಂಗಾಳದಲ್ಲಿ ಮೂವರು ಜಾರ್ಖಂಡ್ ಶಾಸಕರ ಬಂಧನ: ಅಪಾರ ಹಣ ವಶ
Image
Bangalore Rain: ವರುಣಾರ್ಭಟಕ್ಕೆ ತತ್ತರಿಸಿದ ಬೆಂಗಳೂರು: ಮನೆಗಳಿಗೆ ನುಗ್ಗಿದ ನೀರು, ಕೆರೆಯಂತಾದ ರಸ್ತೆಗಳು

ಇದನ್ನೂ ಓದಿ: Karnataka Govt Jobs 2022: ಜಲಸಂಪನ್ಮೂಲ ಇಲಾಖೆಯ ಬ್ಯಾಕ್​ಲಾಗ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆರೋಪಿಗಳು ಕೊಲೆ ನಡೆದ 500 ಮೀಟರ್ ದೂರದಲ್ಲಿ ಕಾರು ಪಾರ್ಕ್ ಮಾಡಿದ್ದರು. ಪಾರ್ಕ್‌ ಮಾಡಿ ಕಾರಿನಲ್ಲಿ ಮಂಕಿ ಕ್ಯಾಪ್ ಧರಿಸಿ ಕುಳಿತಿದ್ದರು. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಫಾಜಿಲ್​ ಹತ್ಯೆ ಪ್ರಕರಣ ಸಂಬಂಧ 51 ಜನರನ್ನು ವಿಚಾರಣೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಶಶಿಕುಮಾರ್, 10-12ಕ್ಕೂ ಹೆಚ್ಚು ಕಾರು ವಶಕ್ಕೆ ಪಡೆದು ತನಿಖೆ ಮಾಡಿದ್ದೇವೆ. ಸುರತ್ಕಲ್ ಹೊರವಲಯದಲ್ಲಿ ಅಜಿತ್ ವಶಕ್ಕೆ ಪಡೆದಿದ್ದೇವೆ. ಅಜಿತ್ ಒಂದಷ್ಟು ಮಾಹಿತಿ ಕೊಟ್ಟಿದ್ದಾನೆ. ಅಜಿತ್ ಜೊತೆ ಓರ್ವ ಆರೋಪಿ ಒಡನಾಟ ಹೊಂದಿದ್ದ. ಆರೋಪಿ ಹಲವು ಬಾರಿ ಕಾರು ತೆಗೆದುಕೊಂಡು ಹೋಗುತ್ತಿದ್ದ.  ಅದಕ್ಕಾಗಿ 10-12 ಕಾರು ವಶಕ್ಕೆ ಪಡೆದು ಪರಿಶೀಲಿಸಿದ್ದೇವೆ. ಹೀಗಾಗಿ ಪ್ರಕರಣಕ್ಕೆ ಹತ್ತಿರವಾದ ಎಲ್ಲ ಸಾಕ್ಷಿಗಳ ವಿಚಾರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಕರಾವಳಿ ಘಟನೆ ನೋವು ತಂದಿದೆ- ಬಸವರಾಜ ಹೊರಟ್ಟಿ: ಕರಾವಳಿ ಭಾಗದಲ್ಲಿನ ಹತ್ಯೆ ಪ್ರಕರಣಗಳು ಬಹಳ ನೋವು ತರುವ ಸಂಗತಿ. ಇಂಥಾ ಘಟನೆಗಳು ಆಗಬಾರದು ಎಂದು ಹಾವೇರಿಯಲ್ಲಿ ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಇಂಥಾ ಸಮಯದಲ್ಲಿ ಇಂಟಲಿಜೆನ್ಸಿಯವರು ಪೊಲೀಸರಿಗಿಂತ ಬಹಳ ಕೆಲಸ ಮಾಡಿ ಸರಕಾರಕ್ಕೆ ಮಾಹಿತಿ ಕೊಡಬೇಕು. ಇವೆಲ್ಲ ನಡೆಯಬಾರದು, ನಡೀತಿವೆ‌. ಯಾವುದೇ ಜಾತಿ ಇರಲಿ, ಏನೇ ಇರಲಿ ತಪ್ಪಿತಸ್ಥರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಇಂಥದ್ದು ಮಾಡಿದವರಿಗೆ ಶಿಕ್ಷೆ ಆಗಿದ್ದು ಇವತ್ತಿನರವೆಗೂ ನನಗೆ ಗೊತ್ತಾಗಿಲ್ಲ. ಶಿಕ್ಷೆ ಆದರೆ ಮಾತ್ರ ಇಂಥಾ ಘಟನೆಗಳು ಕಡಿಮೆ ಆಗುತ್ತವೆ. ಅದಕ್ಕೆ ನಮ್ಮಲ್ಲಿ ಆ ರಿಪೋರ್ಟ್, ಈ ರಿಪೋರ್ಟ್ ಅಂತಾ 20 ಕಾನೂನುಗಳಿವೆ. 10-15 ವರ್ಷ ಆಗೋದರಲ್ಲಿ ಜನರು ಅದನ್ನು ಮರೆತು ಬಿಡ್ತಾರೆ ಎಂದು ಇಲ್ಲಿನ ಪರಿಸ್ಥಿತಿಯ ಬಗ್ಗೆ ಹೊರಟ್ಟಿ ಖೇದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 18 ವರ್ಷದ ಮಕ್ಕಳು ನಿಮ್ಮ ಮಾತು ಕೇಳ್ತಾ ಇಲ್ವಾ? ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟರವರ ಸಲಹೆ ಇಲ್ಲಿದೆ

Published On - 8:36 am, Sun, 31 July 22

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್