ಸಿನಿಮಾಗಳಲ್ಲಿ ನೇಮ ಅನುಕರಣೆ: ದೈವಾರಾಧಕರ ಹೋರಾಟಕ್ಕೆ ವಿಹೆಚ್​ಪಿ ಬಜರಂಗದಳ ಬೆಂಬಲ

ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾದ ನಂತರ ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರವಾಹಿಯ ಪ್ರೋಮೋದಲ್ಲಿ ದೈವದಂತೆ ವೇಷ ಭೂಷಣ ಧರಿಸಿ ನಟನೆ ಮಾಡಿರುವುದು ಕರಾವಳಿ ಭಾಗದ ದೈವಾರಾಧಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಧಾರವಾಹಿ, ಸಿನಿಮಾಗಳಲ್ಲಿ ದೈವರಾಧನೆಗೆ ಅಪಮಾನವಾಗುತ್ತಿರುವ ವಿಚಾರವಾಗಿ ಹೋರಾಟಕ್ಕೆ ಇಳಿದಿದ್ದು, ಈ ಹೋರಾಟಕ್ಕೆ ವಿಹೆಚ್​ಪಿ ಬಜರಂಗದಳ ಬೆಂಬಲ ಸೂಚಿಸಿದೆ.

ಸಿನಿಮಾಗಳಲ್ಲಿ ನೇಮ ಅನುಕರಣೆ: ದೈವಾರಾಧಕರ ಹೋರಾಟಕ್ಕೆ ವಿಹೆಚ್​ಪಿ ಬಜರಂಗದಳ ಬೆಂಬಲ
ಸಿನಿಮಾಗಳಲ್ಲಿ ನೇಮ ಅನುಕರಣೆ: ದೈವಾರಾಧಕರ ಹೋರಾಟಕ್ಕೆ ವಿಹೆಚ್​ಪಿ ಬಜರಂಗದಳ ಬೆಂಬಲ
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: Rakesh Nayak Manchi

Updated on: Feb 17, 2024 | 12:05 PM

ಮಂಗಳೂರು, ಫೆ.17: ಧಾರವಾಹಿ, ಸಿನಿಮಾಗಳಲ್ಲಿ ದೈವರಾಧನೆಗೆ ಅಪಮಾನವಾಗುತ್ತಿರುವ ವಿಚಾರವಾಗಿ ದೈವಾರಾಧಕರು ನಡೆಸುತ್ತಿರುವ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್ ಬಜರಂಗದಳ (VHP Bajrang Dal) ಬೆಂಬಲ ವ್ಯಕ್ತಪಡಿಸಿದೆ. ದೈವರಾಧನೆಗೆ ಅಪಮಾನವಾಗುತ್ತಿರುವ ಸಂಬಂಧ ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ (Dakshina Kannada) ಜಿಲ್ಲಾಧಿಕಾರಿಗೆ ತುಳುನಾಡ ದೈವರಾಧನ ಸಂರಕ್ಷಣಾ ವೇದಿಕೆ ಮನವಿ ಮಾಡಿದೆ.

ಮುಂದೆ ಸಿನಿಮಾ, ಧಾರಾವಾಹಿ, ನಾಟಕಗಳಲ್ಲಿ ದೈವಾರಾಧನೆಯ ಪ್ರದರ್ಶನವಾಗಬಾರದು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪುವೆಲ್ ಎಚ್ಚರಿಕೆ ನೀಡಿದ್ದಾರೆ. ಕರಾವಳಿಯಲ್ಲಿ ದೈವರಾಧನೆಗೆ ಆದರದ್ದೆ ಆದ ಮಹತ್ವವಿದೆ. ಆದರೆ ಚಲನಚಿತ್ರ, ಧಾರವಾಹಿ, ನಾಟಕಗಳಲ್ಲಿ ನಮ್ಮ ನಂಬಿಕೆಗೆ ಧಕ್ಕೆ ತರುವಂತಹ ಕೆಲಸ ಆಗುತ್ತಿದೆ. ಇದನ್ನು ವಿಎಚ್​ಪಿ ಬಜರಂಗದಳ ವಿರೋಧಿಸುತ್ತದೆ. ದೈವರಾಧಕರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದರು.

ಇದನ್ನೂ ಓದಿ: ಇನ್ಮುಂದೆ ದೈವಾರಾಧನೆ ದೃಶ್ಯಗಳ ಮಾಡಲ್ಲ: ನಿರ್ದೇಶಕ ಪ್ರೀತಮ್ ಶೆಟ್ಟಿ

ಚಲನಚಿತ್ರ ಮಾಡುವ ಬಗ್ಗೆ ನಮ್ಮದೇನು ವಿರೋಧವಿಲ್ಲ. ಸಿನಿಮಾ, ಧಾರವಾಹಿಗಳಲ್ಲಿ ದೈವದ ಕಥೆ, ಇತಿಹಾಸ, ಚರಿತ್ರೆ, ನಂಬಿಕೆ ಹೇಳಲಿ. ಆದರೆ ಕೋಲ, ನೇಮೋತ್ಸವದ ಅನುಕರಣೆ ಮಾಡಬಾರದು. ಕಾಲಿಗೆ ಗಗ್ಗರ ಹಾಕೋದಕ್ಕೆ ಒಂದು ಕ್ರಮ ಹಾಗೂ ಅದರದ್ದೇ ಆದ ರೀತಿ ನೀತಿಗಳು ಇವೆ. ವೇಷಭೂಷಣ ಹಾಕುವುದಾದರೂ ಅದರದ್ದೇ ಆದ ಮಹತ್ವವಿದೆ. ಆದರೆ ಅದೆಲ್ಲಾವನ್ನು ಗಾಳಿಗೆ ತೂರಿ ದಾರಿಗೆ ತರಲಾಗುತ್ತಿದೆ ಎಂದರು.

ಬೇರೆ ಧರ್ಮದ ದೇವರ ಫಿಲ್ಮ್ ತೆಗೆಯುವ ಧೈರ್ಯ ಇದೆಯಾ?

ದುಡ್ಡಿಗೆ, ಪ್ರಚಾರಕ್ಕಾಗಿ ದೈವಾರಾಧನೆಯನ್ನು ಚಲನಚಿತ್ರದಲ್ಲಿ ತೋರಿಸುವುದು ಸರಿಯಲ್ಲ. ಚಲನಚಿತ್ರ ನಿರ್ಮಾಪಕರಿಗೆ ತಾಕತ್ತು ಇದ್ದರೆ ಹಿಂದುಗಳು ಅಲ್ಲದ ಬೇರೆ ಸಮುದಾಯದ ಧಾರ್ಮಿಕ ಆಚರಣೆ ಚಿತ್ರೀಕರಣ ಮಾಡಲಿ. ನಾಟಕ, ಫಿಲ್ಮ್ ತೆಗೆದು ತೋರಿಸಲಿ. ಆ ದೈರ್ಯ ಇದೆಯಾ? ನಾವು ಸುಮ್ಮನೆ ಕುಳಿತುಕೊಳ್ಳುತ್ತೇವೆ ಎಂದು ಈ ರೀತಿ ಮಾಡುವುದು ಸರಿಯಲ್ಲ ಎಂದರು.

ಇದನ್ನೂ ಓದಿ: ಧಾರವಾಹಿಯಲ್ಲಿ ದೈವಾರಾಧನೆ ಪ್ರದರ್ಶನ; ಕರಾವಳಿಯಲ್ಲಿ ದೈವಾರಾಧಕರ ಆಕ್ರೋಶ

ದೈವರಾಧಕರ ಹೋರಾಟಕ್ಕೆ ಪೂರ್ತಿ ಬೆಂಬಲವನ್ನು ವಿಹೆಚ್​ಪಿ, ಬಜರಂಗದಳ ನೀಡುತ್ತದೆ. ಜಿಲ್ಲಾಧಿಕಾರಿಗಳು ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡುತ್ತೇವೆ. ಮುಂದಿನ ದಿನದಲ್ಲಿ ಮತ್ತೆ ಕೂತು ಯಾವ ರೀತಿಯ ಹೋರಾಟ ಮಾಡಬಹುದು ಎಂದು ಯೋಚಿಸುತ್ತೇವೆ ಎಂದರು.

ಏನಿದು ಪ್ರಕರಣ?

ನಟ ರಿಷಬ್ ಶೆಟ್ಟಿ ಅಭಿನಯದ ಸೂಪರ್ ಹಿಟ್ ಕಾಂತರ ಸಿನಿಮಾವು ಬಣ್ಣದ ಲೋಕದಲ್ಲಿ ಧೂಳೆಬ್ಬಿಸಿತ್ತು. ದೈವದ ಕುರಿತ ಈ ಸಿನಿಮಾ ಪ್ರಸಾರದ ನಂತರ ಕೋಲ, ನೇಮೋತ್ಸವದ ರೀತಿ ಬಣ್ಣ ಹಚ್ಚಿ ಅನುಕರಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುವ ಗೀಳು ಆರಂಭವಾಯಿತು. ಚಪ್ಪಲಿ ಹಾಕಿಕೊಂಡು ಅಣುಕಿಸಲಾಗಿತ್ತು. ಇದು ದೈವ ಭಕ್ತರ ನಂಬಿಕೆಗೆ ಘಾಸಿ ಉಂಟು ಮಾಡಿದ್ದಲ್ಲದೆ ದೈವಾರಾಧಕರ ಹೋರಾಟಕ್ಕೆ ಕಾರಣವಾಯಿತು.

ಕಾಂತಾರ ಭಾಗ 2 ರ ಕೆಲಸ ಕಾರ್ಯಗಳು ನಡೆಯುತ್ತಿರುವ ನಡುವೆ ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರವಾಹಿಯ ಪ್ರೋಮೋದಲ್ಲಿ ದೈವದಂತೆ ವೇಷ ಭೂಷಣ ಧರಿಸಿ ನಟನೆ ಮಾಡಲಾಗಿತ್ತು. ಹೀಗಾಗಿ ದೈವಾರಾಧಕರು ಗರಂ ಆಗಿದ್ದು ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. ಇತ್ತೀಚೆಗಷ್ಟೇ ದೈವಗಳ ಹೆಸರಲ್ಲಿ ದಂಧೆಗೆ ಇಳಿದವರ ವಿರುದ್ಧ ದೈವಾರಾಧಕರು ಕೊರಗಜ್ಜನ ಮೊರೆ ಹೋಗಿದ್ದ ಘಟನೆ ನಡೆದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ