Tv9 impact: ಫ್ರೀಡಂ ಕಮ್ಯುನಿಟಿ ಹಾಲ್ ಸೀಜ್ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶ
ಫ್ರೀಡಂ ಕಮ್ಯುನಿಟಿ ಹಾಲ್ ಸೀಜ್ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಮಂಗಳೂರು: ಫ್ರೀಡಂ ಕಮ್ಯುನಿಟಿ ಹಾಲ್ ಸೀಜ್ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕೃತ ಆದೇಶ ಹೊರಡಿಸಿದ್ದಾರೆ. ಬಂಟ್ವಾಳ ತಾಲೂಕಿನ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯುನಿಟಿ ಹಾಲ್ ಸೀಜ್ ಮಾಡಲು ವಿಟ್ಲ ಉಪ ತಹಶೀಲ್ದಾರ್ಗೆ ಸೂಚನೆ ನೀಡಲಾಗಿದೆ. ನಿನ್ನೆ ಫ್ರೀಡಂ ಕಮ್ಯುನಿಟಿ ಹಾಲ್ನಲ್ಲಿ ಟೆರರ್ ಟ್ರೈನಿಂಗ್ ಬಗ್ಗೆ ಟಿವಿ9 ಸುದ್ದಿ ಬ್ರೇಕ್ ಮಾಡಿತ್ತು. ಪಿಎಫ್ಐ ಉಗ್ರ ತರಬೇತಿಯ ಆಳ ಅಗಲದ ಬಗ್ಗೆ ವಿಸ್ತೃತ ವರದಿ ಪ್ರಸಾರವಾಗಿತ್ತು. ಈ ಹಿನ್ನಲೆ ಆರೋಪಿ ಅಯುಬ್ ಅಗ್ನಾಡಿ ಸ್ಥಳ ಮಹಜರು ಮಾಡಿದ್ದರು. ಇಂದು ಇಡೀ ಕಮ್ಯುನಿಟಿ ಹಾಲ್ಗೆ ಬೀಗ ಬೀಳೊ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಟಿವಿ9 ವರದಿ ಬಳಿಕ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚೆತ್ತುಗೊಂಡಿದೆ.
ಪಿಎಫ್ಐ ಬೇರಿನ ಆಳ ಅಗಲ
ಕರಾವಳಿಯಲ್ಲಿ ಪಿಎಫ್ಐ ಬೇರಿನ ಆಳ ಅಗಲ. ಫ್ರೀಡಂ ಕಮ್ಯುನಿಟಿ ಹಾಲ್ ಅದೆಷ್ಟು ನಿಗೂಡ ಎಂದರೆ, ಸ್ಥಳೀಯ ಪೊಲೀಸರಿಗೂ ಅದರ ಒಳಗೆ ಎಂಟ್ರಿ ಇರಲಿಲ್ಲ. ಮೆಸ್ಕಾಂನವರಿಗೂ ಅಲ್ಲಿ ಪ್ರವೇಶ ಇರಲಿಲ್ಲ. ಸ್ಥಳೀಯರು ಯಾರು ಕೂಡ ಅದರ ಒಳಗೆ ಹೋಗೋ ಹಾಗಿರಲಿಲ್ಲ. ಒಂದು ವರ್ಷದ ಹಿಂದೆ ಕೇಸ್ ಒಂದರ ವಿಚಾರದಲ್ಲಿ ವಿಟ್ಲ ಪೊಲೀಸರು ಹೋಗಿದ್ದರು. ಅವರನ್ನು ಒಳಗೆ ಬಿಡದೆ ಡಿಜಿಪಿ ಜೊತೆ ಟ್ರಸ್ಟ್ ಶಿಪಾರಸ್ಸು ಮಾಡಿಸಿಕೊಂಡಿತ್ತು. ಟಿವಿ9 ಗೆ ಎನ್ಐಎ ಉನ್ನತ ಮೂಲಗಳಿಂದ ಮಾಹಿತಿ.
ಟ್ರೈನಿಂಗ್ ಹೇಗೆ ನಡೀತಾ ಇತ್ತು ಗೊತ್ತಾ!
ಫ್ರೀಡಂ ಕಮ್ಯುನಿಟಿ ಹಾಲ್ನಲ್ಲಿ ಟ್ರೈನಿಂಗ್ ಹೇಗೆ ನಡೀತಾ ಇತ್ತು ಎಂದರೆ, ಒಂದು ಬ್ಯಾಚ್ನಲ್ಲಿ ಸೀನಿಯರ್ಸ್ ಮತ್ತು ಜೂನಿಯರ್ಸ್ ಇರುತ್ತಿದ್ದರು. ಟ್ರೈನಿಂಗ್ಗೆ ಬರುವವರು ಮೊಬೈಲ್, ಐಡಿ ಕಾರ್ಡ್ ಸೇರಿ ಯಾವುದೇ ದಾಖಲೆ ತರೋ ಹಾಗಿಲ್ಲ. ತಮ್ಮ ವಾಹನಗಳನ್ನು ತರದೇ ಬಸ್ನಲ್ಲೇ ಬರಬೇಕಿತ್ತು. ಒಂದು ಟ್ರೈನಿಂಗ್ 3-4 ದಿನ ನಡೆಯುತ್ತಾ ಇತ್ತು. ಹಾಲ್ನ ಕಳಭಾಗದಲ್ಲಿ ಜೂನಿಯರ್ಸ್, ಹಾಲ್ನ ಮೇಲ್ಭಾಗದಲ್ಲಿ ಸೀನಿಯರ್ಸ್ಗೆ ಟ್ರೈನಿಂಗ್ ಮಾಡಲಾಗುತ್ತಿತ್ತು ಎಂದು ಟಿವಿ9 ಗೆ ಎನ್ಐಎ ಉನ್ನತ ಮೂಲಗಳಿಂದ ಮಾಹಿತಿ ನೀಡಲಾಗಿದೆ.
ರಾಜ್ಯಾದ್ಯಂತ 110 ಪಿಎಫ್ಐ ಮುಖಂಡರು, 42 ಕಡೆ ಕಚೇರಿಗಳಿಗೆ ಬೀಗ
ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹಿನ್ನೆಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ನಿಷೇಧ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮುಂದಿನ ಐದು ವರ್ಷ ಪಿಎಫ್ಐ ಬ್ಯಾನ್ ಮಾಡಿ ಕೇಂದ್ರ ಗೃಹ ಸಚಿವಾಲಯ ಆದೇಶಿದೆ. ಈ ಹಿನ್ನೆಲೆಯಲ್ಲಿ ಇತ್ತ ಕರ್ನಾಟಕದಲ್ಲಿ ಪಿಎಫ್ಐ ಮುಖಂಡರನ್ನು ಬಂಧಿಸಿ, ಕಚೇರಿಗಳಿಗೆ ಬೀಗ ಹಾಕಲಾಗಿದೆ. ಹಾಗಾದ್ರೆ, ರಾಜ್ಯದಲ್ಲಿ ಇದುವರೆಗೆ ಎಷ್ಟು ಪಿಎಫ್ಐ ನಾಯಕರನ್ನು ಅರೆಸ್ಟ್ ಮಾಡಲಾಗಿದೆ? ಎಷ್ಟು ಕಚೇರಿಗಳಿಗೆ ಪೊಲೀಸರು ಬೀಗ ಹಾಕಿದ್ದಾರೆ? ಎಂದು ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅಧಿಕೃತ ಅಂಕಿ-ಅಂಶಗಳನ್ನ ನೀಡಿದ್ದಾರೆ.
ತುಮಕೂರಿನಲ್ಲಿ ನಿನ್ನೆ(ಸೆಪ್ಟೆಂಬರ್.30) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಈವರೆಗೆ 110 ಪಿಎಫ್ ಐ ಮುಖಂಡರನ್ನ ಬಂಧಿಸಲಾಗಿದೆ. 42 ಕಡೆ ಪಿಎಫ್ ಐ ಕಚೇರಿಗಳಿಗೆ ಬೀಗ ಮುದ್ರೆ ಹಾಕಲಾಗಿದ್ದು, ಕಚೇರಿಗಳಲ್ಲಿ ಲ್ಯಾಪ್ ಟಾಪ್ ಸೇರಿದಂತೆ ಇತರೆ ವಸ್ತುಗಳನ್ನ ವಶ ಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ. ಅವರ(ಪಿಎಫ್ಐ ಮುಖಂಡರ) ವೈಯಕ್ತಿಕ ಅಕೌಂಟ್ ಗಳ ಬಗ್ಗೆ ಇಡಿ ಮತ್ತು ಎನ್ಐಎ ನೋಡುತ್ತಿದೆ. ಇಂದು ಬಂಟ್ವಾಳದಲ್ಲಿ ಪಿಎಫ್ಐ ಟ್ರೈನಿಂಗ್ ನೀಡುತ್ತಿದ್ದ ಕಟ್ಟಡವನ್ನ ಸೀಜ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:44 am, Sat, 1 October 22