ಹಿಂದುತ್ವವನ್ನು ಐಸಿಸ್​ ಉಗ್ರಸಂಘಟನೆಗೆ ಹೋಲಿಸಿದ್ದ ಸಲ್ಮಾನ್​ ಖುರ್ಷಿದ್​ ವಿರುದ್ಧ ಎಫ್​ಐಆರ್​ ದಾಖಲಿಸುವ ಕೋರ್ಟ್​ ಆದೇಶ

ಹಿಂದುತ್ವವನ್ನು ಐಸಿಸ್​ ಉಗ್ರಸಂಘಟನೆಗೆ ಹೋಲಿಸಿದ್ದ ಸಲ್ಮಾನ್​ ಖುರ್ಷಿದ್​ ವಿರುದ್ಧ ಎಫ್​ಐಆರ್​ ದಾಖಲಿಸುವ ಕೋರ್ಟ್​ ಆದೇಶ
ಸಲ್ಮಾನ್​ ಖುರ್ಷಿದ್​

ಇದೀಗ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್​ ಶಂತನು ತ್ಯಾಗಿ ಅವರು ಸಲ್ಮಾನ್​ ಖುರ್ಷಿದ್ ವಿರುದ್ಧ ಎಫ್​ಐಆರ್​ ದಾಖಲಿಸಲು ಭಕ್ಷಿ ಕಾ ತಲಾಬ್​ ಪೊಲೀಸ್  ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

TV9kannada Web Team

| Edited By: Lakshmi Hegde

Dec 23, 2021 | 9:11 AM

ಸನಾತನ ಹಿಂದೂ ಧರ್ಮವನ್ನು ಐಸಿಸ್​ ಮತ್ತು ಬೋಕೋ ಹರಾಮ್​ ಉಗ್ರ ಸಂಘಟನೆಗಳಿಗೆ ಹೋಲಿಸಿದ್ದ ಕಾಂಗ್ರೆಸ್​ ನಾಯಕ ಸಲ್ಮಾನ್​ ಖುರ್ಷಿದ್ (Salman Khurshid)​  ಅವರ ವಿರುದ್ಧ ಎಫ್​ಐಆರ್​ ದಾಖಲಿಸಲು ನ್ಯಾಯಾಲವೊಂದು ಆದೇಶಿಸಿದೆ. ಸಲ್ಮಾನ್ ಖುರ್ಷಿದ್​ ಬರೆದ ಸ ನ್​ರೈಸ್​ ಓವರ್​ ಅಯೋಧ್ಯಾ ಪುಸ್ತಕದ ಸ್ಯಾಫ್ರನ್​ ಸ್ಕೈ ಎಂಬ ಅಧ್ಯಾಯದಲ್ಲಿ, ಪೇಜ್​ ನಂಬರ್​ 113ರಲ್ಲಿ ಖುರ್ಷಿದ್​ ಹಿಂದುತ್ವ(Hindutva)ದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಹಿಂದುತ್ವವನ್ನು ಉಗ್ರ ಸಂಘಟನೆಗಳಾದ ಐಸಿಸ್​ ಮತ್ತು ಬೋಕೊ ಹರಾಮ್​ಗೆ ಹೋಲಿಸಿದ್ದಾರೆ. ಹಿಂದಿನ ಋಷಿ-ಮುನಿಗಳು ಹೇಳಿದ್ದ ಸನಾತನ ಧರ್ಮ ಮತ್ತು ಶಾಸ್ತ್ರೀಯ ಹಿಂದೂವಾದವನ್ನು ಈಗ ಪಕ್ಕಕ್ಕೆ ತಳ್ಳಲಾಗಿದೆ. ಹಿಂದುತ್ವದ ಪುರಾತನ ಕಲ್ಪನೆ ಈಗ ಉಳಿದಿಲ್ಲ. ಈಗೇನಿದ್ದರೂ ರಾಜಕೀಯ ದೃಷ್ಟಿಯಿಂದಲೇ ನೋಡಲಾಗುತ್ತಿದ್ದು, ಹಿಂದುತ್ವವೆಂಬುದು ಇಸ್ಲಾಂನ ಜಿಹಾದಿ ಗುಂಪುಗಳಾದ ಐಸಿಸ್​​ ಮತ್ತು ಬೋಕೋ ಹರಾಮ್​ಗೆ ಸಮಾನವಾಗಿದೆ ಎಂದು ಬರೆದಿದ್ದಾರೆ.  ಇದೀಗ ದೊಡ್ಡ ವಿವಾದ ಸೃಷ್ಟಿಸಿದ್ದು, ಅವರ ವಿರುದ್ಧ ವಕೀಲರೊಬ್ಬರು ದೂರು ಕೂಡ ನೀಡಿದ್ದರು. 

ಹಿಂದುತ್ವಕ್ಕೆ ಅವಮಾನ ಮಾಡಿರುವ ಈ ಪುಸ್ತಕವನ್ನು ನಿಷೇಧಿಸಬೇಕು ಎಂದು ದೆಹಲಿ ಹೈಕೋರ್ಟ್​ಗಳೂ ಕೆಲವರು ಅರ್ಜಿ ಸಲ್ಲಿಸಿದ್ದರು. ಆದರೆ ದೆಹಲಿ ಹೈಕೋರ್ಟ್​ ಆ ಅರ್ಜಿಯನ್ನು ಪುರಸ್ಕರಿಸಲಿಲ್ಲ. ಬದಲಿಗೆ ಪುಸ್ತಕ ನಿಷೇಧಿಸಬೇಕು ಎಂದು ಇಲ್ಲಿ ಅರ್ಜಿ ಸಲ್ಲಿಸುವ ಬದಲು, ನೀವ್ಯಾಕೆ ಜನರಿಗೇ ಹೇಳಬಾರದು?ಈ ಪುಸ್ತಕವನ್ನು ಖರೀದಿಸಬೇಡಿ, ಓದಬೇಡಿ ಎಂದು ಜನರಿಗೇ ನೇರವಾಗಿ ಹೇಳಿ. ಈ ಪುಸ್ತಕದಲ್ಲಿ ಕೆಟ್ಟದಾಗಿ ಬರೆಯಲಾಗಿದೆ. ಹಾಗಾಗಿ ಓದಬೇಡಿ ಎಂದು ಪ್ರತಿಯೊಬ್ಬರಿಗೂ ಹೇಳಿ. ಇದರಲ್ಲಿ ಏನಾದರೂ ನೋವುಂಟಾಗುವ ವಿಷಯಗಳಿದ್ದರೆ, ಅದನ್ನು ಓದುವುದನ್ನು ಬಿಟ್ಟು, ಬೇರೆ ಏನಾದರೂ ಓದುವುದು ಒಳ್ಳೆಯದು. ಆದರೆ ನಾವಂತೂ ಪುಸ್ತಕವನ್ನು ನಿಷೇಧಿಸಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್ ಅರ್ಜಿದಾರರಿಗೆ ಹೇಳಿದೆ.

ಇದೀಗ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್​ ಶಂತನು ತ್ಯಾಗಿ ಅವರು ಸಲ್ಮಾನ್​ ಖುರ್ಷಿದ್ ವಿರುದ್ಧ ಎಫ್​ಐಆರ್​ ದಾಖಲಿಸಲು ಭಕ್ಷಿ ಕಾ ತಲಾಬ್​ ಪೊಲೀಸ್  ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಸೂಕ್ತ ಪ್ರಕರಣಗಳಡಿ ಕೇಸ್​ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಲು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಇನ್ನು ಮೂರು ದಿನಗಳಲ್ಲಿ ಅವರ ವಿರುದ್ಧ ಎಫ್​ಐಆರ್​ ದಾಖಲು ಮಾಡಿ, ಅದರ ಒಂದು ಪ್ರತಿಯನ್ನು ಕೋರ್ಟ್​ಗೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಸಲ್ಮಾನ್​ ಖುರ್ಷಿದ್​ ಹಿಂದುತ್ವಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ, ಶುಭಾಂಗಿ ತಿವಾರಿ ಎಂಬುವರು ಕ್ರಿಮಿನಲ್​ ಪ್ರಕ್ರಿಯಾ ಸಂಹಿತೆಯ ಸೆಕ್ಷನ್​ 156(3) ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖುರ್ಷಿದ್ ಪುಸ್ತಕದಲ್ಲಿ ವಿವಾದಾತ್ಮಕ ಅಂಶ; ಪುಸ್ತಕ ನಿಷೇಧಿಸುವಂತೆ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

Follow us on

Related Stories

Most Read Stories

Click on your DTH Provider to Add TV9 Kannada