ಮಂಗಳೂರು: ಸಾಲ ಮರುಪಾತಿ ವಿಚಾರಕ್ಕೆ ಕಿರುಕುಳ, ದಿವ್ಯಾಂಗ ಆತ್ಮಹತ್ಯೆಗೆ ಶರಣು
ಸಾಲ ಮರುಪಾವತಿ ವಿಚಾರವಾಗಿ ಬ್ಯಾಂಕ್ ಅಧ್ಯಕ್ಷರಿಂದ ಕಿರುಕುಳಕ್ಕೊಳಗಾದ ದಿವ್ಯಾಂಗ ವ್ಯಕ್ತಿ ಮನೋಹರ್ ಪಿರೇರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮನೋಹರ್ ಮಂಗಳೂರಿನ ಎಂಸಿಸಿ ಬ್ಯಾಂಕ್‌ನಿಂದ ಪಡೆದ 15 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಅವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು, ಡಿಸೆಂಬರ್ 18: ಸಾಲ ಮರುಪಾವತಿ ವಿಚಾರದಲ್ಲಿ ಮಂಗಳೂರು ಕ್ಯಾಥೊಲಿಕ್ ಸಹಕಾರಿ (ಎಂಸಿಸಿ) ಬ್ಯಾಂಕ್ ಅಧ್ಯಕ್ಷ ಅನಿಲ್ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದಿವ್ಯಾಂಗ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮಂಗಳೂರು (Mangaluru) ಹೊರವಲಯದ ಫೆರ್ಮಾಯಿ ಎಂಬಲ್ಲಿ ನಡೆದಿದೆ. ಫೆರ್ಮಾಯಿ ನಿವಾಸಿ ಮನೋಹರ್ ಪಿರೇರಾ (46) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಮನೋಹರ್ ಎಂಸಿಸಿ ಬ್ಯಾಂಕ್‌ನಿಂದ 15 ಲಕ್ಷ ಸಾಲ ಪಡೆದಿದ್ದರು. ಕೊರೊನಾ ಬಳಿಕ ನಷ್ಟಕ್ಕೀಡಾಗಿ ಬ್ಯಾಂಕ್ ಸಾಲ ಕಟ್ಟಲು ಆಗಿರಲಿಲ್ಲ. ಹೀಗಾಗಿ ಬ್ಯಾಂಕ್ನ ಆಡಳಿತ ಮಂಡಳಿ ಮನೆ ಜಪ್ತಿ ಮಾಡಲು ಮುಂದಾಗಿದೆ. ಇದರಿಂದ ನೊಂದ ಮನೋಹರ್ ಪಿರೇರಾ ಅವರು ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ, ” ಮೂರು ವರ್ಷಗಳಿಂದ ಕೆಲಸಕ್ಕೆ ಹೋಗಿಲ್ಲ. ಹೀಗಾಗಿ 9 ಲಕ್ಷ ರೂ. ಸಾಲ ಬಾಕಿ ಇದೆ. ಹೀಗಾಗಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಕಿರುಕುಳ ನೀಡಿದ್ದಾರೆ. ನನ್ನ ಸಾವಿಗೆ ಅನೀಲ್ ಲೋಬೊ ಕಾರಣ” ಎಂದು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಬಳಿಕ, ವಿಡಿಯೋವನ್ನು ವಾಟ್ಸಾಪ್ ಸ್ಟೇಟಸ್ಗೆ ಹಾಕಿ, ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ: 14 ವರ್ಷ ಬಳಿಕ ಕುಟುಂಬ ಸೇರಿದ ವ್ಯಕ್ತಿ, ಮಗನನ್ನು ಕಾಣದೇ ಕಣ್ಮುಚ್ಚಿದ ಹಡೆದವ್ವ
ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನೈತಿಕ ಸಂಬಂಧ: ವಿವಾಹಿತರಿಬ್ಬರು ಆತ್ಮಹತ್ಯಗೆ ಶರಣು
ಅನೈತಿಕ ಸಂಬಂಧ ಕುಟುಂಬದವರಿಗೆ ಗೊತ್ತಾದ ಹಿನ್ನೆಲೆಯಲ್ಲಿ ವಿವಾಹಿತರಿಬ್ಬರು ಭಯಗೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ಯರಗನಹಳ್ಳಿ ಗ್ರಾಮದ ಸೃಷ್ಟಿ (20), ಮದ್ದೂರು ತಾಲೂಕಿನ ಬನ್ನಹಳ್ಳಿ ನಿವಾಸಿ ಪ್ರಸನ್ನ (25) ಮೃತರು.
ಪ್ರಸನ್ನ ಹಾಗೂ ಸೃಷ್ಟಿ ಕೆಲವು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದರು. ಮೂರು ವರ್ಷದ ಹಿಂದೆ ಸೃಷ್ಟಿ ಗೆಳತಿ ಸ್ಪಂದನಾ ಎಂಬುವರ ಜೊತೆ ಪ್ರಸನ್ನ ವಿವಾಹವಾಗಿದ್ದರು. ಬಳಿಕ, ಒಂದೂವರೆ ವರ್ಷದ ಹಿಂದೆ ದಿನೇಶ್ ಎಂಬುವರ ಜೊತೆ ಸೃಷ್ಟಿ ಮದುವೆಯಾಗಿತ್ತು. ಮದುವೆಯಾಗಿದ್ದರೂ ಪ್ರಸನ್ನ ಮತ್ತು ಸೃಷ್ಟಿ ನಡುವೆ ಲವ್ವಿ ಡವ್ವಿ ಮುಂದುವರೆದಿತ್ತು.
ಇದೇ ವಿಚಾರಕ್ಕೆ ಸೃಷ್ಟಿ ಹಾಗೂ ಪತಿ ದಿನೇಶ್ ನಡುವೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ಸೃಷ್ಟಿ ಡಿಸೆಂಬರ್ 11 ರಂದು ಗಂಡನ ಮನೆಯಿಂದ ನಾಪತ್ತೆಯಾಗಿದ್ದಳು. ಆನಂತರ ಡಿಸೆಂಬರ್ 16 ರಂದು ಆಲೂರು ವೈದ್ಯನಾಥಪುರ ಬಳಿ ಶಿಂಷಾ ನದಿಯಲ್ಲಿ ಸೃಷ್ಟಿ ಶವ ಪತ್ತೆಯಾಗಿತ್ತು. ಸೃಷ್ಟಿ ಸಾವಿನ ವಿಚಾರ ತಿಳಿದು ಪ್ರಸನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಸೃಷ್ಟಿ ಹಾಗೂ ಸ್ಪಂದನಾ ಇಬ್ಬರು ಕೂಡ ಕ್ಲಾಸ್ಮೇಟ್ ಆಗಿದ್ದರು. ಪ್ರಸನ್ನ, ಸೃಷ್ಟಿ ಹಾಗೂ ಸ್ಪಂದನಾ ಇಬ್ಬರನ್ನೂ ಕೂಡ ಪ್ರೀತಿ ಮಾಡಿದ್ದನು. ಮದುವೆ ಬಳಿಕವೂ ಸೃಷ್ಟಿ ಮತ್ತು ಪ್ರಸನ್ನ ನುಡುವೆ ಪ್ರೇಮ ಮುಂದುವರೆದಿತ್ತು. ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ