ಮಾಜಿ ಶಾಸಕ ದಿ.ಇದಿನಬ್ಬ ಕುಟುಂಬಕ್ಕೆ ಐಸಿಸ್ ನಂಟು ಪ್ರಕರಣ; ದಂತ ವೈದ್ಯೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಬಂಧನ

ದೀಪ್ತಿ ಮಾರ್ಲ ಮಾಜಿ ಶಾಸಕ ದಿ.ಇದಿನಬ್ಬ ಮಗ ಬಿ‌.ಎಂ.ಭಾಷನ ಅವರ ಸೊಸೆ. ಇದಿನಬ್ಬ ಮೊಮ್ಮಗ ಅನಾಸ್ ಅಬ್ದುಲ್ ರೆಹಮಾನ್ ಮದುವೆಯಾಗಿ ದೀಪ್ತಿ ಮಾರ್ಲ ಇಸ್ಲಾಂಗೆ ಮತಾತಂತರಗೊಂಡಿದ್ದರು. ನಂತರ ಕ್ರೋನಿಕಲ್ ಪೌಂಡೇಶನ್ ಎಂಬ ಇನ್ಸ್​ಸ್ಟಾಗ್ರಾಮ್​ ಪೇಜ್ ಮೂಲಕ ದೀಪ್ತಿ ಐಸಿಸ್​ ಕೆಲಸ ಮಾಡಲು ಶುರು ಮಾಡಿದ್ದಳು.

ಮಾಜಿ ಶಾಸಕ ದಿ.ಇದಿನಬ್ಬ ಕುಟುಂಬಕ್ಕೆ ಐಸಿಸ್ ನಂಟು ಪ್ರಕರಣ; ದಂತ ವೈದ್ಯೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಬಂಧನ
ಪ್ರಾತಿನಿಧಿಕ ಚಿತ್ರ
Updated By: preethi shettigar

Updated on: Jan 05, 2022 | 2:36 PM

ಮಂಗಳೂರು: ಮಾಜಿ ಶಾಸಕ ದಿ.ಇದಿನಬ್ಬ ಕುಟುಂಬಕ್ಕೆ ಐಸಿಸ್ (ISIS) ನಂಟು ಪ್ರಕರಣಕ್ಕೆ ಸಂಬಂಧಪಟ್ಟಂತೆ ದಂತ ವೈದ್ಯೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂರನ್ನು ಬಂಧಿಸಲಾಗಿದೆ. ಎರಡು ದಿನಗಳ ಹಿಂದೆ ಉಳ್ಳಾಲದಲ್ಲಿ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಎಂಬಾಕೆಯನ್ನು ಎನ್​ಐಎ (NIA) ಬಂಧಿಸಿ, ವಿಚಾರಣೆ ನಡೆಸಿದೆ. ಈ ವೇಳೆ ಹನಿಟ್ರ್ಯಾಪ್ ಮೂಲಕ ಯುವಕರನ್ನು ಮತಾಂತರಗೊಳಿಸಿ ಐಸಿಸ್‌ಗೆ ಸೇರಿಸುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

ದೀಪ್ತಿ ಮಾರ್ಲ ಮಾಜಿ ಶಾಸಕ ದಿ.ಇದಿನಬ್ಬ ಮಗ ಬಿ‌.ಎಂ.ಭಾಷನ ಅವರ ಸೊಸೆ. ಇದಿನಬ್ಬ ಮೊಮ್ಮಗ ಅನಾಸ್ ಅಬ್ದುಲ್ ರೆಹಮಾನ್ ಮದುವೆಯಾಗಿ ದೀಪ್ತಿ ಮಾರ್ಲ ಇಸ್ಲಾಂಗೆ ಮತಾತಂತರಗೊಂಡಿದ್ದರು. ನಂತರ ಕ್ರೋನಿಕಲ್ ಪೌಂಡೇಶನ್ ಎಂಬ ಇನ್ಸ್​ಸ್ಟಾಗ್ರಾಮ್​ ಪೇಜ್ ಮೂಲಕ ದೀಪ್ತಿ ಐಸಿಸ್​ ಕೆಲಸ ಮಾಡಲು ಶುರು ಮಾಡಿದ್ದಳು.

ನಂತರ ಪತಿ ಅನಾಸ್ ಅಬ್ದುಲ್ ರೆಹಮಾನ್, ಸಂಬಂಧಿ ಅಮರ್ ಅಬ್ದುಲ್ ರೆಹಮಾನ್ ಸೂಚನೆಗಳಂತೆ ಐಸಿಸ್ ಪರವಾಗಿ ಕೆಲಸ‌ ಮಾಡುತ್ತಿದ್ದಳು. ಸುಮಾರು 15 ನಕಲಿ‌ ಸೋಷಿಯಲ್ ಮೀಡಿಯಾ ಖಾತೆಗಳನ್ನು ದೀಪ್ತಿ ಹೊಂಡಿದ್ದಾಳೆ.

ಈ ಹಿಂದೆ ಎನ್ಐಎನಿಂದ ಬಂಧಿತನಾಗಿದ್ದ ಮಾದೇಶ ಪೆರುಮಾಳ್​ನ್ನು ಮತಾಂತರ ಮಾಡಿ ಐಸಿಸ್​ಗೆ ಕೆಲಸ ಮಾಡುವಂತೆ ದೀಪ್ತಿ ತಿಳಿಸಿದ್ದರು. ಮಾದೇಶ್ ಪೆರುಮಾಳ್ ಹನಿಟ್ರಾಪ್ ಮಾಡಲು ದೀಪ್ತಿ‌ ಮಾರ್ಲ ‌10 ಲಕ್ಷ ಖರ್ಚು ಮಾಡಿದ್ದರು. ಇದುವರೆಗೂ ಸುಮಾರು 10 ಯುವಕರನ್ನು ಮತಾಂತರಗೊಳಿಸಿರುವ ದೀಪ್ತಿ ಐಸಿಸ್​ಗೆ ಸೇರಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಎನ್ಐಎ ಉನ್ನತ ಮೂಲಗಳ ಮಾಹಿತಿ ಪ್ರಕಾರ ಸದ್ಯ ದೀಪ್ತಿ ಮಾರ್ಲಳನ್ನು ದೆಹಲಿಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ:
ಹಿಂದುತ್ವವನ್ನು ಐಸಿಸ್​ ಉಗ್ರಸಂಘಟನೆಗೆ ಹೋಲಿಸಿದ್ದ ಸಲ್ಮಾನ್​ ಖುರ್ಷಿದ್​ ವಿರುದ್ಧ ಎಫ್​ಐಆರ್​ ದಾಖಲಿಸುವ ಕೋರ್ಟ್​ ಆದೇಶ

ಮಾಜಿ ಶಾಸಕನ ಕುಟುಂಬಕ್ಕೆ ಉಗ್ರರ ನಂಟು? ಬಿಎಂ ಇದಿನಬ್ಬ ಮಗನ ಮನೆ ಮೇಲೆ ಎನ್ಐಎ ದಾಳಿ

Published On - 2:23 pm, Wed, 5 January 22