ಮಂಗಳೂರು: ನಗರದ ಬಸ್ ನಿಲ್ದಾಣದಲ್ಲಿ ನೈತಿಕ ಪೊಲೀಸ್‌ಗಿರಿ; ನಾಲ್ವರು ಆರೋಪಿಗಳ ಬಂಧನ
ಬಸ್‌ನಲ್ಲಿ ಕುಳಿತಿದ್ದ ಯುವಕ, ಯುವತಿಯನ್ನು ಪ್ರಶ್ನಿಸಿ ಹಲ್ಲೆ ಮಾಡಲಾಗಿತ್ತು. ಬಸ್ ನಿರ್ವಾಹಕ, ಕೆಲ ಯುವಕರಿಂದ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಯುವಕನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿತ್ತು.
ಮಂಗಳೂರು: ನಗರದ ಬಸ್ ನಿಲ್ದಾಣದಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್, ರಾಘವೇಂದ್ರ, ರಂಜಿತ್ ಹಾಗೂ ಪವನ್ ಬಂಧಿತ ಆರೋಪಿಗಳು. ನಿನ್ನೆ ಮಂಗಳೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿತ್ತು. ಬಸ್‌ನಲ್ಲಿ ಕುಳಿತಿದ್ದ ಯುವಕ, ಯುವತಿಯನ್ನು ಪ್ರಶ್ನಿಸಿ ಹಲ್ಲೆ ಮಾಡಲಾಗಿತ್ತು. ಬಸ್ ನಿರ್ವಾಹಕ, ಕೆಲ ಯುವಕರಿಂದ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಯುವಕನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿತ್ತು.
ಬೆಂಗಳೂರು: ಕಾರುಗಳ ಗಾಜು ಜಖಂಗೊಳಿಸಿದ್ದ ಇಬ್ಬರು ಚಾಲಕರ ಸೆರೆ ಶಾಂತಿಧಾಮ ಶಾಲೆ ಬಳಿ ಕಾರುಗಳ ಗಾಜು ಜಖಂ ಪ್ರಕರಣಕ್ಕೆ ಸಂಬಂಧಿಸಿ ಕಾರುಗಳ ಗಾಜು ಜಖಂಗೊಳಿಸಿದ್ದ ಇಬ್ಬರು ಚಾಲಕರನ್ನು ಸೆರೆ ಹಿಡಿಯಲಾಗಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಂದ ಆರೋಪಿಗಳ ಸೆರೆಯಾಗಿದೆ. ಚಾಲಕರಾದ ಟೋನಿ ಹಾಗೂ ಶಿವು ಬಂಧಿತ ಅರೋಪಿಗಳು. ಶಾಲೆಯ ಮುಂದೆ ಕಾರು ನಿಲ್ಲಿಸಬೇಡಿ ಎಂದಿದ್ದ ಚಾಲಕರು, ಶಾಲಾ ಬಸ್ ತೆಗೆಯಲು ಕಷ್ಟ ಆಗುತ್ತೆ ಎಂದಿದ್ದರು. ಆದ್ರೂ ಮಾಲೀಕರು ಕಾರುಗಳು ನಿಲ್ಲಿಸಿ ಹೋಗಿದ್ದಕ್ಕೆ ಜಖಂ ಮಾಡಿದ್ದಾರೆ. ಶಾಲೆ ಮುಂದೆ ನಿಲ್ಲಿಸಿದ್ದ ಕಾರು ಜಖಂಗೊಳಿಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೊಟ್ಟೂರು ಠಾಣೆ PSI, ASI ಸೇರಿ 6 ಸಿಬ್ಬಂದಿ ವಿರುದ್ಧ ಕೇಸ್ ವಶಕ್ಕೆ ಪಡೆದಿದ್ದ ಟ್ರ್ಯಾಕ್ಟರ್ ಬಿಡಲು ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿ ವಿಜಯನಗರ ಜಿಲ್ಲೆ ಕೊಟ್ಟೂರು ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. PSI, ASI ಸೇರಿ 6 ಸಿಬ್ಬಂದಿ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೊಟ್ಟೂರು ಠಾಣೆ ಸಿಬ್ಬಂದಿ, ಮುಂಗಡವಾಗಿ 2.5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಬಲೆಗೆ ಬಿದ್ದಿದ್ದಾರೆ.
ಟ್ರ್ಯಾಕ್ಟರ್ ಮಾಲೀಕ ಬಿ.ವೆಂಕಟೇಶ್ ಎಸಿಬಿಗೆ ದೂರು ನೀಡಿದ್ದರು. ಲಂಚ ಸ್ವೀಕರಿಸುತ್ತಿದ್ದ ಪಿಎಸ್ಐ, ಎಎಸ್ಐ ಸೈಫುಲ್ಲಾ ಬಂಧನ ಮಾಡಲಾಗಿದೆ. ಕೊಟ್ಟೂರು ಸಿಪಿಐ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಬಲೆಗೆ ಬಿದ್ದಿದ್ದಾರೆ. 2.5 ಲಕ್ಷ ಲಂಚದ ಹಣದ ಸಮೇತ ಎಸಿಬಿಗೆ ಸಿಕ್ಕಿಬಿದ್ದಿದ್ದಾರೆ. ಬಳ್ಳಾರಿ ಭ್ರಷ್ಟಾಚಾರ ನಿಗ್ರಹ ದಳ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಆರೋಪ; ಪ್ರಚಾರಕರ ಬಳಿ ಇದ್ದ ಪುಸ್ತಕ ಹಾಗೂ ಭಿತ್ತಿಪತ್ರಗಳಿಗೆ ಬೆಂಕಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಆರೋಪದಲ್ಲಿ ಪ್ರಚಾರಕರ ಬಳಿ ಇದ್ದ ಪುಸ್ತಕ ಹಾಗೂ ಭಿತ್ತಿಪತ್ರಗಳಿಗೆ ಬೆಂಕಿ ಹಾಕಿದ ಘಟನೆ ನಡೆದಿದೆ. ಪುಸ್ತಕ, ಭಿತ್ತಿಪತ್ರ ರಸ್ತೆಗೆ ಹಾಕಿ ಸ್ಥಳೀಯರು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಮೋತಿಲಾಲ್ ರಸ್ತೆಯಲ್ಲಿ ಘಟನೆ ನಡೆದಿದೆ. ನಾಲ್ವರು ಕ್ರಿಶ್ಚಿಯನ್ ಧರ್ಮ ಪ್ರಚಾರಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳೀಯರು ಪ್ರಚಾರಕರನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಮಂಗಳೂರು: ನಗರದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ; ಅನ್ಯಕೋಮಿನ ಜೋಡಿ ಮೇಲೆ ಗುಂಪಿನಿಂದ ಹಲ್ಲೆ
ಇದನ್ನೂ ಓದಿ: ಮಂಗಳೂರು: ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಮತಾಂತರ ಯತ್ನವೇ ಕಾರಣ -ಮಂಗಳೂರು ಪೊಲೀಸರ ತನಿಖೆಯಲ್ಲಿ ಬಹಿರಂಗ