AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸಿದವನ ವಿರುದ್ಧ ಆಕ್ರೋಶ, ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವು

ಜೈಲಿನಲ್ಲಿ‌ ದೇವದಾಸ್ ದೇಸಾಯಿಗೆ ಶಿಕ್ಷೆ ಆಗಬೇಕು. ಒಂದು ವೇಳೆ ಜೈಲಿನಿಂದ ಹೊರಬಂದರೆ ಕೈಕಾಲು ಕಡಿಯುತ್ತೇನೆ. ನಿಜವಾದ ಕ್ರೈಸ್ಥರಿಗೆ ಇವನ ಕೃತ್ಯದಿಂದ ಬೇಸರವಾಗಿದೆ. ಇದೆಲ್ಲ ನ್ಯೂಲೈಫ್ ಪಂಥದವರ ಅವಾಂತರ ಎಂದು ರೋಶನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Crime News: ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸಿದವನ ವಿರುದ್ಧ ಆಕ್ರೋಶ, ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವು
ಪ್ರಾತಿನಿಧಿಕ ಚಿತ್ರ
TV9 Web
| Updated By: ganapathi bhat|

Updated on: Dec 31, 2021 | 6:46 PM

Share

ಮಂಗಳೂರು: ಕೊರಗಜ್ಜನ ಕ್ಷೇತ್ರ ಸಹಿತ ಹಲವು ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸಿದ ಆರೋಪಿ ಬಂಧನ ವಿಚಾರವಾಗಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ದೈವ ದೇವಸ್ಥಾನ, ಮಸೀದಿಗಳ ಕಾಣಿಕೆ ಹುಂಡಿಯಲ್ಲಿ ವಿಕೃತಿ ಮೆರೆದ ಆರೋಪಿಯ ಭಾವಚಿತ್ರ ಹಾಕಿ ಶ್ರದ್ಧಾಂಜಲಿ ಬ್ಯಾನರ್ ಹಾಕಲಾಗಿದೆ. ದೇವದಾಸ್ ದೇಸಾಯಿಗೆ ಮಾಡೂರು ಬಜರಂಗದಳ ಶಾಖೆಯವರು ಶ್ರದ್ಧಾಂಜಲಿ ಬ್ಯಾನರ್ ಹಾಕಿದ್ದಾರೆ. ಮಂಗಳೂರು ಹೊರವಲಯದ ಬೀರಿ ಜಂಕ್ಷನ್​ನಲ್ಲಿ ಬ್ಯಾನರ್ ಅಳವಡಿಕೆ ಮಾಡಲಾಗಿದೆ.

ಮಂಗಳೂರು ನಗರದ 18 ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿದ್ದ ಆರೋಪಿ ದೇವದಾಸ್ ಬಂಧನವಾಗಿತ್ತು. ದೇವದಾಸ್ ದೇಸಾಯಿ ಹೆಸರನ್ನು ದೇವಿಡ್ ದೇಸಾಯಿ ಎಂದು ಬ್ಯಾನರ್​ನಲ್ಲಿ ಭಜರಂಗದಳ ಹಾಕಿದೆ. ಕ್ರಿಶ್ಚಿಯನ್ ಧರ್ಮದ ಅನುಯಾಯಿಯಾಗಿದ್ದ ದೇವದಾಸ್ ಕೃತ್ಯ ಎಸಗಿದ್ದ. ಪ್ರಕರಣ ಸಂಬಂಧ ಆರೋಪಿಯನ್ನು ಮೊನ್ನೆ ಬಂಧಿಸಲಾಗಿತ್ತು.

ಅಷ್ಟೇ ಅಲ್ಲದೆ, ಆರೋಪಿ ಜೈಲಿನಿಂದ ಹೊರಬಂದರೆ ಕೈಕಾಲು ಕಡಿಯುತ್ತೇನೆ ಎಂದು ವ್ಯಕ್ತಿಯೊಬ್ಬ ಎಚ್ಚರಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇವದಾಸ್ ವಿರುದ್ಧ ರೋಶನ್ ಡಿಸೋಜ ಎಂಬವರ ಆಕ್ರೋಶ ವ್ಯಕ್ತವಾಗಿದೆ. ಜೈಲಿನಲ್ಲಿ‌ ದೇವದಾಸ್ ದೇಸಾಯಿಗೆ ಶಿಕ್ಷೆ ಆಗಬೇಕು. ಒಂದು ವೇಳೆ ಜೈಲಿನಿಂದ ಹೊರಬಂದರೆ ಕೈಕಾಲು ಕಡಿಯುತ್ತೇನೆ. ನಿಜವಾದ ಕ್ರೈಸ್ಥರಿಗೆ ಇವನ ಕೃತ್ಯದಿಂದ ಬೇಸರವಾಗಿದೆ. ಇದೆಲ್ಲ ನ್ಯೂಲೈಫ್ ಪಂಥದವರ ಅವಾಂತರ ಎಂದು ರೋಶನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರ ಆರೋಪ: ಹಿಂದುಳಿದ ವರ್ಗಗಳ ಕಚೇರಿ ಮೇಲೆ ಎಸಿಬಿ ದಾಳಿ ಹಿಂದುಳಿದ ವರ್ಗಗಳ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ‌ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ. ಸುಮಾರು 3 ಕೋಟಿ ರೂಪಾಯಿಯಷ್ಟು ಅವ್ಯವಹಾರ ಆರೋಪ ಹಿನ್ನೆಲೆ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳಿಂದ ಕಡತಗಳ ಪರಿಶೀಲನೆ ನಡೆಸಲಾಗಿದೆ. ಚಿಕ್ಕಬಳ್ಳಾಪುರ- ಕೋಲಾರ ಎಸಿಬಿ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ. ವಸತಿ ನಿಲಯಗಳಿಗೆ ವಸ್ತುಗಳ ಖರೀದಿಯಲ್ಲಿ ಅವ್ಯವಹಾರ, ಟೆಂಡರ್ ಕರೆಯದೆ ವಸ್ತುಗಳನ್ನು ಖರೀದಿಸಿರುವ ಆರೋಪ ಕೇಳಿಬಂದಿದೆ.

ಭ್ರಷ್ಟಾಚಾರ ಆರೋಪ: ಸಿಬಿಐ ಅಕಿಲ್ ಅಹ್ಮದ್ ಸಹಿತ ಐವರ ಬಂಧನ ಬೆಂಗಳೂರಿನ NHAI ಪ್ರಾದೇಶಿಕ ಅಧಿಕಾರಿ ಅಕಿಲ್ ಅಹ್ಮದ್ ಬಂಧಿಸಿದ ಘಟನೆ ನಡೆದಿದೆ. ಭ್ರಷ್ಟಾಚಾರ ಆರೋಪ ಹಿನ್ನೆಲೆ ಸಿಬಿಐ ಅಕಿಲ್ ಅಹ್ಮದ್ ಸಹಿತ ಐವರನ್ನು ಬಂಧಿಸಿದೆ. ಖಾಸಗಿ ಕಂಪನಿ ಜನರಲ್ ಮ್ಯಾನೇಜರ್ ರತ್ನಾಕರನ್ ಸಜ್ಜಿಲಾಲ್, ಕಂಪನಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ದೇವೇಂದ್ರ ಜೈನ್, ಸುನಿಲ್ ಕುಮಾರ್ ವರ್ಮಾ, ಅನುಜಾ ಗುಪ್ತಾ ಬಂಧನ ಮಾಡಲಾಗಿದೆ.

ಕಲಬುರಗಿ: ಹಳಿ ದಾಟುವ ವೇಳೆ ರೈಲು ಡಿಕ್ಕಿಯಾಗಿ ವಿದ್ಯಾರ್ಥಿ ಸಾವು ಹಳಿ ದಾಟುವ ವೇಳೆ ರೈಲು ಡಿಕ್ಕಿಯಾಗಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜು ಬಳಿ ಘಟನೆ ನಡೆದಿದೆ. ಕೆಹೆಚ್​ಬಿ ಕಾಲೋನಿಯ ಮಲ್ಲಿಕಾರ್ಜುನ ಮಂಟಾಳೆ (23) ಎಂಬವರು ಸಾವನ್ನಪ್ಪಿದ್ದಾರೆ. ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಗಿದೆ.

ತುಮಕೂರು: ವ್ಯಕ್ತಿಯೊಬ್ಬ ಪಾರ್ಕ್​ನಲ್ಲಿ ನೇಣಿಗೆ ಶರಣು ವ್ಯಕ್ತಿಯೊಬ್ಬ ಪಾರ್ಕ್​ನಲ್ಲಿ ನೇಣಿಗೆ ಶರಣಾದ ಘಟನೆ ತುಮಕೂರಿನ ಶಿರಾ ಗೇಟ್​ನ ಕನಕ ವೃತ್ತದ ಪಾರ್ಕ್​ನಲ್ಲಿ ನಡೆದಿದೆ. ಸುಮಾರು 30 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು ಮೃತನ ಗುರುತು ಪತ್ತೆಯಾಗಿಲ್ಲ. ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮೈಸೂರು: ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ರಕ್ಷಿತಾ (19) ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಎಸ್​ಸಿ ವಿದ್ಯಾರ್ಥಿನಿಯಾಗಿದ್ದ ರಕ್ಷಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಳು ವರ್ಷಗಳ ಹಿಂದೆ ರಕ್ಷಿತಾ ತಾಯಿ ಮೃತಪಟ್ಟಿದ್ದರು. ಆ ಕಾರಣದಿಂದ ರಕ್ಷಿತಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಹೊಸಕೋಟೆ: ಮಧ್ಯರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಬೈಕ್​ನಲ್ಲಿ ಬಂದವರಿಂದ ಮನೆಯ ಕಾಂಪೋಂಡ್ ಒಳಗೆ‌ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಲಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದಲ್ಲಿ ನಡೆದಿದೆ. ಕಳ್ಳ ಬೈಕ್ ಕದಿಯುವ ದೃಶ್ಯ ಮನೆಯ ಸಿಸಿ ಟಿವಿಯಲ್ಲಿ ಸೆರೆ ಆಗಿದೆ. ಬಾಡಿಗೆ ಮನೆಯಲ್ಲಿ ವಾಸವಿದ್ದ ಉತ್ತರ ಭಾರತ ಮೂಲದ ವ್ಯಕ್ತಿಯ ಬೈಕ್ ಕಳ್ಳತನ ಮಾಡಲಾಗಿದೆ. ಒಂದು‌ ಬೈಕ್​ನಲ್ಲಿ ಇಬ್ಬರು ಬಂದು ಮತ್ತೊಂದು ಬೈಕ್ ಕದ್ದು ಖದೀಮರು ಪರಾರಿ ಆಗಿದ್ದಾರೆ. ಇತ್ತೀಚೆಗೆ ಬೈಕ್‌ ಕಳ್ಳತನ‌ ಪ್ರಕರಣ ಹೆಚ್ಚಾಗಿದೆ ಅಂತ ಸ್ಥಳಿಯರ ಆಕ್ರೋಶ ವ್ಯಕ್ತವಾಗಿದೆ. ಬೈಕ್ ಕಳ್ಳತನ ಕುರಿತು ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: 20 ಲಕ್ಷ ಲಂಚ ಸ್ವೀಕಾರ ಆರೋಪ, ಸಿಬಿಐ ದಾಳಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರಿನ ಅಧಿಕಾರಿ ಸಹಿತ ನಾಲ್ವರ ಬಂಧನ

ಇದನ್ನೂ ಓದಿ: Viral Video: ವಿಮಾನದಲ್ಲಿ ಮಾಸ್ಕ್​ ತೆಗೆದು ಆಹಾರ ಸೇವಿಸಿದ ವೃದ್ಧನಿಗೆ ಕಪಾಳಮೋಕ್ಷ ಮಾಡಿದ ಮಹಿಳೆಯ ಬಂಧನ