ಮಂಗಳೂರಿನ ಬಹುಕೋಟಿ ವಂಚನೆ ಕೇಸ್: ಐಷಾರಾಮಿ ವಂಚಕ ರೋಹನ್ ಸಲ್ಡಾನಾ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಮಂಗಳೂರಿನ ರೋಹನ್ ಸಲ್ಡಾನಾ ಎಂಬಾತನನ್ನು ಬಹುಕೋಟಿ ರೂ. ವಂಚನೆ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಈ ಐಷರಾಮಿ ನಟೋರಿಯಸ್​ ವಂಚಕ ಸೆರೆಸಿಕ್ಕಿದ್ದು ಮಾತ್ರ ರೋಚಕ. ಆಂಧ್ರ ಪ್ರದೇಶ ಮೂಲದ ಉದ್ಯಮಿಯಿಂದ ರೋಹನ್ ಸಲ್ಡಾನಾ ತಗ್ಲಾಕ್ಕೊಂಡಿದ್ದಾನೆ. ಆರೋಪಿ ಕೈಸ್ತ ಸಮುದಾಯದವನಾಗಿದ್ದು, ಇತನ ಮನೆಯಲ್ಲಿ ಹಿಂದೂ ಗುರೂಜಿ ಫೋಟೋ ಪತ್ತೆ ಆಗಿದೆ.

ಮಂಗಳೂರಿನ ಬಹುಕೋಟಿ ವಂಚನೆ ಕೇಸ್: ಐಷಾರಾಮಿ ವಂಚಕ ರೋಹನ್ ಸಲ್ಡಾನಾ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
ರೋಶನ್ ಸಲ್ಡಾನಾ
Updated By: ಗಂಗಾಧರ​ ಬ. ಸಾಬೋಜಿ

Updated on: Jul 18, 2025 | 2:59 PM

ಮಂಗಳೂರು, ಜುಲೈ 18: ಸಾಲ ಕೊಡುವುದಾಗಿ ಕೊಟ್ಯಂತರ ರೂ ಹಣ ಪಡೆದು ವಂಚನೆ ಮಾಡುತ್ತಿದ್ದ ನಟೋರಿಯಸ್ ರೋಹನ್ ಸಲ್ಡಾನಾ (Rohan Saldanha) ಎಂಬಾತನನ್ನ ಬಂಧಿಸುವಲ್ಲಿ ಮಂಗಳೂರು (Mangaluru) ಪೊಲೀಸರು ಯಶಸ್ವಿಯಾಗಿದ್ದಾರೆ. ಅನೇಕ ವರ್ಷಗಳಿಂದ 200 ಕೋಟಿಗೂ ಅಧಿಕ ವಂಚನೆ ಮಾಡಿದ್ದಾನೆ. ಅಷ್ಟಕ್ಕೂ ಈ ಐಷರಾಮಿ ವಂಚಕ ಆಂಧ್ರ ಪ್ರದೇಶ ಮೂಲದ ಉದ್ಯಮಿಯಿಂದ ಸಿಕ್ಕಿಬಿದ್ದಿದ್ದು ಅಚ್ಚರಿಯ ಸಂಗತಿ.

ಆಂಧ್ರ ಪ್ರದೇಶ ಮೂಲದ ಸಿಲ್ಕ್ ಸ್ಯಾರಿ ತಯಾರಿಕ ಕಂಪನಿ ಮಾಲೀಕ, ಸಾಲಕ್ಕಾಗಿ 2023ರಲ್ಲಿ ಬೆಂಗಳೂರಿನಲ್ಲಿ ಫೈನಾನ್ಸ್ ಕನ್ಸಲ್‌ಟೆನ್ಸಿ ನಡೆಸಿಕೊಂಡಿರುವ ವಿಮಲೇಶ್ ಎಂಬಾತನ ಮೊರೆ ಹೋಗಿದ್ದ. ಆಗ ವಿಮಲೇಶ್ ಇದೇ ರೋಹನ್‌ನನ್ನ ಪರಿಚಯಿಸಿಕೊಟ್ಟಿದ್ದ. ಸಾಲ ಕೊಡಿಸೋದಕ್ಕೆ ಒಂದು ಸ್ಟ್ಯಾಂಪ್ ಪೇಪರ್‌ಗೆಂದು ರೋಹನ್ ಉದ್ಯಮಿ ಬಳಿ 40 ಲಕ್ಷ ರೂ ಹಣ ಪಡೆದಿದ್ದ. ಇದಾದ 15 ದಿನಗಳ ಬಳಿಕ ರೋಹನ್ ಎಸ್ಕೇಪ್ ಆಗಿದ್ದ.

ಇದನ್ನೂ ಓದಿ: ಸಾಲ ಕೊಡುವುದಾಗಿ ಕೋಟ್ಯಂತರ ರೂ ವಂಚನೆ: ವಿದೇಶಿ ಯುವತಿಯರೊಂದಿಗೆ ಪಾರ್ಟಿ ಮಾಡುತ್ತಿರುವಾಗಲೇ ಬಂಧನ

ಇದನ್ನೂ ಓದಿ
ಕೇವಲ ವಂಚನೆಯಿಂದ ಐಷಾರಾಮಿ ಬದುಕು ನಡೆಸಿದವನನ್ನು ಬಂಧಿಸಿದ ಪೊಲೀಸ್
ಮಂಗಳೂರು ನಟೋರಿಯಸ್‌ ವಂಚಕನ ರಹಸ್ಯ ಕೋಣೆಲಿ ವಿದೇಶಿ ಯುವತಿಯರು, ಮದ್ಯ ರಾಶಿ!
ಸಾಲ ಕೊಡುವುದಾಗಿ ಕೋಟ್ಯಂತರ ರೂ ವಂಚನೆ: ನಟೋರಿಯಸ್​ ವಂಚಕನ ಬಂಧನ
ಶುಶ್ರುತಿ ಸಹಕಾರ ಬ್ಯಾಂಕ್ ವಂಚನೆ: ಇಡಿ ತನಿಖೆ ವೇಳೆ ಆಘಾತಕಾರಿ ಅಂಶ ಬಯಲಿಗೆ

ಮೋಸ ಹೋಗಿದ್ದು ಅರಿವಾದ ಉದ್ಯಮಿ, ಕಳೆದ ವರ್ಷ ಜುಲೈ 16ರಂದು ಚಿತ್ರದುರ್ಗ ನಗರ ಠಾಣೆಗೆ ದೂರು ಕೊಟ್ಟಿದ್ದರು. ಆಗ ಈ ಇಬ್ಬರ ನಡುವೆ ಇದ್ದ ವಿಮಲೇಶ್ ಎಂಬಾತನನ್ನ ಮಂಗಳೂರಿನ ಪೊಲೀಸರು ಬಂಧಿಸಿದ್ದರು. ಆಗಲೇ ಈ ರೋಹನ್​ನ ವಂಚನೆ ಕಹಾನಿ ಬಯಲಾಗಿದೆ.

ರೋಹನ್​ ಮನೆಯಲ್ಲಿ ಹಿಂದೂ ಗುರೂಜಿ ಫೋಟೋ

ರೋಹನ್, ದೇಶದ ದೊಡ್ಡ ದೊಡ್ಡ ಕುಳಗಳಿಗೆ ಗಾಳ ಹಾಕುತ್ತಿದ್ದ. ಐಷಾರಾಮಿ ವ್ಯಕ್ತಿಗಳು, ಉದ್ಯಮಿಗಳನ್ನ ಟಾರ್ಗೆಟ್ ಮಾಡುತ್ತಿದ್ದ. ಭೂ ವ್ಯವಹಾರ, ಸಾಲ ನೀಡುವ ನೆಪದಲ್ಲಿ ನಂಬಿಸಿ, ಮಂಗಳೂರಿನ ಜಪ್ಪಿನಮೊಗರುವಿನ‌ ಐಷಾರಾಮಿ ಬಂಗಲೆಗೆ ಕರೆದು ವ್ಯವಹಾರ ಕುದುರಿಸುತ್ತಿದ್ದ. ರೋಹನ್, ಕೈಸ್ತ ಸಮುದಾಯದವನಾದರೂ ಹಿಂದೂ ಗುರೂಜಿ ಫೋಟೋವನ್ನು ತನ್ನ ಮನೆಯಲ್ಲಿ ಹಾಕಿದ್ದಾನೆ. ಆ ಮೂಲಕ  ಕೂಡ ವಂಚಿಸುತ್ತಿದ್ದ ಶಂಕೆ ವ್ಯಕ್ತವಾಗಿದೆ.

ಉತ್ತರ ಪ್ರದೇಶದ ಹಿಂದೂ ಗುರೂಜಿ ನೀಮ್ ಕರೋಲಿ ಬಾಬಾ ಫೋಟೋವನ್ನು ರೋಷನ್ ತನ್ನ ಕಚೇರಿಯಲ್ಲಿ ಹಾಕಿದ್ದಾನೆ. ಆ ಮೂಲಕ ಉತ್ತರ ಭಾರತದ ಬಹುಕೋಟಿ ಉದ್ಯಮಿಗಳನ್ನು ವಂಚನೆಗೆ ನಾನು ಬಾಬಾ ಭಕ್ತ ಅಂತ ನಂಬಿಸುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಗೆಸ್ಟ್ ರೂಮ್​ನಲ್ಲಿ ವಿದೇಶಿ ಯುವತಿಯರು, ಮದ್ಯ ರಾಶಿ! ಮಂಗಳೂರು ನಟೋರಿಯಸ್‌ ವಂಚಕನ ರಹಸ್ಯ ಕೋಣೆ ಹೇಗಿತ್ತು ನೋಡಿ

ನೀಮ್ ಕರೋಲಿ ಬಾಬಾ ಆಂಜನೇಯನ ಅವತಾರ ರೂಪಿ ಎಂದೇ ಪ್ರಸಿದ್ಧಿ. ಸ್ವತಃ ಆಂಜನೇಯ ನೀಡಿರುವ ಪಾತ್ರೆಯೊಂದು ಬಾಬಾ ಬಳಿ ಇದೆ ಎನ್ನಲಾಗುತ್ತೆ. ಸದ್ಯ ಬಾಬಾ ಫೋಟೋ ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:40 pm, Fri, 18 July 25