ಲಾಡ್ಜ್ನಲ್ಲಿ ನಗ್ನ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ: ರೂಮ್ಗೆ ಬಂದು ಹೋಗಿದ್ದ ಮಹಿಳೆ ಚಲನವಲನ ಸಿಸಿಟಿವಿಯಲ್ಲಿ ಸೆರೆ
ಮಂಗಳೂರಿನ ಪಂಪ್ವೆಲ್ ಬಳಿಯ ಲಾಡ್ಜ್ನಲ್ಲಿ ನಗ್ನ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿರುವ ಮಹಿಳೆಯ ಚಲನವಲನದ ಮೇಲೆ ಅನುಮಾನಗಳ ವ್ಯಕ್ತವಾಗಿವೆ.
ಮಂಗಳೂರು: ಮಂಗಳೂರಿನ (Mangaluru) ಪಂಪ್ವೆಲ್ ಬಳಿಯ ಲಾಡ್ಜ್ನಲ್ಲಿ ನಗ್ನ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಪಂಪ್ವೆಲ್ ಬಳಿಯ ಪದ್ಮಶ್ರೀ ಲಾಡ್ಜ್ನಲ್ಲಿ (Lodge) ಇಂದು(ಡಿಸೆಂಬರ್ 13) ಕಾಸರಗೋಡಿನ ಉಪ್ಪಳ ನಿವಾಸಿ ಅಬ್ದುಲ್ ಕರೀಮ್ ಎನ್ನುವರ ಮೃತ ದೇಹ ಪತ್ತೆಯಾಗಿದ್ದು (Dead Body), ಇದರ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ನವಲಗುಂದದ ಲಾಡ್ಜ್ನಲ್ಲಿ ಪ್ರೇಮಿಗಳು ಆತ್ಮಹತ್ಯೆ, ಪರಿಚಯಸ್ಥರ ಮೂಲಕ ರೂಮ್ ಪಡೆದಿದ್ದ ಜೋಡಿ
ಕಾಸರಗೋಡಿನ ಉಪ್ಪಳ ನಿವಾಸಿ ಅಬ್ದುಲ್ ಕರೀಮ್ ಎನ್ನುವಾತ ನಿನ್ನೆ(ಡಿಸೆಂಬರ್ 12) ಬೆಳಗ್ಗೆ ಪದ್ಮಶ್ರೀ ಲಾಡ್ಜ್ನಲ್ಲಿ ರೂಮ್ ಪಡೆದುಕೊಂಡಿದ್ದರು. ಬಳಿಕ ಮಧ್ಯಾಹ್ನ 1.30 ಕ್ಕೆ ಕರೀಮ್ ಇದ್ದ ರೂಮ್ ಗೆ ಮಹಿಳೆಯೊಬ್ಬಳು ಆಗಮಿಸಿದ್ದಾಳೆ. ನಂತರ ಮಹಿಳೆ ಮಧ್ಯಾಹ್ನ 2.30 ಕ್ಕೆ ಕರೀಮ್ ರೂಮ್ನಿಂದ ವಾಪಸ್ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರೂಮ್ನಲ್ಲಿ ‘Ksheerabala’ ಹೆಸರಿನ ಆಯುರ್ವೇದಿಕ್ ಟ್ಯಾಬ್ಲೆಟ್ಸ್ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಕರೀಂ ಕುಟುಂಬಸ್ಥರು ಕಂಕನಾಡಿ ಪೊಲೀಸ್ ಠಾಣೆಯಲ್ಇ ಅನುಮಾನಸ್ಪದ ಸಾವು ಎಂದು ದೂರು ನೀಡಿದ್ದು, ಪೊಲೀಸದರು ತನಿಖೆ ಕೈಗೊಂಡಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:47 pm, Tue, 13 December 22