ಮಂಗಳೂರು ವಿದ್ಯಾರ್ಥಿ ನಾಪತ್ತೆ ಕೇಸ್​: ಮನೆಗೆ ಹೋಗಲು ಒಪ್ಪದ ದಿಗಂತ್​, ಪೊಲೀಸ್ ವರದಿ

| Updated By: ವಿವೇಕ ಬಿರಾದಾರ

Updated on: Mar 12, 2025 | 1:23 PM

ಬಂಟ್ವಾಳದ ಫರಂಗಿಪೇಟೆ ನಿವಾಸಿ ದಿಗಂತ್ ಕಾಣೆಯಾಗಿದ್ದ ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು. ಪೊಲೀಸರು ಸಲ್ಲಿಸಿದ ಅಫಿಡವಿಟ್‌ನಲ್ಲಿ ದಿಗಂತ್ ತನ್ನ ಪೋಷಕರ ಬಳಿ ಹೋಗಲು ನಿರಾಕರಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ. ದಿಗಂತ್ ಪರೀಕ್ಷಾ ಭಯದಿಂದ ಮನೆಯಿಂದ ಹೊರಟಿದ್ದಾನೆ ಎಂದು ಹೇಳಿಕೆ ನೀಡಿದ್ದಾನೆ. ಹೈಕೋರ್ಟ್ ಪರೀಕ್ಷೆ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳದಂತೆ ಸೂಚಿಸಿ, ಮಕ್ಕಳ ಕಲ್ಯಾಣ ಸಮಿತಿಯ ನಿರ್ಧಾರಕ್ಕಾಗಿ ವಿಚಾರಣೆಯನ್ನು ಮುಂದೂಡಿದೆ.

ಮಂಗಳೂರು ವಿದ್ಯಾರ್ಥಿ ನಾಪತ್ತೆ ಕೇಸ್​: ಮನೆಗೆ ಹೋಗಲು ಒಪ್ಪದ ದಿಗಂತ್​, ಪೊಲೀಸ್ ವರದಿ
ವಿದ್ಯಾರ್ಥಿ ದಿಗಂತ
Follow us on

ಮಂಗಳೂರು, ಮಾರ್ಚ್​ 12: ಬಂಟ್ವಾಳದ (Bantwal) ಫರಂಗಿಪೇಟೆ ನಿವಾಸಿ ದಿಗಂತ್ ಮನೆಗೆ ಹೋಗಲು ಒಪ್ಪುತ್ತಿಲ್ಲ ಎಂದು ಬಂಟ್ವಾಳ ಪೊಲೀಸರು (Bantwal Police) ಹೈಕೋರ್ಟ್​ಗೆ ಸಲ್ಲಿಸಿದ ಅಫಿಡವಿಟ್​ ಉಲ್ಲೇಖವಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ದಿಗಂತ್ ಪತ್ತೆ ಬಗ್ಗೆ ಹೈ ಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಿದ್ದಾರೆ. ಅಫಿಡವಿಟ್​ನಲ್ಲಿ ದಿಗಂತ್ ಪತ್ತೆಯಾದ ಬಗ್ಗೆ ಹಾಗೂ ದಿಗಂತ್ ಹೇಳಿಕೆಗಳನ್ನು ಪೊಲೀಸರು ಉಲ್ಲೇಖಿಸಿದ್ದಾರೆ. ಬುಧವಾರ (ಮಾ.12) ಹೈ ಕೋರ್ಟ್​ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಯಿತು.

ವಿಚಾರಣೆ ವೇಳೆ, ಪೊಲೀಸರ ಪರ ವಕೀಲರು “ದಿಗಂತ್​ ಪೋಷಕರ ಬಳಿ ಹೋಗಲು ನಿರಾಕರಿಸುತ್ತಿರುವ ಬಗ್ಗೆ ಹೈಕೋರರ್ಟ್​ಗೆ ತಿಳಿಸಿದರು. ಇದೇ ವೇಳೆ ಮಗನನ್ನು ಕಳುಹಿಸಿ ಕೊಡುವಂತೆ ದಿಗಂತ್ ಫೋಷಕರು ಹೈಕೋರ್ಟ್​ಗೆ ಮನವಿ ಮಾಡಿಕೊಂಡರು.

ದಿಗಂತ್ ಪೋಷಕರ ಪರ ವಕೀಲರು: “ದಿಗಂತ್ ಪತ್ತೆಯಾದ ದಿನ ತಾಯಿ ಜೊತೆ ಫೋನ್​ನಲ್ಲಿ ಮಾತನಾಡಿದ ವಿವರ ನ್ಯಾಯಪೀಠಕ್ಕೆ ತಿಳಿಸಿದರು. ನಾನಾಗಿಯೇ ಹೋಗಿಲ್ಲ, ನನ್ನನ್ನು ಯಾರೋ ಕರೆದು ಕೊಂಡು ಹೋಗಿದ್ದಾರೆ ಅಂತ ದಿಗಂತ್​ ಎಂದಿದ್ದನ್ನು ಕೋರ್ಟ್ ಮುಂದೆ ಪ್ರಸ್ತಾಪಿಸಿದರು.

ಇದನ್ನೂ ಓದಿ
ದಿಗಂತ್ ನಾಪತ್ತೆ ಕೆಸ್​ಗೆ ​ಟ್ವಿಸ್ಟ್​: SP ಬಿಚ್ಚಿಟ್ಟರು ಸ್ಫೋಟಕ ಮಾಹಿತಿ
ಪಿಯುಸಿ ಪರೀಕ್ಷೆ ಭಯದಿಂದ ಮನೆಬಿಟ್ಟು ಊರೂರು ಸುತ್ತಿದ್ದ ವಿದ್ಯಾರ್ಥಿ ದಿಗಂತ್
ನಿಗೂಢ ನಾಪತ್ತೆಯಾಗಿದ್ದ ಮಂಗಳೂರು ವಿದ್ಯಾರ್ಥಿ ಉಡುಪಿಯಲ್ಲಿ ಪತ್ತೆ
ಮಂಗಳೂರು ವಿದ್ಯಾರ್ಥಿ ನಾಪತ್ತೆ: ಮಂಗಳಮುಖಿಯರ ಜೊತೆ ಹೋದ್ನಾ ದಿಗಂತ?

ಆದರೆ, ದಿಗಂತ್ ಅವನಾಗಿಯೇ ಹೋಗಿರುವುದಾಗಿ ಹೇಳಿದ್ದಾನೆ. ಅವನು ಯಾವುದೇ ಅನಧಿಕೃತ ಬಂಧನಕ್ಕೆ ಒಳಗಾಗಿರಲಿಲ್ಲ. ಪರೀಕ್ಷೆ ಭಯದಿಂದ ತಾನಾಗಿಯೇ ಹೋಗಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾಗಿ ಪೊಲೀಸರ ವರದಿಯಲ್ಲಿದೆ.

ಪಿಯುಸಿ ಪರೀಕ್ಷೆ ಇನ್ನೂ ಮುಗಿಯದ ಕಾರಣ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪೋಷಕರು ಇದೇ ವೇಳೆ ಮನವಿ ಮಾಡಿದರು.

ಹೈಕೋರ್ಟ್​: ಪರೀಕ್ಷೆ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳದಂತೆ ಸೂಚನೆ ನೀಡಿತು. ಅಲ್ಲದೇ, ಪರೀಕ್ಷೆ ವಿಚಾರದಲ್ಲಿ ವಿದ್ಯಾರ್ಥಿಗೆ ಯಾಕೆ ಒತ್ತಡ ಹೇರುತ್ತೀರಿ ಎಂದು ಪ್ರಶ್ನೆ ಮಾಡಿತು.

ಪೋಷಕರು: ದಿಗಂತ್ ಜೊತೆ ಮಾತನಾಡಲು ಅವಕಾಶ ಕೊಡುವಂತೆ ಹೈಕೋರ್ಟ್ ಮನವಿ ಮಾಡಿದರು.

ಹೈಕೋರ್ಟ್​: ದಿಗಂತ್ ವಿಚಾರದಲ್ಲಿ ಮಕ್ಕಳ ಕಲ್ಯಾಣ ಸಮಿತಿ ನಿರ್ಧಾರ ಕೈಗೊಳ್ಳಬೇಕೆಂದು ಸೂಚನೆ ನೀಡಿತು.
ದಿಗಂತ್ ಸದ್ಯ ಬೊಂದೆಲ್ ಮಕ್ಕಳ ಕಲ್ಯಾಣ ಸಮಿತಿ ವಶದಲ್ಲಿದ್ದಾರೆ.

ಇದನ್ನೂ ಓದಿ: ದಿಗಂತ್ ಪತ್ತೆಗೆ ಆಗ್ರಹಿಸಿ ಪ್ರತಿಭಟಿಸಿದ್ದ ಭಜರಂಗದಳ ಮುಖಂಡನಿಗೆ ಕೊಲೆ ಬೆದರಿಕೆ

ವಾದ-ಪ್ರತಿವಾದ ಆಲಿಸಿದ ಜಸ್ಟಿಸ್ ವಿ ಕಾಮೇಶ್ವರ್ ರಾವ್, ಜಸ್ಟಿಸ್ ಟಿ ಎಂ ನಡಾಫ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆಯನ್ನು ಮುಂದೂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ