ರಥಸಪ್ತಮಿ ಪ್ರಯುಕ್ತ ವೆಂಕಟರಮಣ ದೇವರ ರಥೋತ್ಸವ: ರಂಗು ರಂಗಿನ ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನ

ಅಲ್ಲಿದ್ದವ್ರರಿಗೆ ಗಂಡು ಹೆಣ್ಣು ಅನ್ನೋ ಭೇದ ಇಲ್ಲ. ಮಾತ್ರವಲ್ಲ ಮಕ್ಕಳು ವೃದ್ದರೂ ಅನ್ನೋ ತಾರತಮ್ಯವೂ ಇರಲ್ಲ. ಅವರೆಲ್ಲರೂ ಒಟ್ಟಾಗಿ ಬಣ್ಣದ ನೀರನ್ನ ಒಬ್ಬರಿಗೊಬ್ಬರು ಎರಚಿ ಕುಣಿುಯುತ್ತಾ ಮಸ್ತ್ ಮಜಾ ಮಾಡಿದ್ರು.

ರಥಸಪ್ತಮಿ ಪ್ರಯುಕ್ತ ವೆಂಕಟರಮಣ ದೇವರ ರಥೋತ್ಸವ: ರಂಗು ರಂಗಿನ ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನ
ಬಣ್ಣದೋಕುಳಿಯಲ್ಲಿ ಮಿಂದೆದ್ದ ಜನ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jan 29, 2023 | 7:08 PM

ಮಂಗಳೂರು: ಅಲ್ಲಿದ್ದವ್ರರಿಗೆ ಗಂಡು ಹೆಣ್ಣು ಅನ್ನೋ ಭೇದ ಇಲ್ಲ. ಮಾತ್ರವಲ್ಲ ಮಕ್ಕಳು ವೃದ್ದರೂ ಅನ್ನೋ ತಾರತಮ್ಯವೂ ಇರಲ್ಲ. ಅವರೆಲ್ಲರೂ ಒಟ್ಟಾಗಿ ಬಣ್ಣದ ನೀರನ್ನ ಒಬ್ಬರಿಗೊಬ್ಬರು ಎರಚಿ ಕುಣಿುಯುತ್ತಾ ಮಸ್ತ್ ಮಜಾ ಮಾಡಿದ್ರು. ತಮ್ಮ ಪಕ್ಕದಲ್ಲಿ ಯಾರೇ ಇದ್ರೂ ಅವರನ್ನ ಬಣ್ಣದಲ್ಲಿ ಮುಳುಗಿಸ್ತಾ ಆ ಜನ್ರು ಈ ರೀತಿ ಸಂಭ್ರಮ ಪಟ್ಟಿದ್ದು ಯಾಕೆ ಗೊತ್ತಾ. ರಥಸಪ್ತಮಿ ಪ್ರಯುಕ್ತ ತಮ್ಮ ಇಷ್ಟದೇವರಾದ ವೆಂಕಟ್ರಮಣನನ್ನು (Venkataramana Deva Rathotsava) ಆನಂದ ಪಡಿಸಿ ಅವನ ಕೃಪೆಗೆ ಪಾತ್ರರಾಗಲು. ರಥಸಪ್ತಮಿಯ ಪ್ರಯುಕ್ತ ಕಳೆದ ನಾಲ್ಕು ದಿನಗಳಿಂದ ಮಂಗಳೂರಿನಲ್ಲಿ ನಡೆಯುತ್ತಿರುವ ವೆಂಕಟರಮಣ ದೇವರ ಉತ್ಸವದಲ್ಲಿ ಇಂದು ಕಲರ್ ಫುಲ್ ವಾತಾವರಣ ಸೃಷ್ಟಿಯಾಗಿತ್ತು. ಹೌದು ಇವತ್ತು ಮಂಗಳೂರಿನ ರಥಬೀದಿಯಲ್ಲಿ ಸಂಪೂರ್ಣ ಹಬ್ಬದ ವಾತಾವರಣ ಮನೆ ಮಾಡಿತ್ತು. ಗೌಡ ಸಾರಸತ್ವ ಬ್ರಾಹ್ಮಣ ಸಮಾಜಕ್ಕೆ ಸೇರಿರೋ ಕಾರ್​​ ಸ್ಟ್ರೀಟ್​ ವೆಂಕಟ್ರಮಣ ದೇವಸ್ಥಾನದಲ್ಲಿ ನಿನ್ನೆ ನಡೆದಿದ್ದ ರಥೋತ್ಸವಕ್ಕೆ ನಡೆದ ಓಕುಳಿ ಆಟ ಇದಾಗಿತ್ತು. ನಿನ್ನೆ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ವೆಂಕಟ್ರಮಣ ದೇವರನ್ನ ರಥದಲ್ಲಿ ಕುರಿಸಿ ರಥೋತ್ಸವ ಸೇವೆ ನೀಡಿದ್ರು.

ಬಣ್ಣದ ಆಟದಲ್ಲೇ ಮುಳುಗಿ ಭಕ್ತರು ಫುಲ್​ ಎಂಜಾಯ್

ಇವತ್ತು ಈ ದೇವರ ಅವಭೃತ ಸ್ನಾನ ನಡೆದು ಆ ಬಳಿಕ ದೇವರು ಗರ್ಭಗುಡಿಯನ್ನ ಸೇರಲಿದ್ದಾರೆ. ಹೀಗಾಗಿ ದೇವರ ಈ ಸ್ನಾನವನ್ನ ಬಣ್ಣದ ಹಬ್ಬವನ್ನಾಗಿ ಆಚರಿಸುವ ಮೂಲಕ ಮುಂಜಾನೆಯಿಂದ ಸಂಜೆಯವರೆಗೂ ಎಲ್ಲಾ ಭಕ್ತರೂ ಈ ರೀತಿ ಬಣ್ಣದ ಆಟದಲ್ಲೇ ಮುಳುಗಿ ಫುಲ್​ ಎಂಜಾಯ್​ ಮಾಡ್ತಾರೆ. ವಾದ್ಯಕ್ಕೆ ಸ್ಟೆಪ್ ಹಾಕುತ್ತಾ ಕುಣಿದು ಕುಪ್ಪಳಿಸಿದ್ರು. ಹೆಣ್ಮಕ್ಕಳು, ಯುವಕರು ಸೇರಿದಂತೆ ಹಿರಿಯರು ಕೂಡ ಓಕುಳಿ ಆಟದಲ್ಲಿ ಮಿಂದೆದ್ದು ಸಖತ್ ಎಂಜಾಯ್ ಮಾಡಿದ್ರು.

ಇದನ್ನೂ ಓದಿ: ದಕ್ಷಿಣ ಕನ್ನಡ: ತುಳುನಾಡಿನ ಜಾನಪದೀಯ ಕ್ರೀಡೆ ಕಂಬಳಕ್ಕೆ ಮತ್ತೆ ನಿಷೇಧದ ತೂಗುಕತ್ತಿ, ಜಿಲ್ಲಾ ಪಶುಸಂಗೋಪನಾ ಇಲಾಖೆಯಿಂದ ನೋಟಿಸ್

ವೆಂಕಟ್ರಮಣ ದೇವರ ರಥೋತ್ಸವ

ವೆಂಕಟ್ರಮಣ ದೇವರ ರಥೋತ್ಸವ ಅಂದ್ರೆ ಅದು ಪರವೂರಲ್ಲಿ ಇದ್ದ ಸಮಾಜ ಬಾಂಧವರು ಕೂಡಾ ಆಗಮಿಸಿ ಪಾಲ್ಗೊಳ್ತಾರೆ. ಹೀಗಾಗಿ ವರ್ಷಕ್ಕೊಮ್ಮೆ ತಮ್ಮ ಆತ್ಮೀಯರನ್ನ ಭೇಟಿಯಾಗೋ ಒಂದು ಸದಾವಕಾಶವೂ ಸಿಕ್ಕಂತಾಗೊತ್ತೆ. ಅದೇ ವೇಳೆ ನಡೆಯೋ ಈ ಓಕುಳಿ ಹಬ್ಬ ವರ್ಷಕ್ಕೊಮ್ಮೆ ಆತ್ಮೀಯರು ಹಾಗೂ ತಮ್ಮ ಕುಟುಂಬ ಸದಸ್ಯರೊಂದಿಗೆ ಎಂಜಾಯ್ ಮಾಡೋಕ್ಕೂ ಒಂದು ಅವಕಾಶ. ಹೀಗಾಗಿ ರಥೋತ್ಸವನ್ನ ಮಿಸ್ ಮಾಡಿಕೊಂಡ್ರೂ ಈ ಓಕುಳಿ ಹಬ್ಬವನ್ನ ಹಲವರು ಮಿಸ್​ ಮಾಡಿಕೊಳ್ಳೋದಿಲ್ಲ.

ಇತ್ತೀಚಿನ ದಿನಗಳಲ್ಲಿ ಬಾರಿ ಫೇಮಸ್ ಆದ ಓಕುಳಿ 

ಮುಂಜಾನೆಯಿಂದ ಸಂಜೆ ದೇವರ ಅವಭೃತ ಸ್ನಾನ ನಡೆಯೋವರೆಗೂ ಈ ರೀತಿ ಬಣ್ಣದ ಎರಚಾಟ, ಹಾಡು, ಕುಣಿತ ನಿರಂತರವಾಗಿ ಸಾಗುತ್ತೆ. ಯಾವುದೇ ಭೇದಭಾವ ಇಲ್ಲದೆ ಎಲ್ಲರೂ ಒಟ್ಟಾಗಿ ಆಚರಿಸೋ ಈ ಓಕುಳಿ ಹಬ್ಬ ಒಗ್ಗಟ್ಟಿನ ಸಂಕೇತ ಕೂಡಾ ಆಗಿದೆ. ದೇವರನ್ನ ಸಂತೋಷ ಪಡಿಸಬೇಕು ಅನ್ನೋ ಕಾರಣಕ್ಕೆ ಎಲ್ಲರೂ ಸಂತೋಷದಿಂದ ಬಣ್ಣ ಎರಚಾಡಿ ಖುಷಿ ಪಡೋ ಈ ಓಕುಳಿ ಇತ್ತೀಚಿನ ದಿನಗಳಲ್ಲಿ ಬಾರಿ ಫೇಮಸ್​. ಹೀಗಾಗಿ ಪರವೂರಿನ ಜನರೂ ಕೂಡಾ ಈ ಹಬ್ಬದಲ್ಲಿ ಪಾಲ್ಗೊಳ್ಳೊದಿಕ್ಕೆ ಅಂತಾನೆ ಆಗಮಿಸ್ತಾರೆ. ಅದ್ರಲ್ಲೂ ಹೆಣ್ಮಕ್ಕಳು, ಹುಡುಗ್ರ ಜೊತೆ ಸೇರಿಕೊಂಡು ಒಂದೇ ಮನೆಯ ಮಕ್ಕಳಂತೆ ರಥಬೀದಿಯ ಗಲ್ಲಿಗಲ್ಲಿಗಳಲ್ಲೂ ಸಂಭ್ರಮಿಸೋದನ್ನ ಕಣ್ತುಂಬಿಕೊಳ್ಳೋದೇ ಚೆಂದ.

ಇದನ್ನೂ ಓದಿ: Daiva Narthakas: ದೈವ ನರ್ತಕರಿಗೆ ಸೌಲಭ್ಯ ಘೋಷಣೆಯಾಗಿ 2 ತಿಂಗಳಾದರೂ ಅನುಷ್ಠಾನಕ್ಕೆ ಗೈಡ್​ಲೈನ್ಸ್ ಪ್ರಕಟವಾಗಿಲ್ಲ

ಗೌಡ ಸಾರಸ್ವತ ಬ್ರಾಹ್ಮಣ( ಜಿಎಸ್​ಬಿ) ಸಮಾಜದ ರಥೋತ್ಸವ ಅಂದ್ರೆ ಅದು ಅದ್ದೂರಿ ಹಾಗೂ ಆಡಂಭರದಿಂದ ಕೂಡಿರುತ್ತೆ. ಅದೇ ರೀತಿ ಈ ಓಕುಳಿ ಕೂಡಾ ಬಹಳಷ್ಟು ಕಲರ್​ಫುಲ್ ಆಗಿದ್ದು, ನೋಡುಗೂ ಬಹಳಷ್ಟು ಖುಷಿ ನೀಡುತ್ತೆ. ಅಸಲಿಗೆ ಈ ಓಕಳಿಯಲ್ಲಿ ಗುಲಾಬಿ ಬಣ್ಣ ಮಾತ್ರ ಬಳಸಬೇಕು ಅನ್ನೋ ನಿಯಮ ಇದ್ರೂ ಈಗ ಹಲವು ಬಣ್ಣಗಳು ಬಳಕೆಯಾಗ್ತಾ ಇದೆ. ಆದೇನೆ ಇದ್ರು ಎಲ್ಲರೂ ಎಂಜಾಯ್ ಮಾಡಿದ್ದಂತು ಸತ್ಯ.

ವರದಿ: ಪೃಥ್ವಿರಾಜ್ ಬೊಮ್ಮನಕೆರೆ, ಟಿವಿ9, ಮಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:07 pm, Sun, 29 January 23

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ