ಮಂಗಳೂರು, ಆಗಸ್ಟ್ 05: ಶಿರಾಡಿ ಘಾಟ್ನ (Shiradi Ghat) ಎಡಕುಮೇರಿ ಕಡಗರವಳ್ಳಿ ಮಧ್ಯೆ ಭೂಕುಸಿತದಿಂದಾಗಿ ಬೆಂಗಳೂರು-ಮಂಗಳೂರು ರೈಲು (Bengaluru-Mangaluru Train) ಸಂಚಾರ ಕಳೆದ 14 ದಿನಗಳಿಂದ ರದ್ದಾಗಿತ್ತು. ಈ ಮಾರ್ಗದ ರೈಲು ಸಂಚಾರ ಪುನಃ ಆರಂಭವಾಗಲಿದ್ದು, ಕೊಂಕಣ ರೈಲ್ವೆ ವಲಯ ಶೀಘ್ರದಲ್ಲೇ ಮಾಧ್ಯಮ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ. ಈ ನಡುವೆ ಮಂಗಳೂರು-ಬೆಂಗಳೂರು ಯಶವಂತಪುರ ಎಕ್ಸಪ್ರೆಸ್ (Mangaluru-Bengaluru Yesvantpur Express) ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ.
ವಾರಕ್ಕೆ ಮೂರು ಬಾರಿ ಮಂಗಳೂರು ಜಂಕ್ಷನ್ನಿಂದ ಬೆಂಗಳೂರಿನ ಯಶವಂತಪುರದವರೆಗೆ ಸಂಚರಿಸುವ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16576) ರೈಲಿನ ವೇಳಾಪಟ್ಟಿಯನ್ನು ನವೆಂಬರ 1 ರಿಂದ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಪರಿಷ್ಕೃತ ಸಮಯದ ಪ್ರಕಾರ ಈ ರೈಲು (16576) ಮಂಗಳೂರು ಜಂಕ್ಷನ್ನಿಂದ ಬೆಳಿಗ್ಗೆ 11.30 ರ ಬದಲು ಬೆಳಿಗ್ಗೆ 7 ಗಂಟೆಗೆ ಹೊರಟು, ಅದೇ ದಿನ ರಾತ್ರಿ 8:45 ರ ಬದಲು ಸಂಜೆ 4.30ಕ್ಕೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.
ಇದನ್ನೂ ಓದಿ: ಬೆಳಗಾವಿ-ಮೀರಜ್ ವಿಶೇಷ ರೈಲು ಸೇವೆ ಈ ದಿನಾಂಕದವರೆಗೆ ವಿಸ್ತರಣೆ
ರೈಲು ಸಂಖ್ಯೆ 61782 ಬಂಗಾರಪೇಟೆ-ಮಾರಿಕುಪ್ಪಂ ಮೆಮು ಸ್ಪೆಷಲ್ ರೈಲು ಸಂಖ್ಯೆ 01772 ಮಾರಿಕುಪ್ಪಂ-ಕೆಎಸ್‌ಆರ್ ಬೆಂಗಳೂರು ಮೆಮು ಸ್ಪೆಷಲ್ ಮತ್ತು ರೈಲು ಸಂಖ್ಯೆ 08396 ಕೆಎಸ್‌ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು ಸ್ಪೆಷಲ್ ರೈಲುಗಳ ವೇಳಾಪಟ್ಟಿಯನ್ನು ಅಗಸ್ಟ್ 8 ರಿಂದ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ https://swr.indianrailways.gov.in/viewdetail.jsp?lang-o&dcd-7714&id=0,4,268 ಮೇಲೆ ಕ್ಲಿಕ್ ಮಾಡಿ. ಅಥವಾ ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಿ ಅಥವಾ ವೆಬ್ಸೈಟ್ಗೆ (www.enquiry.Indianrail.gov.in) ಭೇಟಿ ನೀಡಿ.
ನೈಋತ್ಯ ರೈಲ್ವೆಯ ಪ್ರಯಾಣಿಕರ ಆದಾಯವು 2024 ರ ಜುಲೈ ತಿಂಗಳಲ್ಲಿ 286.28 ಕೋಟಿ ರೂ.ಗಳಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 7.51% ಹೆಚ್ಚಾಗಿದೆ
ನೈಋತ್ಯ ರೈಲ್ವೆಯ ಪಾರ್ಸೆಲ್ ಆದಾಯವು 2024 ರ ಜುಲೈ ತಿಂಗಳಲ್ಲಿ 14.19 ಕೋಟಿ ರೂ.ಗೆ ತಲುಪಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ 12.83 ಕೋಟಿ ರೂ.ಗಳಿಂದ 10.60% ಹೆಚ್ಚಳಕ್ಕೆ ಸಾಕ್ಷಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:00 am, Mon, 5 August 24