ಕಟ್ಟೆ ಒಡೆದು ಭಗವಾಧ್ವಜ ಕೆಳಗೆ ಬೀಳಿಸಿ ದುಷ್ಕೃತ್ಯ; ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ ಬಿಜೆಪಿ ಶಾಸಕ ಹರೀಶ್ ಪೂಂಜಾ
ಕಟ್ಟೆಯನ್ನು ಹಾನಿಗೈದು ಕಂಬ ಹಾಗೂ ಭಗವಾಧ್ವಜವನ್ನು ಕೆಳಕ್ಕುರುಳಿಸಿ ಕೃತ್ಯ ಮೇರೆದಿದ್ದು, ಭಗವಧ್ವಜ ಹಾನಿಗೈದವರಿಗೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು: ಕಟ್ಟೆ ಒಡೆದು ಭಗವಾಧ್ವಜ (Bagavadwaj) ವನ್ನು ಕೆಳಗೆ ಬೀಳಿಸಿ ಕಿಡಿಗೇಡಿಗಳು ದುಷ್ಕೃತ್ಯ ಎಸಗಿರುವಂತ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಉಪ್ಪಾರಪಳಿಕೆ ಎಂಬಲ್ಲಿ ನಡೆದಿದೆ. ಇತ್ತೀಚೆಗೆ ಸ್ಥಳೀಯ ಹಿಂದೂ ಯುವಕರು ಸೇರಿಕೊಂಡು ಕಟ್ಟೆ ನಿರ್ಮಿಸಿ ಕೇಸರಿ ಧ್ವಜವನ್ನು ಪ್ರತಿಷ್ಠಾಪಿಸಿದ್ದರು. ಕಟ್ಟೆಯನ್ನು ಹಾನಿಗೈದು ಕಂಬ ಹಾಗೂ ಭಗವಾಧ್ವಜವನ್ನು ಕೆಳಕ್ಕುರುಳಿಸಿ ಕೃತ್ಯ ಮೇರೆದಿದ್ದು, ಭಗವಧ್ವಜ ಹಾನಿಗೈದವರಿಗೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಎಚ್ಚರಿಕೆ ನೀಡಿದ್ದಾರೆ.
ಲವ್ ಜಿಹಾದ್ ಬದಲು ಲವ್ ಕೇಸರಿ ವಿವಾದ ಪ್ರಕರಣ; ಇಬ್ಬರನ್ನು ಬಂಧಿಸಿದ ಪೊಲೀಸ್:
ರಾಯಚೂರು: ನಗರದಲ್ಲಿ ಲವ್ ಕೇಸರಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರಿನ ಪಶ್ಚಿಮ ಠಾಣೆ ಪೊಲೀಸರಿಂದ ಇಬ್ಬರ ಬಂಧನ ಮಾಡಲಾಗಿದೆ. ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಾವಿ ಹಾಗೂ ಜಿಲ್ಲಾ ಸಂಚಾಲಕ ರಾಜಾಚಂದ್ರ ರಾಮನಗೌಡ ಬಂಧಿತರು. ಏಪ್ರಿಲ್ 10 ರಂದು ನಡೆದಿದ್ದ, ಶ್ರೀರಾಮನವಮಿಯಂದು ಶ್ರೀರಾಮಸೇನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದು, ಲವ್ ಜಿಹಾದ್ ಬದಲು ಲವ್ ಕೇಸರಿ ಟ್ರೆಂಡ್ಗೆ ಕರೆ ನೀಡಲಾಗಿತ್ತು. ಹಿಂದುಗಳ ಮೇಲೆ ದಾಳಿ ಮಾಡಿದವರನ್ನ ಕೊಚ್ಚಿ ಹಾಕಿ ನಾವೀದ್ದೀವಿ ಎಂದಿದ್ದ ರಾಜಾಚಂದ್ರ, ಇದೇ ವೇಳೆ ವೇದಿಕೆ ಮೇಲೆ ಖಡ್ಗ ಪ್ರದರ್ಶಿಸದ್ದರು.
ಲವ್ ಜಿಹಾದ್ ಬದಲಿಗೆ ಲವ್ ಕೇಸರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ರಾಜಾಚಂದ್ರ ರಾಮನಗೌಡ, ಮಂಜುನಾಥ್ ಎಂಬವರ ವಿರುದ್ಧ FIR ದಾಖಲು ಮಾಡಲಾಗಿದೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ. ಶ್ರೀರಾಮಸೇನೆ ಸಂಚಾಲಕ ರಾಜಾಚಂದ್ರ ರಾಮನಗೌಡ ಹಾಗೂ ಶ್ರೀರಾಮಸೇನೆ ರಾಯಚೂರು ಜಿಲ್ಲಾಧ್ಯಕ್ಷ ಮಂಜುನಾಥ್ ಎಂಬವರು ರಾಮನವಮಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಅನ್ಯ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆ ಆರೋಪದಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್ 153, 153(A), 295(A)ರ ಅಡಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ;
ಪಂಚಮಸಾಲಿ 2ಎ ಮೀಸಲಾತಿ: ಮುಗಿದ ಗಡುವು, ಮತ್ತೆ ಹೋರಾಟ, ಏ 21ರಿಂದ ಧರಣಿ -ಮೃತ್ಯುಂಜಯ ಸ್ವಾಮೀಜಿ ಘೋಷಣೆ