Mangalore News: ಮಂಗಳೂರಿನ ತೋಕೂರು ಬಳಿ ಹಳಿ ತಪ್ಪಿದ ಅದಾನಿ ಗ್ರೂಪ್​ಗೆ ಸೇರಿದ ರೈಲು

ಸೋಮವಾರ ಸಂಜೆ ಚೆನ್ನೈನಿಂದ ಕೇರಳ ಮತ್ತು ಮಂಗಳೂರು ಮಾರ್ಗವಾಗಿ ಹೊರಟಿದ್ದ ಗೂಡ್ಸ್ ರೈಲು ಹಳಿತಪ್ಪಿದೆ.

Mangalore News: ಮಂಗಳೂರಿನ ತೋಕೂರು ಬಳಿ ಹಳಿ ತಪ್ಪಿದ ಅದಾನಿ ಗ್ರೂಪ್​ಗೆ ಸೇರಿದ ರೈಲು
ಹಳಿ ತಪ್ಪಿದ ಗೂಡ್ಸ್ ಟ್ರೈನ್
Follow us
TV9 Web
| Updated By: Digi Tech Desk

Updated on:May 23, 2023 | 11:57 AM

ಮಂಗಳೂರು: ನಗರದ ಹೊರವಲಯದ ತೋಕೂರು ರೈಲು ನಿಲ್ದಾಣದ(Thokur Railway Station) ಬಳಿ ಮೇ 22 ರ ಸೋಮವಾರ ಸಂಜೆ ಚೆನ್ನೈನಿಂದ ಕೇರಳ ಮತ್ತು ಮಂಗಳೂರು ಮಾರ್ಗವಾಗಿ ಹೊರಟಿದ್ದ ಗೂಡ್ಸ್ ರೈಲು ಹಳಿತಪ್ಪಿದೆ(Goods Train Derails). ಈ ಪರಿಣಾಮ ನಿನ್ನೆ ಕಾರವಾರ ಬೆಂಗಳೂರು ಸೇರಿದಂತೆ ವಿವಿಧ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು.

ಇನ್ನು ನಿನ್ನೆ ಈ ಘಟನೆಯಿಂದ ಒಂದು ಗಂಟೆ ತಡವಾಗಿ ರೈಲುಗಳು ಸಂಚರಿಸಿದ್ದು ಗೂಡ್ಸ್ ರೈಲು ದುರಸ್ತಿಗೆ ಕ್ರಮ ಕೈಗೊಳ್ಳಲಾಗಿತ್ತು. ಸದ್ಯ ಹಳಿತಪ್ಪಿದ ಗೂಡ್ಸ್ ರೈಲು ಅದಾನಿ ಗ್ರೂಪ್‌ಗೆ ಸೇರಿದ್ದು, ಲೋಡ್ ಆಗಿರಲಿಲ್ಲ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಹಳಿ ತಪ್ಪಲು ಕಾರಣ ತಿಳಿದುಬಂದಿಲ್ಲ. ತೋಕೂರು ನಿಲ್ದಾಣದ ಬಳಿ ಗೂಡ್ಸ್ ರೈಲು ಹಳಿತಪ್ಪಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ರೈಲು ಸಂಚಾರಕ್ಕೆ ಯಾವುದೇ ತೊಂದರೆಯಾಗಲಿಲ್ಲ. ಯಶವಂತಪುರ-ಕಾರವಾರ ಹಗಲು ರೈಲು ಯಾವುದೇ ತೊಂದರೆಗಳಿಲ್ಲದೆ ಮತ್ತೊಂದು ಹಳಿಯಲ್ಲಿ ಚಲಿಸಿತು ಎಂದು ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: Belagavi News: ಕೃಷ್ಣಾ ನದಿ ಕೂಗಳತೆ ದೂರದಲ್ಲೇ ನೀರಿಗಾಗಿ ಪರದಾಟ; ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ಹೊರ ಹಾಕುತ್ತಿರುವ ಗ್ರಾಮಸ್ಥರು

ವಿಜಯಪುರ – ಮಂಗಳೂರು ರೈಲು ಸಂಚಾರ ಜೂನ್ 4ರ ವರೆಗೆ ರದ್ದು

ಮಂಗಳೂರು: ಹಾಸನ ಜಿಲ್ಲೆಯ ಕಡಗರವಳ್ಳಿ ಮತ್ತು ಯಡಕುಮೇರಿ ಮಧ್ಯೆ ರೈಲು ಹಳಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಜಯಪುರ – ಮಂಗಳೂರು (Vijayapura – Mangaluru Train) ನಡುವೆ ಸಂಚರಿಸುವ ರೈಲು ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ರೈಲು ಸಂಚಾರ ರದ್ದುಗೊಳಿಸುವುದರಿಂದ ಪ್ರಯಾಣಿಕರಿಗೆ ಕೆಲ ದಿನಗಳ ಕಾಲ ತೊಂದರೆಯಾಗಲಿದೆ. ಇದರಿಂದ, ಗೋವಾದಲ್ಲಿ ಕುಲೈಮ್-ವಾಸ್ಕೋ ಡ ಗಾಮಾ ಸರಕು ಸಾಗಣೆ ರೈಲು ಸಂಚಾರದ ಮೇಲೂ ಪರಿಣಾಮವಾಗಲಿದೆ.

ಮಂಗಳೂರು – ವಿಜಯಪುರ ನಡುವಣ ದೈನಂದಿನ ರೈಲು ಸಂಚಾರ ಮೇ 21 ರಿಂದ ಜೂನ್ 4 ರವರೆಗೆ ರದ್ದಾಗಲಿದೆ. ಇದು ಗೋವಾದಲ್ಲಿ ಮರ್ಜೋಡ ಮತ್ತು ವಾಸ್ಕೋ ಡ ಗಾಮಾ ವಿಭಾಗದಲ್ಲಿ ಸರಕುಗಳ ಸಾಗಾಟದ ಮೇಲೂ ಪರಿಣಾಮ ಬಿರಲಿದೆ. ಕುಲೇಮ್ – ವಾಸ್ಕೋ ಡ ಗಾಮಾ ರೈಲು ಮೇ 22, 24, 26 ರಂದು ರದ್ದಾಗಲಿದೆ. ಈ ರೈಲು ಸಂಚಾರವನ್ನು ಮೇ 28, 30, ಜೂನ್ 1 ಮತ್ತು 3 ರಂದೂ ರದ್ದಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಅದೇ ರೀತಿ, ಮಂಗಳೂರು-ವಿಜಯಪುರ ರೈಲು (07378) ಮೇ 22ರಿಂದ ಜುಲೈ 5ರವರೆಗೆ ಮಂಗಳೂರು ಬದಲು ಹಾಸನದಿಂದ ಸಂಚರಿಸಲಿದೆ.

ಮಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:36 am, Tue, 23 May 23