ಮಂಗಳೂರು, ಜನವರಿ 21: ಮಂಗಳೂರಿನ ಕೋಟೆಕಾರ್ ಬ್ಯಾಂಕ್ನಲ್ಲಿ ಚಿನ್ನಾಭರಣ, ನಗದು ದರೋಡೆ (Bank Robbery) ಕೇಸ್ಗೆ ಸಂಬಂಧಿಸಿದಂತೆ ಬ್ಯಾಂಕ್ ದರೋಡೆಕೋರನ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿದ್ದಾರೆ. ತಲಪಾಡಿಯ ಅಲಂಕಾರು ಗುಡ್ಡದಲ್ಲಿ ಘಟನೆ ನಡೆದಿದೆ. ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಯತ್ನ ಹಿನ್ನೆಲೆ ಆರೋಪಿ ಕಣ್ಣನ್‌ಮಣಿ ಕಾಲಿಗೆ ಫೈರಿಂಗ್ ಮಾಡಲಾಗಿದೆ.
ನಿನ್ನೆ ತಮಿಳುನಾಡಿನ ತಿರುವನ್ವೇಲಿ ಬಳಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇಂದು ತಮಿಳುನಾಡಿನಿಂದ ಆರೋಪಿಗಳನ್ನ ಮಂಗಳೂರಿನ ಕೆ.ಸಿ.ರೋಡ್ಗೆ ಮಹಜರು ಮಾಡಲು ಕರೆತರಲಾಗುತ್ತಿತ್ತು.
ಇದನ್ನೂ ಓದಿ: ಮಂಗಳೂರಿನ ಕೋಟೆಕಾರು ಬ್ಯಾಂಕ್ ದರೋಡೆ: ಮೂವರು ಆರೋಪಿಗಳ ಬಂಧನ
ಮುರುಗನ್ ಡಿ. ದೇವರ್, ಯೋಶುವಾ ರಾಜೇಂದ್ರನ್, ಕಣ್ಣನ್ ಮಣಿಯನ್ನ ನಿನ್ನೆ ತಮಿಳುನಾಡಿನ ತಿರುವನ್ವೇಲಿಯಲ್ಲಿ ಬಂಧಿಸಿದ್ದ ಪೊಲೀರು ಇಂದು ರಾಜ್ಯಕ್ಕೆ ಕರೆದುಕೊಂಡು ಬರುತ್ತಿದ್ದರು. ಆದರೆ ಕರ್ನಾಟಕ-ಕೇರಳ ಗಡಿ ಭಾಗದ ತಲಪಾಡಿ ಅಲಂಕಾರು ಗುಡ್ಡ ಬಳಿ ಆರೋಪಿ ಕಣ್ಣನ್‌ಮಣಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದ. ಈ ವೇಳೆ ಇನ್ಸ್‌ಪೆಕ್ಟರ್ ರಫೀಕ್, ಆರೋಪಿ ಮೇಲೆ ಫೈರಿಂಗ್ ಮಾಡಿದ್ದಾರೆ. ಸದ್ಯ ಆತನನ್ನ ದೇರಳಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ಉಳ್ಳಾಲ ಇನ್ಸ್ ಪೆಕ್ಟರ್ ಸೇರಿ ಮೂವರಿಗೆ ಗಾಯವಾಗಿದೆ. ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ, ಸಿಬ್ಬಂದಿ ನಿತಿನ್ ಹಾಗೂ ಅಂಜನಪ್ಪಗೆ ಗಾಯಗಳಾಗಿವೆ. ಸಂಜೆ 4.20ರ ವೇಳೆ ತಲಪಾಡಿ ಅಲಂಗಾರು ಗುಡ್ಡೆ ಬಳಿ ಪೊಲೀಸರು ಮಹಜರಿಗೆ ಕರೆ ತಂದಿದ್ದರು. ಈ ವೇಳೆ ಬಿಯರ್ ಬಾಟಲಿಯಿಂದ ಸಿಸಿಬಿ ಸಿಬ್ಬಂದಿ ಅಂಜನಪ್ಪ ಹಾಗೂ ಉಳ್ಳಾಲ ಠಾಣೆ ಸಿಬ್ಬಂದಿ ನಿತಿನ್ ಮೇಲೆ ಆರೋಪಿಗಳು ದಾಳಿ ಮಾಡಿದ್ದಾರೆ. ತಡೆಯಲು ಬಂದ ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ಮೇಲೂ ದಾಳಿ ಮಾಡಿದ್ದು, ಆಗ ಸ್ಥಳದಲ್ಲೇ ಇದ್ದ ಸಿಸಿಬಿ ಇನ್ಸ್ ಪೆಕ್ಟರ್ ರಫೀಕ್ರಿಂದ ಕಣ್ಣನ್ ಕಾಲಿಗೆ ಫೈರಿಂಗ್ ಮಾಡಲಾಗಿದೆ.
ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳು ನಿನ್ನೆಯಷ್ಟೇ ಖಾಕಿ ಬಲೆಗೆ ಬಿದ್ದಿದ್ದಾರೆ. ಜನವರಿ 17 ರಂದು ಕೋಟೆಕಾರು ಸಹಕಾರಿ ಬ್ಯಾಂಕ್‌ಗೆ ನುಗ್ಗಿ ದರೋಡೆ ಮಾಡಿದ್ದ ಗ್ಯಾಂಗ್ ಕೇರಳ ಮೂಲಕ ತಮಿಳುನಾಡು ಸೇರಿದ್ದರು. ಖಚಿತ ಮಾಹಿತಿ ಮೇರೆಗೆ ಗ್ಯಾಂಗ್‌ನ ಮೂವರನ್ನು ಪೊಲೀಸರು ಲಾಕ್ ಮಾಡಿದ್ದರು.
ಇದನ್ನೂ ಓದಿ: ಮಂಗಳೂರು: ಕದ್ದ ಗೋಣಿ ಚಿನ್ನದ ಸಹಿತ 700 ಕಿ.ಮೀ. ಕಾರಿನಲ್ಲೇ ಪ್ರಯಾಣಿಸಿದ್ದ ದರೋಡೆಕೋರರು!
ಕೋಟೆಕಾರು ಬ್ಯಾಂಕ್ ಲೂಟಿ ಮಾಡಿದವರು ತಮಿಳುನಾಡಿನವರೇ ಆದರೂ, ಇವರೆಲ್ಲಾ ಮುಂಬೈನ ನಟೋರಿಯಸ್ ಧಾರಾವಿ ಗ್ಯಾಂಗ್‌ನವರು. ಕೋಟೆಕಾರ್ ಬ್ಯಾಂಕ್ ದರೋಡೆಯ ಕಿಂಗ್ ಪಿನ್ ಮುರುಗನ್ ದರೋಡೆಯ ಕಂಪ್ಲೀಟ್ ಪ್ಲ್ಯಾನ್ ಸಿದ್ಧಪಡಿಸಿದ್ದೇ ಮುರುಗನ್, ಧಾರಾವಿಯಲ್ಲಿ ಆಕ್ಟೀವ್ ಆಗಿದ್ದ ಮೊಸ್ಟ್ ಡೇಂಜರಸ್ ಗ್ಯಾಂಗ್, ಈ ಹಿಂದೆಯೂ ಹಲವು ದರೋಡೆ ನಡೆಸಿ ಪಳಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:43 pm, Tue, 21 January 25