ಪೊಲೀಸ್ ಕುಟುಂಬಸ್ಥರಿಂದ ಮಾಸ್ಕ್ ತಯಾರಿ; ತಮ್ಮವರಿಗಾಗಿ ಶ್ರಮಿಸುತ್ತಿದೆ ಮಂಗಳೂರಿನ ಖಾಕಿ ಕುಟುಂಬ

ಮಂಗಳೂರಿನ ಪೊಲೀಸ್ ಕ್ವಾಟ್ರಸ್ ಬಳಿಯಿರುವ  ಕಟ್ಟಡದಲ್ಲಿ ಮಾಸ್ಕ್ ತಯಾರಿ ನಡೆಯುತ್ತದೆ. ಇಲ್ಲಿ ಮಾಸ್ಕ್ನ್ನು ತಯಾರಿ ಮಾಡುತ್ತಾ ತಮ್ಮವರಿಗಾಗಿ ಶ್ರಮಧಾನ ಮಾಡಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ.

ಪೊಲೀಸ್ ಕುಟುಂಬಸ್ಥರಿಂದ ಮಾಸ್ಕ್ ತಯಾರಿ; ತಮ್ಮವರಿಗಾಗಿ ಶ್ರಮಿಸುತ್ತಿದೆ ಮಂಗಳೂರಿನ ಖಾಕಿ ಕುಟುಂಬ
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಸ್ಕ್​ಗಳನ್ನು ಪರಿಶೀಲನೆ ನಡೆಸುತ್ತಿರುವ ದೃಶ್ಯ

ದಕ್ಷಿಣ ಕನ್ನಡ: ರಾಜ್ಯದಲ್ಲಿ ಕೊರೊನಾ ಲಾಕ್​ಡೌನ್ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಫ್ರಂಟ್ ಫೂಟ್ ವಾರಿಯರ್ಸ್ಗಳಾಗಿ ಪೊಲೀಸರು ಶ್ರಮಿಸುತ್ತಿದ್ದಾರೆ. ನಿತ್ಯ ಜನರೊಂದಿಗೆ ವ್ಯವಹರಿಸುವ ಪೊಲೀಸರಿಗೆ ಮಾಸ್ಕ್ ಧರಿಸುವುದು ಅತ್ಯಗತ್ಯವಾಗಿದೆ. ಹೀಗಾಗಿ ಮಂಗಳೂರಿನಲ್ಲಿ ಪೊಲೀಸ್ ಕುಟುಂಬವೇ ತಮ್ಮವರಿಗಾಗಿ ಮಾಸ್ಕ್ ತಯಾರಿಸಿದ್ದು, ಆ ಮೂಲಕ ಕೊರೊನಾ ವಾರಿಯರ್ಸ್​ಗೆ ಗೌರವ ಕೊಡಲು ಮುಂದಾಗಿದೆ.

ಕೊರೊನಾ ಎರಡನೇ ಅಲೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್​ಗಳಲ್ಲಿ ಪೊಲೀಸ್ ಇಲಾಖೆ ಕೂಡ ಒಂದು. ಪ್ರತಿನಿತ್ಯ ಜನರು ಅನಗತ್ಯವಾಗಿ ಹೊರಬರದಂತೆ ತಡೆಯುವುದು, ನಿಯಮ ಮೀರಿದವರಿಗೆ ಶಿಸ್ತು ಕ್ರಮ. ಅಗತ್ಯ ವಸ್ತುಗಳ ಖರೀದಿ ಸಮಯದಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯ ಜಾರಿಯನ್ನು ಕಾರ್ಯರೂಪಕ್ಕೆ ತರುವುದು ಪೊಲೀಸರ ಕರ್ತವ್ಯ. ಇದರ ಜೊತೆಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಬ್ದಾರಿ ಕೂಡ ಪೊಲೀಸರಿಗೆ ಇದೆ.

ಕರ್ತವ್ಯದ ಸಮಯದಲ್ಲಿ ಮಾಸ್ಕ್​ನ್ನು ಧರಿಸದೇ ಒಂದು ಕ್ಷಣ ಮೈಮೆರೆತರೂ ಕೂಡ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಪೊಲೀಸರಿಗೆ ಕೊರೊನಾ ಆತಂಕ ಹೆಚ್ಚಾಗಿದೆ. ಇದರ ಜೊತೆಗೆ ಖಾಕಿ ಕುಟುಂಬಕ್ಕೂ ಕೂಡ ಇದು ದೊಡ್ಡ ತಲೆ ನೋವಾಗಿದೆ. ಹೀಗಾಗಿ ಪೊಲೀಸರಿಗೆ ಸಾಥ್ ನೀಡಲು ಈಗ ಪೊಲೀಸ್ ಪತ್ನಿಯರು, ಅಕ್ಕ, ತಂಗಿ-ತಾಯಿಯಂದಿರು ಮುಂದೆ ಬಂದಿದ್ದಾರೆ.

police mask

ಪೊಲೀಸ್ ಕುಟುಂಬಸ್ಥರಿಂದ ಮಾಸ್ಕ್ ತಯಾರಿ

ಮಂಗಳೂರಿನ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2 ಸಾವಿರ ಜನ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೆ ಮಾಸ್ಕ್​ನ್ನು ತಾವೇ ತಯಾರಿಸಿ ಕೊಡುವ ಜವಬ್ದಾರಿಯನ್ನು ಪೊಲೀಸರ ಮನೆಯವರು ವಹಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸ್ ಕುಟುಂಬ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರನ್ನು ಭೇಟಿ ಮಾಡಿ ವಿಚಾರ ತಿಳಿಸಿತ್ತು. ಆಗ ಪೊಲೀಸ್ ಕಮಿಷನರ್ ತಾವೇ ಇಲಾಖೆ ವತಿಯಿಂದ ಬಟ್ಟೆ ಮತ್ತು ಎಲೆಸ್ಟ್ರಿಕ್ ಕೊಡಿಸುವುದಾಗಿ ಹೇಳಿದ್ದಾರೆ. ಉಚಿತವಾಗಿ ಕೊಡುವ ನಿರ್ಧಾರಕ್ಕೆ ಗೌರವ ನೀಡಿ 10 ಸಾವಿರ ಮಾಸ್ಕ್​ಗೆ ಆರ್ಡರ್ ಕೊಟ್ಟು, ಮಾಸ್ಕ್ ಹೊಲಿಯುವ ಮಹಿಳೆಯರಿಗೆ ಗೌರವ ಧನ ನೀಡಲು ಮುಂದಾಗಿದ್ದಾರೆ.

ಮಂಗಳೂರಿನ ಪೊಲೀಸ್ ಕ್ವಾಟ್ರಸ್ ಬಳಿಯಿರುವ  ಕಟ್ಟಡದಲ್ಲಿ ಮಾಸ್ಕ್ ತಯಾರಿ ನಡೆಯುತ್ತದೆ. ಇಲ್ಲಿ ಮಾಸ್ಕ್ನ್ನು ತಯಾರಿ ಮಾಡುತ್ತಾ ತಮ್ಮವರಿಗಾಗಿ ಶ್ರಮಧಾನ ಮಾಡಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ
ಎನ್.ಶಶಿಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ:

ಕೊರೊನಾ ಎಂಬ ಬ್ರಹ್ಮ ರಾಕ್ಷಸ ನಮ್ಮ ಜೀವ ಹಿಂಡಿಹಿಪ್ಪೆ ಮಾಡಿದ: ಮೊದಲು ಮಾಸ್ಕ್​ ಹಾಕಿಕೊಳ್ಳಿ, ಲಸಿಕೆ ತೆಗೆದುಕೊಳ್ಳಿ: ಕ್ರಿಕೆಟರ್ ಅಶ್ವಿನ್ ಪತ್ನಿ

10 ವರ್ಷದ ಬಾಲಕನ ಸ್ವಾಭಿಮಾನಿ ಬದುಕು; ಮಾಸ್ಕ್ ಮಾರಾಟದಿಂದ ಬರುವ ಆದಾಯವೇ ಕುಟುಂಬಕ್ಕೆ ಆಧಾರ