ಉಪ್ಪಿನಂಗಡಿ ಪದವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಸುಖಾಂತ್ಯ: ಹಿಜಾಬ್ ತೆಗೆದಿಟ್ಟು ತರಗತಿಗೆ ಹಾಜರಾದ 46 ವಿದ್ಯಾರ್ಥಿನಿಯರು

| Updated By: ಗಂಗಾಧರ​ ಬ. ಸಾಬೋಜಿ

Updated on: Jun 09, 2022 | 11:08 AM

ಕಳೆದ ಎರಡು ವಾರಗಳಿಂದ ಉಪ್ಪಿನಂಗಡಿ ಕಾಲೇಜು ವಿವಾದದ ಕೇಂದ್ರವಾಗಿದ್ದು, ಸದ್ಯ ಹಿಜಾಬ್​ ವಿವಾದ ಸುಖಾಂತ್ಯ ಕಂಡಿದೆ. ಹಿಜಾಬ್ ಹಠ ಬಿಟ್ಟು 46 ವಿದ್ಯಾರ್ಥಿನಿಯರು ಶಿಕ್ಷಣದತ್ತ ಮನಸ್ಸು ಮಾಡಿದ್ದಾರೆ.

ಉಪ್ಪಿನಂಗಡಿ ಪದವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಸುಖಾಂತ್ಯ: ಹಿಜಾಬ್ ತೆಗೆದಿಟ್ಟು ತರಗತಿಗೆ ಹಾಜರಾದ 46 ವಿದ್ಯಾರ್ಥಿನಿಯರು
ಉಪ್ಪಿನಂಗಡಿ ಪದವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಸುಖಾಂತ್ಯ
Follow us on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪದವಿ ಕಾಲೇಜಿನಲ್ಲಿ ಹಿಜಾಬ್ (Hijab) ವಿವಾದ ಸುಖಾಂತ್ಯ ಕಂಡಿದ್ದು, ಹಿಜಾಬ್ ವಿದ್ಯಾರ್ಥಿನಿಯರು ಕೊನೆಗೂ ಪಟ್ಟು ಸಡಿಲಿಸಿದ್ದಾರೆ. ಹಿಜಾಬ್ ತೆಗೆದಿಟ್ಟು 46 ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದಾರೆ. ವಾರದ ಹಿಂದೆ ಅಮಾನತ್ತಾಗಿದ್ದ 6 ವಿದ್ಯಾರ್ಥಿಗಳೂ ಹಿಜಾಬ್ ಕಳಚಿ ತರಗತಿಗೆ ಹಾಜರಾಗಿದ್ದು, ಸದ್ಯ ಒಂದು ವಾರ ತರಗತಿ 24 ವಿದ್ಯಾರ್ಥಿನಿಯರು ನಿರ್ಬಂಧಕ್ಕೆ ಒಳಗಾಗಿದ್ದು, ಅವಧಿ ಮುಗಿದ ಬಳಿಕ ಸೋಮವಾರ ತರಗತಿಗೆ ಹಾಜರಾಗುವ ಸಾಧ್ಯತೆಯಿದೆ. ಸದ್ಯ ಹಿಜಾಬ್ ಹಠ ಬಿಟ್ಟು 46 ವಿದ್ಯಾರ್ಥಿನಿಯರು ಶಿಕ್ಷಣದತ್ತ ಮನಸ್ಸು ಮಾಡಿದ್ದಾರೆ. ಕಾಲೇಜು ಆಡಳಿತದಿಂದ ವಿದ್ಯಾರ್ಥಿಗಳ ಸಸ್ಪೆಂಡ್ ನಿರ್ಣಯದ ಬೆನ್ನಲ್ಲೇ ವಿದ್ಯಾರ್ಥಿನಿಯರು ಎಚ್ಚೆತ್ತುಕೊಂಡಿದ್ದಾರೆ. ಕಾಲೇಜಿನಿಂದ ಟಿಸಿ ಕೊಡುವ ಮುನ್ನ ವಿದ್ಯಾರ್ಥಿನಿಯರು ಪಟ್ಟು ಸಡಿಲಿಸಿದ್ದು, ಕಾಲೇಜು ಆಡಳಿತದ ಖಡಕ್ ‌ಕ್ರಮದ ಸೂಚನೆ ಬೆನ್ನಲ್ಲೇ ಪರಿಸ್ಥಿತಿ ಶಾಂತವಾಗಿದೆ. ಕಳೆದ ಎರಡು ವಾರಗಳಿಂದ ಉಪ್ಪಿನಂಗಡಿ ಕಾಲೇಜು ವಿವಾದದ ಕೇಂದ್ರವಾಗಿದ್ದು, ಪತ್ರಕರ್ತರ ಮೇಲೂ  ಹಿಜಾಬ್ ವಿದ್ಯಾರ್ಥಿನಿಯರು ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: ಕುರಾನ್​ಗೆ ಅವಮಾನ: ಅಫ್ಘಾನ್ ಮಾಡೆಲ್ ಹಖಿಕಿಯನ್ನು ಬಂಧಿಸಿದ ತಾಲಿಬಾನ್

ಈಗಾಗಲೇ ಹಿಜಾಬ್  ಧರಿಸಿ ಶಾಲಾ- ಕಾಲೇಜಿಗೆ ಆಗಮಿಸುವಂತಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಆದರೂ ಮುಸ್ಲಿಂ  ಸಮುದಾಯದ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜುಗಳಿಗೆ ಆಗಮಿಸಿದ್ದರು. ಹೀಗೆ ಸತತ ಸೂಚನೆ ಬಳಿಕವೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹಿಜಾಬ್ ಧರಿಸಿ ಬರುತ್ತಿದ್ದ ಆರು ವಿದ್ಯಾರ್ಥಿನಿಯರನ್ನು ಉಪನ್ಯಾಸಕರ ಸಭೆಯಲ್ಲಿ ಒಮ್ಮತದ ನಿರ್ಧಾರದ ಬಳಿಕ ಅಮಾನತು ಮಾಡಲಾಗಿತ್ತು.

24 ವಿದ್ಯಾರ್ಥಿನಿಯರಿಗೆ 1 ವಾರ ತರಗತಿಗೆ ಬಾರದಂತೆ ನಿರ್ಬಂಧ 

ಹಿಜಾಬ್​ಗೆ ಪಟ್ಟು ಹಿಡಿದಿದ್ದ 24 ವಿದ್ಯಾರ್ಥಿನಿಯರಿಗೆ 1 ವಾರ ತರಗತಿಗೆ ಬಾರದಂತೆ ಕಾಲೇಜು ನಿರ್ಬಂಧ ಹೇರಿದೆ. ಕಾಲೇಜು ಅಭಿವೃದ್ಧಿ ಸಮಿತಿ ನಿರ್ಣಯದಂತೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ 7 ವಿದ್ಯಾರ್ಥಿನಿಯರ ಅಮಾನತುಗೊಂಡಿದ್ದರು. ಸುದ್ದಿ ಮಾಡಲು ತೆರಳಿದ್ದ ಮಾಧ್ಯಮದವರ ಮೇಲೂ ಹಲ್ಲೆ ನಡೆಸಿದ್ದರು. ಮೂವರ ಮೇಲೆ ಹಲ್ಲೆ ಮಾಡಿ ವಿದ್ಯಾರ್ಥಿನಿ ದೂರು ನೀಡಿದ್ದಳು. ದೂರು ಹಿನ್ನೆಲೆ ಉಪ್ಪಿನಂಗಡಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.

ರಾಜದ್ಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.