ಮಂಗಳೂರು: ಪಿಲಿಕುಳ ಉದ್ಯಾನವನದಲ್ಲಿ 9 ವರ್ಷದ ಒಲಿವರ್ ಹೆಸರಿನ ಹುಲಿ ಏಕಾಏಕಿ ಸಾವು

ಹುಲಿಯ ಅಂಗಾಂಗ ಮಾದರಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ. ಬೆಂಗಳೂರು, ಭೋಪಾಲ್ ಪ್ರಯೋಗಾಲಯಕ್ಕೆ ಹುಲಿ ಅಂಗಾಂಗ ಮಾದರಿ ರವಾನೆ ಮಾಡಲಾಗಿದೆ

ಮಂಗಳೂರು: ಪಿಲಿಕುಳ ಉದ್ಯಾನವನದಲ್ಲಿ 9 ವರ್ಷದ ಒಲಿವರ್ ಹೆಸರಿನ ಹುಲಿ ಏಕಾಏಕಿ ಸಾವು
ಒಲಿವರ್ ಹೆಸರಿನ ಹುಲಿ
Follow us
TV9 Web
| Updated By: ganapathi bhat

Updated on:Jan 04, 2022 | 4:19 PM

ಮಂಗಳೂರು: ಇಲ್ಲಿನ ಪಿಲಿಕುಳದ ಉದ್ಯಾನವನದಲ್ಲಿ ಹುಲಿ ಮಂಗಳವಾರ ಸಾವನ್ನಪ್ಪಿದೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಜೈವಿಕ ಉದ್ಯಾನವನದಲ್ಲಿ ಇದ್ದ 9 ವರ್ಷದ ಒಲಿವರ್ ಹೆಸರಿನ ಹುಲಿ ಏಕಾಏಕಿ ಸಾವನ್ನಪ್ಪಿದೆ. ಇಂದು ಮುಂಜಾನೆ ದಿಢೀರ್ ಕುಸಿದುಬಿದ್ದು ಹುಲಿ ಮರಣಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆರೋಗ್ಯವಂತ ಹುಲಿ ದಿಢೀರ್ ಸಾವಿನಿಂದ ಹಲವು ಸಂಶಯ ಉಂಟಾಗಿದೆ.

ಹುಲಿಯ ಅಂಗಾಂಗ ಮಾದರಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ. ಬೆಂಗಳೂರು, ಭೋಪಾಲ್ ಪ್ರಯೋಗಾಲಯಕ್ಕೆ ಹುಲಿ ಅಂಗಾಂಗ ಮಾದರಿ ರವಾನೆ ಮಾಡಲಾಗಿದೆ. ಪ್ರತಿ ಬ್ಯಾರಕ್‌ಗೆ ರೋಗ ನಿರೋಧಕ ದ್ರಾವಣ ಸಿಂಪಡಣೆ ಮಾಡಲಾಗಿದೆ.

ತುಮಕೂರು: ಅಪರೂಪದ ಕಾಡುಪಾಪ ಪತ್ತೆ ತುಮಕೂರಿನಲ್ಲಿ ಅಪರೂಪದ ಕಾಡುಪಾಪ (Slender Loris) ಸೋಮವಾರ ಪತ್ತೆಯಾಗಿತ್ತು. ನಗರದ ರಂಗಾಪುರದ ಕಾರ್ಖಾನೆ ಕ್ವಾರ್ಟರ್ಸ್ ಬಳಿ ಈ ಅಪರೂಪದ ಕಾಡುಪಾಪ ಪತ್ತೆಯಾಗಿತ್ತು. ತಕ್ಷಣ ಅರಣ್ಯ ಸಿಬ್ಬಂದಿ ಕಾಡುಪಾಪವನ್ನು ದೇವರಾಯನದುರ್ಗದ ಅರಣ್ಯ ಪ್ರದೇಶಕ್ಕೆ ಬಿಟ್ಟುಬಂದಿದ್ದಾರೆ. ತುಮಕೂರಿನ ರಂಗಾಪುರದ ಕಾರ್ಖಾನೆ ಕ್ವಾರ್ಟರ್ಸ್ ಬಳಿ ಮರದ ಮೇಲೆ ಕಾಡುಪಾಪ ಕುಳಿತಿತ್ತು. ಉರಗ ತಜ್ಞ ದಿಲೀಪ್ ಸ್ಥಳಕ್ಕೆ ಬಂದಿ ಪ್ರಾಣಿಯನ್ನು ರಕ್ಷಣೆ ಮಾಡಿದ್ದರು.

ಇದನ್ನೂ ಓದಿ: ಕುದುರೆಮುಖ ಅರಣ್ಯದ ಜಾಂಬಲೆ ಗ್ರಾಮಕ್ಕೆ ಸಿಕ್ತು ಡಿಜಿಟಲ್ ಲೈಫ್ ಶ್ರೀರಕ್ಷೆ, ಇದು ಜಿಯೋ ಕೊಡುಗೆ!

ಇದನ್ನೂ ಓದಿ: ತುಮಕೂರು ನಗರಕ್ಕೆ ನಡೆದುಬಂದ ಕಾಡುಪಾಪ! ದೇವರಾಯನದುರ್ಗ ಅರಣ್ಯಕ್ಕೆ ಬಿಟ್ಟುಬಂದ ಅರಣ್ಯ ಸಿಬ್ಬಂದಿ

Published On - 3:36 pm, Tue, 4 January 22